ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಕಲಬುರಗಿಯ ಅಪ್ರಾಪ್ತ ಬಾಲಕಿ
ಕಲಬುರಗಿ, ಮೇ 27: ಕಲಬುರಗಿ ಜಲ್ಲೆಯ ಕ್ವಾರಂಟೈನ್ ಕೇಂದ್ರವೊಂದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾರೆ.
Recommended Video
ಸದ್ಯ, ಕಲಬುರಗಿ ಶಹಬಾದ್ ಸಮುದಾಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಶಹಬಾದ್ ತಹಶೀಲ್ದಾರ್ ಸುರೇಶ್ ವರ್ಮಾ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ತನ್ನ ಪೋಷಕರ ಜೊತೆಗೆ ಬಾಲಕಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸೋಮನಹಳ್ಳಿ ಗ್ರಾಮದಿಂದ ಕಲಬುರಗಿಗೆ ಬಂದಿದ್ದರು. ಅಂತರರಾಜ್ಯ ಪ್ರಯಾಣ ಆಗಿರುವ ಕಾರಣ, ಅದರಲ್ಲಿಯೂ ಮಹಾರಾಷ್ಟ್ರದಿಂದ ಬಂದ ಕಾರಣ ಇವರನ್ನು ಕ್ವಾರೈಂಟೈನ್‌ನಲ್ಲಿ ಇಡಲಾಗಿತ್ತು.

ಶಹಾಬಾದ್ ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಾಲಕಿಗೆ ನಿನ್ನೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಂತರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಇತರ ಮಹಿಳೆಯರು ಅವರ ಸಹಾಯಕ್ಕೆ ಬಂದಿದ್ದು, ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಅಂದಹಾಗೆ, ಕಲಬುರಗಿಯಲ್ಲಿ ಈವರೆಗೆ 185 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇಂದು 28 ಹೊಸ ಪ್ರಕರಣಗಳು ಪತ್ತೆಯಾಗಿವೆ. 7 ಮಂದಿ ಕೊರೊನಾ ವೈರಸ್‌ನಿಂದ ಮರಣ ಹೊಂದಿದ್ದಾರೆ.












Click it and Unblock the Notifications