ದಲಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವೆಸಗಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ
ಕರೌಲಿ, ಮೇ 01: ದಲಿತ ಅಪ್ರಾಪ್ತೆ ಬಾಲಕಿಯನ್ನು ಕಿಡ್ನಾಪ್ ಮಾಡಿ ಬಸ್‌ನಲ್ಲಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆರೋಪಿ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರೌಲಿಯ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಶನಿವಾರ ಕಾಮುಕನ ವಿರುದ್ಧ ತೀರ್ಪು ನೀಡಿದ್ದಾರೆ.
ಆರೋಪಿ ನರೇಂದ್ರ ಸಿಂಗ್ ಅಲಿಯಾಸ್ ಭೀಮ ಎಂಬಾತ ಅಪ್ರಾಪ್ತೆಯನ್ನು ಅಪರಿಸಿಕೊಂಡು ಅವಳ ಮೇಲೆ ಅತ್ಯಾಚಾರ ಮಾಡಿದ್ದನು. ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ 30 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತದಲ್ಲಿ ಸಂತ್ರಸ್ತರಿಗೆ 1 ಲಕ್ಷ ರೂ. ಹಾಗೂ ಸರ್ಕಾರಿ ಖಜಾನೆಗೆ 30 ಸಾವಿರ ರೂ. ನೀಡಬೇಕೆಂದು ತೀರ್ಪು ನೀಡಿರುವ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರು ಕೇವಲ 13 ತಿಂಗಳ ಅವಧಿಯಲ್ಲಿ ಸಂತ್ರಸ್ತೆಯಾದ ಬಾಲಕಿಗೆ ನ್ಯಾಯ ಒದಗಿಸುವ ಮೂಲಕ ಅತ್ಯಾಚಾರಿಗಳಿಗೆ ನಿಜವಾದ ಸಂದೇಶ ನೀಡುವ ಮೂಲಕ ನ್ಯಾಯಾಲಯ ಮಾದರಿಯಾಗಿದೆ.
15 ವರ್ಷದ ಬಾಲಕಿ ತನ್ನ ಹಳೆಯ ಮನೆಯಿಂದ ತಮ್ಮ ಹೊಸ ಮನೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ವೇಳೆ ಆರೋಪಿ ನರೇಂದ್ರ ಸಿಂಗ್ ಅಲಿಯಾಸ್ ಭೀಮ ಮಾಳಿ ಎಂಬಾತನು ಮೂಲತಃ ಕೇಶ್ವಾಪುರ ಮತ್ತು ಹಾಲ್ ಎಂಐಎಸ್ ಶಾಲೆ ಬಳಿಯ ತೇಲಿಯ ಪನ್ಸೇರಿ ರಸ್ತೆಯ ನಿವಾಸಿಯಾದ್ದ ಇವನು ಅಪ್ರಾಪ್ತೆ ಬಾಲಕಿಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.

ಕಳೆದ ವರ್ಷ ಮಾರ್ಚ್ 13ರಂದು ಬಾಲಕಿ ತಂದೆ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾದ ಈ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದ ಪೋಲಿಸರು ಮೇ 25ರಂದು ಆರೋಪಿಯನ್ನು ಬಂಧಿಸಿದ್ದಾರೆ. ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಅಂದಿನಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ಈ ಆರೋಪಿಯನ್ನು ಶನಿವಾರ ಕರೌಲಿ ನ್ಯಾಯಾಲಯವು ವಿಚಾರಣೆಯ ಬಳಿಕ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.

ಪೊಲೀಸರು ಜೂನ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿದ ನಂತರ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ 16 ಸಾಕ್ಷಿಗಳು ಮತ್ತು 21 ದಾಖಲೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಪೋಕ್ಸೊ ನ್ಯಾಯಾಲಯದಲ್ಲಿ ಸುಮಾರು 10 ತಿಂಗಳ ಕಾಲ ನಡೆದ ಎರಡೂ ಕಡೆಯ ವಿಚಾರಣೆಯ ನಂತರ ವಿಶೇಷ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಶನಿವಾರ ಈ ಪ್ರಕರಣದ ತೀರ್ಪು ನೀಡಿದರು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ನರೇಂದ್ರ ಸಿಂಗ್ ಅಲಿಯಾಸ್ ಭೀಮ ಮಾಳಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ 30 ಸಾವಿರ ದಂಡ ವಿಧಿಸಿ ಶನಿವಾರ ಕೋರ್ಟ್ ತೀರ್ಪು ನೀಡಿತು.












Click it and Unblock the Notifications