ಅತ್ಯಾಚಾರ ಹೆಚ್ಚಾಗಲು ಟಿವಿ, ಮೊಬೈಲ್ ಕಾರಣ: ಕಾಂಗ್ರೆಸ್ ಸಚಿವ

ಜೈಪುರ, ಡಿಸೆಂಬರ್ 06: ಅತ್ಯಾಚಾರ ಹೆಚ್ಚಾಗಲು ಟಿವಿ ಮತ್ತು ಮೊಬೈಲ್ ಫೋನ್‌ಗಳು ಕಾರಣವೆಂದು ರಾಜಸ್ಥಾನ ಸರ್ಕಾರದ ಸಚಿವ ಬನ್ವರ್‌ಲಾಲ್ ಮೇಘವಾಲ್ ಹೇಳಿದ್ದಾರೆ.

ತೆಲಂಗಾಣ ಅತ್ಯಾಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬನ್ವರ್‌ಲಾಲ್, 'ಟಿವಿ, ಮೊಬೈಲ್‌ ಫೋನ್‌ಗಳು ಇಲ್ಲದ ಕಾಲದಲ್ಲಿ ಅತ್ಯಾಚಾರಗಳು ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ. ಬನ್ವರ್‌ಲಾಲ್ ಮೇಘವಾಲ್ ಅವರು ರಾಜಸ್ಥಾನ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದಾರೆ.

'ಟಿವಿ, ಮೊಬೈಲ್‌ಗಳಲ್ಲಿ ಪ್ರಚೋದನಕಾರಿ ದೃಶ್ಯಗಳನ್ನು, ಮಾಹಿತಿಗಳನ್ನು ನೋಡಿ ಜನರು ಅತ್ಯಾಚಾರಕ್ಕೆ ಇಳಿಯುತ್ತಿದ್ದಾರೆ' ಎಂದು ಹೇಳಿದ್ದಾರೆ.

TV, Mobiles Are The Reason For Rape: Congress Minister

'ಕೆಲವು ದೇಶಗಳಲ್ಲಿ ಅತ್ಯಾಚಾರಿಗಳ ಗುಪ್ತಾಂಗಗಳನ್ನು ಕತ್ತರಿಸಲಾಗುತ್ತದೆ, ಅಂತಹುದೇ ಕಾನೂನನ್ನು ಇಲ್ಲಿಯೂ ಜಾರಿ ಮಾಡಬೇಕು ಅದರಿಂದ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗುತ್ತವೆ' ಎಂದು ಬನ್ವರ್‌ಲಾಲ್ ಹೇಳಿದ್ದಾರೆ.

'ನಾನು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ, ಅತ್ಯಾಚಾರ ಪ್ರಕರಣಗಳಲ್ಲಿ ವಿಚಾರಣೆಯೂ ಮೂರು ತಿಂಗಳ ಒಳಗಾಗಿ ಮುಕ್ತಾಯವಾಗಿ, ಅಪರಾಧಿಗಳಿಗೆ ಶಿಕ್ಷೆ ಆಗುವಂತಾಗಬೇಕು' ಎಂದು ಬನ್ವರ್‌ಲಾಲ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+