ಮದುವೆ ದಿಬ್ಬಣದ ಮೇಲೆ ಹರಿದ ಟ್ರಕ್: 13 ಮಂದಿ ಸಾವು
ಜೈಪುರ, ಫೆಬ್ರವರಿ 19: ಮದುವೆ ದಿಬ್ಬಣವೊಂದರ ಮೇಲೆ ವೇಗವಾಗಿ ಬರುತ್ತಿದ್ದ ಲಾರಿಯೊಂದು ಹರಿದ ಪರಿಣಾಮ 13 ಜನ ಮೃತರಾದ ಹೃದಯವಿದ್ರಾವಕ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ರಾಜಸ್ಥಾನದ ಪ್ರತಾಪ್ ಘರ್-ಜೈಪುರ ಹೆದ್ದಾರಿ ಬಳಿಯ ಅಂಬಾವಲಿ ಎಂಬ ಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ಮದುವೆ ಸಂಭ್ರಮದ ಬದಲು ಇದೀಗ ದುಃಖ ಮಡುಗಟ್ಟಿದೆ.
ಹೆದ್ದಾರಿ ಪಕ್ಕದಲ್ಲೇ ಇದ್ದ ಈ ಊರಿನಲ್ಲಿ ಯಾವುದೇ ಮದುವೆ ಸಂಭ್ರಮದ ಮೆರವಣಿಗೆ ಹೆದ್ದಾರಿಯಲ್ಲೇ ನಡೆಯುತ್ತಿತ್ತು. ಹಾಗೆಯೇ ಸೋಮವಾರವೂ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಬಂದು ಡಿಕ್ಕಿ ಹೊಡೆದಿದ್ದು, 13 ಜನ ಮೃತರಾದರೆ 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಸಂಭವಿಸಿದ್ದ ಇಂಥದೇ ಘಟನೆಯಲ್ಲಿ ಬಿಹಾರದಲ್ಲಿ ಆರು ಜನ ಮೃತರಾಗಿದ್ದರು. ಈ ಘಟನೆಯಲ್ಲೂ ಮದುವೆ ಕಾರ್ಯ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಘಟನೆ ನಡೆದಿತ್ತು.












Click it and Unblock the Notifications