ಪಾಕ್ ನಾಗರಿಕರಿಗೆ 48 ಗಂಟೆಗಳ ಗಡುವು ಕೊಟ್ಟ ಜಿಲ್ಲಾಡಳಿತ!

ಬಿಕನೇರ್, ಫೆಬ್ರವರಿ 19: ಬಿಕನೇರ್‌ನ ಜಿಲ್ಲಾ ಗಡಿಯೊಳಗಿರುವ ಎಲ್ಲಾ ಪಾಕ್ ನಾಗರಿಕರು ಮುಂದಿನ 48ಗಂಟೆಯೊಳಗೆ ಜಿಲ್ಲೆ ಬಿಟ್ಟು ತೆರಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಪಾಲ್ ಗೌತಮ್ ಆದೇಶಿಸಿದ್ದಾರೆ.

ಐಪಿಸಿ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಬಿಕನೇರ್ ಪಾಕಿಸ್ತಾನದ ಗಡಿ ಭಾಗದಲ್ಲಿದೆ. ಹೀಗಾಗಿ ಪಾಕ್ ನಾಗರಿಕರು ಇಲ್ಲಿದ್ದರೆ ಆಂತರಿಕ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆದೇಶದನ್ವಯ ಬಿಕನೇರ್ ನಲ್ಲಿರುವ ಯಾವುದೇ ಧರ್ಮಶಾಲೆ, ಹೋಟೆಲ್ ಹಾಗೂ ಆಸ್ಪತ್ರೆಗಳಲ್ಲಿರುವ ಪಾಕ್ ನಾಗರಿಕರಿಗೂ ಈ ನಿಷೇಧ ಅನ್ವಯಿಸುತ್ತದೆ. ಬಿಕನೇರ್ ನ ಭಾರತೀಯರಿಗೂ ಕೆಲ ನಿರ್ಬಂಧಗಳನ್ನು ಹೇರಲಾಗಿದ್ದು, ಇದರ ಅನ್ವಯ ಇಲ್ಲಿನ ಯಾವೊಬ್ಬ ಭಾರತೀಯ ಪ್ರಜೆಯೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಕ್ ನಾಗರಿಕರೊಂದಿಗೆ ವ್ಯಾಪಾರ ಸಂಬಂಧ ಹಾಗೂ ಹಣಕಾಸು ವ್ವಹಾರ ಇಟ್ಟುಕೊಳ್ಳದಂತೆ ಆದೇಶಿಸಲಾಗಿದೆ.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ. 14 ರಂದು ಭಾರತೀಯ ಸೇನೆಯ CRPF ಯೋಧರ ಮೇಲಿನ ದಾಳಿಯ ಬಳಿಕ ಬಿಕನೇರ್ ನಲ್ಲಿ ಪಾಕ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಆದೇಶ ನೀಡಿದ್ದಾರೆ.

Pulwama Attack: DM Orders Pak Citizens to Leave Bikaner in 48 hours

ಬಿಕನೇರ್ ನಿವಾಸಿಗರಿಗೆ ಸೈನ್ಯದ ಕುರಿತಾಗಿ ಅನಾಮಿಕರೊಂದಿಗೆ ಮಾತನಾಡದಂತೆಯೂ ಸೂಚಿಸಲಾಗಿದ್ದು, ಪಾಕ್ ನೋಂದಾಯಿತ ಸಿಮ್ ಗಳನ್ನು ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+