• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಹರೂ ಬಗ್ಗೆ ಮಾತಾಡಿದ್ದಕ್ಕೆ ಬಾಲಿವುಡ್ ನಟಿಗೆ ನ್ಯಾಯಾಂಗ ಬಂಧನ

|

ಜೈಪುರ, ಡಿಸೆಂಬರ್.16: ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಕುಟುಂಬದ ಬಗ್ಗೆ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿದ್ದ ಬಾಲಿವುಡ್ ನಟಿ ಪಾಯಲ್ ರೋಹ್ಟಗಿರನ್ನು ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೋತಿಲಾಲ್ ನೆಹರೂ ಅವರ ಬಗ್ಗೆ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ವಿಡಿಯೋವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಚಾರ್ಮೇಶ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು.

ನೆಹರೂ ಕುಟುಂಬದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನಟಿ ಬಂಧನ

ಕಳೆದ ಡಿಸೆಂಬರ್.15ರಂದು ಬುಂದಿಯ ಸದರ್ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬುಂದಿ ಎಸ್​ಪಿ ಮಮತಾ ಗುಪ್ತಾ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ನಟಿ ಪಾಯಲ್​ ರೋಹ್ಟಗಿ ಅವರನ್ನು ಅಹಮದಾಬಾದ್​ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ನಂತರದಲ್ಲಿ ಬಂಧಿತ ನಟಿಯನ್ನು ಐಪಿಸಿ ಸೆಕ್ಷನ್ 66, 67 ಅಡಿ ವಿಚಾರಣೆಗೊಳಪಡಿಸಲಾಗಿತ್ತು.

ನಟಿಗೆ ಎಂಟು ದಿನ ನ್ಯಾಯಾಂಗ ಬಂಧನ

ಇಂದು ಬಂಧಿತ ನಟಿ ಪಾಯಲ್ ರೋಹ್ಟಗಿ ಅವರನ್ನು ಬುಂದಿಯಲ್ಲಿರುವ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ಬಂಧಿತ ಆರೋಪಿಯನ್ನು ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದಕ್ಕೂ ಮೊದಲು ಸ್ವಾತಂತ್ರ್ಯ ಹೋರಾಟಗಾರ ಮೋತಿಲಾಲ್ ನೆಹರೂ ಬಗ್ಗೆ ಇದೇ ನಟಿ ಆಕ್ಷೇಪಾರ್ಹ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್.14ರ ಭಾನುವಾರ ನೆಹರೂ ಅವರ ಬಗ್ಗೆ ಮಾತನಾಡಿದ್ದಕ್ಕೆ ತಮ್ಮನ್ನು ಪೊಲೀಸರು ಬಂಧಿಸಿರುವುದಾಗಿ ಸ್ವತಃ ನಟಿ ಪಾಯಲ್ ರೋಹ್ಟಗಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು. ದೇಶದಲ್ಲಿ ವಾಕ್ ಸ್ವಾತಂತ್ರ್ಯ ಎಂಬುದು ತಮಾಷೆಯಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

English summary
Mockery On Former Prime Minister Pandit Jawaharlal Nehru Family: Bollywood Heroen Payal Rohatgi Has Been Sent To Eight Day Judicial Custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X