ರಾಜಸ್ತಾನದಲ್ಲಿ ಭೀಕರ ಅಪಘಾತ; 11 ಜನ ಸಾವು
ಜೈಪುರ, ಮಾರ್ಚ್ 14; ರಾಜಸ್ತಾನದಲ್ಲಿ ಶನಿವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಜೋದ್‌ಪುರ ಬಳಿಯ ಶೇಘಡ್ ರಸ್ತೆಯಲ್ಲಿ ಕಾರ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ 11 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ನವವಿವಾಹತೆಯೂ ಸೇರಿದ್ದಾರೆ.
ಬಾರಾಮೇರ್‌ನಿಂದ ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದ ವಿಕ್ರಮ್ ಎನ್ನುವರ ಕುಟುಂಬಸ್ಥರ ಕಾರ್‌ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ 9 ಜನ ಮೃತಟ್ಟರೆ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆಯಷ್ಟೇ ಜೋದ್‌ಪುರದ ವಿಕ್ರಮ್ ಎನ್ನುವರು ಶ್ವೇತಾ ಎನ್ನುವರನ್ನು ಮದುವೆಯಾಗಿದ್ದರು. ದೇವರ ದರ್ಶನಕ್ಕೆ ತೆರಳಿದ್ದ ವಿಕ್ರಮ್ ಕುಟುಂಬದವರಿಗೆ ಅಪಘಾತ ಆಗಿದೆ. ಅಪಘಾತದಲ್ಲಿ ವಿಕ್ರಮ್ ಪತ್ನಿ ನವವಿವಾಹಿತೆ ಶ್ವೇತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಕಾರ್ ಸಂಪೂರ್ಣ ಜಖಂ ಆಗಿದ್ದು, ಕ್ರೇನ್ ಮೂಲಕ ಮೃತದೇಹಗಳನ್ನು ಹೊರತೆರೆಯಲಾಗಿದೆ. ಶೇಘಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications