ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲಟ್ ವಜಾಗೊಂಡ ಬೆನ್ನಲ್ಲೇ ಬಂಡಾಯ ಶಾಸಕರ ಬಹಿರಂಗ ಸವಾಲು

|
Google Oneindia Kannada News

ಜೈಪುರ, ಜುಲೈ 14: ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ಅವರನ್ನು ವಜಾಗೊಳಿಸಿದ ನಂತರ, ರಾಜಸ್ಥಾನದ ರಾಜಕೀಯ ಇನ್ನೊಂದು ಮಗ್ಗುಲಿಗೆ ಉರುಳಿದೆ.

Recommended Video

ಒಂದು ವಾರದ ಲಾಕ್ ಡೌನ್ , ಎನಿರುತ್ತೆ , ಎನಿರಲ್ಲಾ ? | karnataka Lockdown | Oneindia Knanada

ಎರಡು ಸಿಎಲ್ಪಿ ಸಭೆಯಲ್ಲೂ ಸಚಿನ್ ಮತ್ತು ಅವರ ಬೆಂಬಲಿಗರು ಗೈರಾದ ನಂತರ, ಈಗ, ಬಂಡಾಯ ಎದ್ದಿರುವ ಶಾಸಕರಿಗೂ ಶಿಸ್ತುಕ್ರಮ ಜರಗಿಸುವ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯಪಾಲರ ಭೇಟಿ ನಂತರ ಸಿಎಂ ಅಶೋಕ್ ಖಡಕ್ ಎಚ್ಚರಿಕೆ!ರಾಜ್ಯಪಾಲರ ಭೇಟಿ ನಂತರ ಸಿಎಂ ಅಶೋಕ್ ಖಡಕ್ ಎಚ್ಚರಿಕೆ!

ಈ ನಡುವೆ ತಮಗೆ ಬಹುಮತ ಇದೆ ಎಂದು ಹೇಳುವ ಸಿಎಂ ಅಶೋಕ್ ಗೆಹ್ಲೋಟ್, ಸದನದಲ್ಲಿ ಅದನ್ನು ಸಾಬೀತು ಪಡಿಸಲಿ ಎಂದು ಸಚಿನ್ ಪೈಲಟ್ ಬೆಂಬಲಿಗರು ಸವಾಲು ಹಾಕಿದ್ದಾರೆ.

Let CM Ashok Gehlot Prove The Majority In Assembly, Rebel MLAs Challenge

ಪಕ್ಷೇತರರು ಮತ್ತು ಇತರರ ಬೆಂಬಲಿಗರೊಂದಿಗೆ ಸರಕಾರ ರಚಿಸಿರುವ ಅಶೋಕ್ ಗೆಹ್ಲೋಟ್ ಅವರಿಗೆ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಬಂಡಾಯ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ.

"ತನಗೆ 109 ಶಾಸಕರ ಬೆಂಬಲವಿದೆ ಎಂದು ಗೆಹ್ಲೋಟ್ ಹೇಳುತ್ತಾರೆ. ಹಾಗಿದ್ದರೆ ಅದನ್ನು ಸಾಬೀತು ಪಡಿಸಲಿ. ಆಗ ನಿಜಾಂಶ ತಿಳಿಯುತ್ತದೆ, ಯಾರ ಜೊತೆಗೆ ಎಷ್ಟು ಶಾಸಕರಿದ್ದಾರೆ"ಎಂದು ಸಚಿನ್ ಪೈಲಟ್ ಪರ ಶಾಸಕ ರಮೇಶ್ ಮೀನಾ ಸವಾಲು ಹಾಕಿದ್ದಾರೆ.

ರಾಜಸ್ಥಾನ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?ರಾಜಸ್ಥಾನ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?

"ಪೂರ್ವ ರಾಜಸ್ಥಾನದ ಕೆಲವು ಸಮುದಾಯಗಳನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಐದು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಲೇ ಇಲ್ಲ. ತಾಳ್ಮೆಗೂ ಒಂದು ಮಿತಿಯಿದೆ"ಎಂದು ಮೀನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Let CM Ashok Gehlot Prove The Majority In Assembly, Rebel MLAs Challenge,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X