ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಕೊರೊನಾ ರೋಗಿಗಳನ್ನು ಗುಣಪಡಿಸಿದ ಜೈಪುರದ ವೈದ್ಯರು

|
Google Oneindia Kannada News

ಜೈಪುರ, ಮಾರ್ಚ್ 16: ನಾಲ್ವರು ಕೊರೊನಾ ರೋಗಿಗಳ ಪೈಕಿ ಮೂವರನ್ನು ಜೈಪುರದ ವೈದ್ಯರು ಗುಣಪಡಿಸಿದ್ದಾರೆ.

ದೇಶದಲ್ಲಿ 110 ಮಂದಿಯಲ್ಲಿ ಕೊರೊನಾ ಇರುವುದು ಪತ್ತೆಯಾಗುವುದರೊಂದಿಗೆ ಈ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದೆ.

ಆದರೆ ಈ ಹೊತ್ತಲ್ಲೇ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸಂತಸದ ಸುದ್ದಿ ಹೊರ ಬಿದ್ದಿದೆ.ಕೊರೋನಾ ವೈರಸ್ ತಗುಲಿದ ನಾಲ್ವರು ರೋಗಿಗಳ ಪೈಕಿಯಲ್ಲಿ ಮೂವರನ್ನು ಇಲ್ಲಿನ ವೈದ್ಯರು ಗುಣಪಡಿಸಿದ್ದಾರೆ.

ರಾಜಸ್ಥಾನದ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯ ವೈದ್ಯರ ಈ ಕಾರ್ಯವನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶ್ಲಾಘಿಸಿದ್ದಾರೆ.

ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!

ಮಲೇರಿಯಾ, ಹಂದಿಜ್ವರ ಮತ್ತು ಎಚ್ ಐವಿ ಪಾಸಿಟಿವ್ ರೋಗಿಗಳಿಗೆ ನೀಡಲಾಗುವ ಔಷಧಿಗಳ ಸಂಯೋಜನೆ ಮೂಲಕ ಕೊರೋನಾ ವೈರಸ್ ಸೋಂಕಿತರನ್ನು ಗುಣಮುಖರನ್ನಾಗಿಸಿದ್ದಾರೆ.

ಇಬ್ಬರು ಹಿರಿಯ ನಾಗರಿಕರು ಸೇರಿದಂತೆ ಮೂವರು ಕೊರೋನಾ ಸೋಂಕಿತರ ಪರೀಕ್ಷೆ ವರದಿ ಇದೀಗ ನೆಗಟೀವ್ ಆಗಿದ್ದು, ಎಸ್ ಎಂಎಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿ ಗೆಲ್ಹೋಟ್ ಟ್ವೀಟ್ ಮಾಡಿದ್ದಾರೆ.

English summary
Three out of the four COVID-19 patients have been cured with a novel combination of medicines given to Malaria, Swine Flu and HIV positive patients at the state's biggest government hospital, the Sawai Mansingh Hospital in Jaipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X