• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕು ಹೆಚ್ಚಳ: ಒಂದು ವಾರ ರಾಜಸ್ಥಾನ ಗಡಿ ಬಂದ್

|

ಜೈಪುರ, ಜೂನ್ 10: ರಾಜಸ್ಥಾನದಲ್ಲಿ ದಿನೇ ದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರದ ಮಟ್ಟಿಗೆ ಗಡಿಯನ್ನು ಮುಚ್ಚಲಾಗಿದೆ.

   ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

   ಪಾಸ್ ಹೊಂದಿರುವವರು ಮಾತ್ರ ರಾಜ್ಯದ ಹೊರಗೆ ಹೋಗಬಹುದು ಅಥವಾ ರಾಜ್ಯಕ್ಕೆ ಬರಬಹುದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

   ಒಂದೇ ಕುಟುಂಬದ 26 ಸದಸ್ಯರಿಗೆ ಕೊರೊನಾ ವೈರಸ್ ಸೋಂಕು!

   ರಾಜಸ್ಥಾನವು ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣದಲ್ಲಿ ಜೊತೆ ಗಡಿಯನ್ನು ಹಂಚಿಕೊಳ್ಳುತ್ತದೆ.ಎನ್‌ಓಸಿ ಸರ್ಟಿಫಿಕೇಟ್ ಇಲ್ಲದೆ ರಾಜಸ್ಥಾನಕ್ಕೆ ಪ್ರವೇಶಿಸುವಂತಿಲ್ಲ ಹಾಗೆಯೇ ಪಾಸ್ ಇಲ್ಲದೆ ರಾಜ್ಯ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

   ರಾಜಸ್ಥಾನದಲ್ಲಿ ಇಂದು 123 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 11,300ಕ್ಕೆ ಏರಿಕೆಯಾಗಿದೆ. 256 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವಾರ ಸಾಕಷ್ಟು ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿತ್ತು. ಆರ್ಥಿಕತೆ ಪುನರಾರಂಭಗೊಂಡಿದೆ. ಒಂದು ವಾರದ ವರಗೆ ಚೆಕ್‌ಪೋಸ್ಟ್‌ ಇರಿಸಲಾಗುತ್ತದೆ.

   ವಾಹನಗಳ ತಪಾಸಣೆ ನಡೆಯಲಿದೆ. ರೈಲ್ವೆ ನಿಲ್ದಾಣ, ಏರ್‌ಪೋರ್ಟ್‌ ಬಳಿ ಕಡ್ಡಾಯವಾಗಿ ಚೆಕ್‌ಪೋಸ್ಟ್ ತೆರೆಯಲಾಗಿದೆ. ಕುಟುಂಬದಲ್ಲಿ ಯಾರಾದರೂ ನಿಧನ ಹೊಂದಿದರೆ, ಅನಾರೋಗ್ಯ ಇಂತಹ ಕೆಲವು ತುರ್ತು ಸಂದರ್ಭಗಳಲ್ಲಿ ಮಾತ್ರ ಪಾಸ್ ನೀಡಲಾಗುತ್ತದೆ.

   English summary
   The Rajasthan government has said it will seal the state border for a week due to rising cases of coronavirus. Only people who have passes can go enter or leave the state, the state government said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X