• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೇಟೆಸ್ಟ್ ಸರ್ವೇ: ರಾಜಸ್ಥಾನದಲ್ಲಿ ಉಲ್ಟಾ ಹೊಡೆಯುತ್ತಾ ಎಲ್ಲಾ ಸಮೀಕರಣ?

|

ಇದುವರೆಗೆ ಹೊರಬಿದ್ದಿರುವ ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ, ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಮ್ಮಿ. ರಾಜ್ಯ ಸರಕಾರದ ವಿರುದ್ದ ಸ್ಪಷ್ಟ ಆಡಳಿತ ವಿರೋಧಿ ಅಲೆ ಎದ್ದಿದೆ ಎನ್ನುವ ಅಂಶ, ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.

ರಾಜಸ್ಥಾನ ಮತ್ತು ತೆಲಂಗಾಣದ ಅಸೆಂಬ್ಲಿ ಚುನಾವಣೆ, ಇದೇ ವಾರ (ಡಿ 7) ನಡೆಯಲಿದೆ. ಚುನಾವಣೆಯ ಬಹಿರಂಗ ಪ್ರಚಾರ ಮುಗಿಯುತ್ತಾ ಬರುತ್ತಿದೆ ಎನ್ನುವಷ್ಟರಲ್ಲಿ ಹೊರಬಿದ್ದಿರುವ ಸಮೀಕ್ಷೆಯೊಂದರ ಪ್ರಕಾರ, ಬಿಜೆಪಿಯ ರಾಜಸ್ಥಾನದ ಘಟಕ, ನಿಟ್ಟುಸಿರು ಬಿಡುವಂತಹ ಮಾಹಿತಿ ಹೊರಬಿದ್ದಿದೆ.

ರಾಜಸ್ತಾನ ಚುನಾವಣೆಯಲ್ಲಿ ಕ್ಷೀಣಿಸುತ್ತಿದೆ ರಾಜ ಮನೆತನದವರ ಪ್ರಭಾವ

ಸರ್ವೇ ಪ್ರಕಾರ, ಬಿಜೆಪಿ ಪರ ನಿಲ್ಲುವ ರಾಜಸ್ಥಾನದ ಮತದಾರರ ಒಟ್ಟಾರೆ ಶೇಕಡಾವಾರು ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಂತರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಾ ಬರುತ್ತಿದೆ.

ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷರ ನಡುವಿನ ಮನಸ್ತಾಪ ಏನೇ ಇದ್ದರೂ, ಬಿಜೆಪಿ ಸರಕಾರವೇ ಲೇಸು ಎನ್ನುವವರು ಹೆಚ್ಚಾಗುತ್ತಿರುವುದು, ಚುನಾವಣೆಯ ವೇಳೆ ಬಿಜೆಪಿಗೆ ಹೊಸ ಹುಮ್ಮಸ್ಸು ತಂದುಕೊಡದೇ ಇರದು..

ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಸಮರ

ಸರ್ವೇ ಪ್ರಕಾರ, ಟಿಕೆಟ್ ಹಂಚಿಕೆಯಾದ ನಂತರ, ಬಿಜೆಪಿ ವೃತ್ತಿಪರತೆಯಿಂದ ಕೆಲಸ ಮಾಡಿರುವುದರಿಂದ, ಅತೃಪ್ತರ ಸಂಖ್ಯೆ ಕಮ್ಮಿಯಾಗಿರುವುದು ಬಿಜೆಪಿಗೆ ನಿಟ್ಟುಸಿರು ಬಿಡುವಂತಹ ವಿಚಾರ. ಆದರೆ, ಇದೇ ಪರಿಸ್ಥಿತಿ ಕಾಂಗ್ರೆಸ್ ನಲ್ಲಿಲ್ಲ. ಮುಂದೆ ಓದಿ..

ಇಂಡಿಯಾ ಟುಡೇ ಹೊಸ ಸರ್ವೇ

ಇಂಡಿಯಾ ಟುಡೇ ಹೊಸ ಸರ್ವೇ

ಇಂಡಿಯಾ ಟುಡೇ ಹೊಸ ಸರ್ವೇಯ ಪ್ರಕಾರ, ಟಿಕೆಟ್ ಹಂಚಿಕೆಯ ನಂತರ, ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಕಮ್ಮಿಯಾಗಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಇದು ಹೆಚ್ಚಾಗಿರುವುದು ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ರಾಹುಲ್ ಗಾಂಧಿಗೆ ನಿದ್ದೆಗೆಡೆಸಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಅತೃಪ್ತರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎನ್ನುತ್ತದೆ ಸರ್ವೇ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೋಟೋ ಫಿನಿಷ್ ಫಲಿತಾಂಶ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೋಟೋ ಫಿನಿಷ್ ಫಲಿತಾಂಶ

ಸರ್ವೇ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೋಟೋ ಫಿನಿಷ್ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಮೇವಾರ್, ಜೈಸ್ಮಮೀರ್, ಬಿಕನೀರ್, ಮರ್ವಾರ್, ಶೇಖಾವತಿ, ಅಹ್ರಿವಾಲ್ ಮುಂತಾದ ಪ್ರದೇಶಗಳಲ್ಲಿ, ಬಿಜೆಪಿ ಸರಕಾರವೇ ಲೇಸು ಎನ್ನುವವರ ಸಂಖ್ಯೆ ಹೆಚ್ಚಾಗಿರುವುದು ಗಮನಿಸಬೇಕಾದ ವಿಚಾರ.

ರಾಜಸ್ಥಾನ : 10 ವರ್ಷಗಳ ದಾಖಲೆ ಮುರಿದ ಮಹಿಳಾ ಸ್ಪರ್ಧಿಗಳು

ಬಿಜೆಪಿ ಸರಕಾರ ಮುಂದುವರಿಯಲಿ ಎನ್ನುವವರ ಸಂಖ್ಯೆ ಏರಿದೆ

ಬಿಜೆಪಿ ಸರಕಾರ ಮುಂದುವರಿಯಲಿ ಎನ್ನುವವರ ಸಂಖ್ಯೆ ಏರಿದೆ

ಇಂಡಿಯಾ ಟುಡೇ ಕಳೆದ ತಿಂಗಳು ನಡೆಸಿದ್ದ ಸರ್ವೇ ಪ್ರಕಾರ, ಬಿಜೆಪಿ ಸರಕಾರ ತೊಲಗಬೇಕು ಎಂದವರು ಶೇ. 43, ಮುಂದವರಿಯಲು ಬಯಸಿದವರು ಶೇ. 39. ಆದರೆ, ತಾಜಾ ಸಮೀಕ್ಷೆಯ ಪ್ರಕಾರ, ಬಿಜೆಪಿ ಸರಕಾರ ಮುಂದುವರಿಯಲಿ ಎನ್ನುವವರ ಸಂಖ್ಯೆ ಶೇ. 44ಕ್ಕೆ ಏರಿದ್ದರೆ, ಬದಲಾವಣೆ ಬಯಸಿರುವವರ ಸಂಖ್ಯೆ ಶೇ. 45.

ಜಾತಿ ಲೆಕ್ಕಾಚಾರವೇ ಭಾಷ್ಯ ಬರೆಯುವ ನಮ್ಮ ದೇಶದ ರಾಜಕೀಯ

ಜಾತಿ ಲೆಕ್ಕಾಚಾರವೇ ಭಾಷ್ಯ ಬರೆಯುವ ನಮ್ಮ ದೇಶದ ರಾಜಕೀಯ

ಜಾತಿ ಲೆಕ್ಕಾಚಾರವೇ ಭಾಷ್ಯ ಬರೆಯುವ ನಮ್ಮ ದೇಶದ ರಾಜಕೀಯದಲ್ಲಿ, ಎಸ್ಸಿ, ಎಸ್ಟಿ, ಮುಸ್ಲಿಂ, ಮೀನಾ, ಗುಜ್ಜರ್, ಮೇಗ್ವಾಲ್, ಭಿಲ್ ಸಮುದಾಯ ಬಿಜೆಪಿಯ ವಿರುದ್ದ ಮತ ಚಲಾಯಿಸುವ ಸಾಧ್ಯತೆಯಿದ್ದು., ಓಬಿಸಿ, ಸಾಮಾನ್ಯ, ಜ್ಯಾಟ್, ಕುಮ್ಹರ್, ಮಾಲಿ, ರಾಜಪೂತ್ ಮತ್ತು ಬ್ರಾಹ್ಮಣ ಸಮುದಾಯ ಬಿಜೆಪಿ ಬೆನ್ನಿಗೆ ನಿಲ್ಲುವ ಸಾಧ್ಯತೆಯಿದೆ.

ದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನ

ಅಶೋಕ್ ಗೆಹ್ಲೋಟ್, ವಸುಂಧರಾ ರಾಜೇ, ಸಚಿನ್ ಪೈಲಟ್

ಅಶೋಕ್ ಗೆಹ್ಲೋಟ್, ವಸುಂಧರಾ ರಾಜೇ, ಸಚಿನ್ ಪೈಲಟ್

ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಸುತ್ತಾಡಿ, ಈ ಸರ್ವೇಯನ್ನು ಸಿದ್ದಪಡಿಸಲಾಗಿದೆ ಎಂದು ಇಂಡಿಯಾ ಟುಡೇ ಹೇಳಿದೆ. ಹಿಂದಿನ ಸಮೀಕ್ಷೆಯ ಪ್ರಕಾರ, ರಾಜಸ್ಥಾನದ ಸಿಎಂ ಯಾರಾಗಬೇಕು ಎನ್ನುವುದಕ್ಕೆ ಮೊದಲ ಆಯ್ಕೆ, ಅಶೋಕ್ ಗೆಹ್ಲೋಟ್, ನಂತರ ವಸುಂಧರಾ ರಾಜೇ, ಅದಾದ ನಂತರ ಸಚಿನ್ ಪೈಲಟ್.

English summary
Far from the expected debacle, the ruling Bharatiya Janata Party (BJP) has managed a last-lap surge days before Rajasthan goes to polls, India Today's latest survey. As many as 45% of respondents want change in the government whereas a close 44%t support the present BJP government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X