ಮದುವೆ ಮುಗಿಯುತ್ತಿದ್ದಂತೆ ಹೆಲಿಕಾಪ್ಟರ್ ಏರಿದ ದಂಪತಿ: ಕಾರಣ ಗೊತ್ತಾ?

ಜೈಪುರ್, ನವೆಂಬರ್.22: ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಅನ್ನೋದು ಪ್ರತಿ ಹೆತ್ತವರ ಆಸೆ, ಕನಸು. ಇಲ್ಲದವರು ಚಪ್ಪರದಲ್ಲಿ ಮದುವೆ ಮಾಡಿದರೆ, ಉಳ್ಳವರು ಅಂಬರದಲ್ಲೇ ಮದುವೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.

ಆದರೆ, ರಾಜಸ್ಥಾನದಲ್ಲಿ ನಡೆದ ಮದುವೆ ಎಲ್ಲಕ್ಕಿಂತ ಭಿನ್ನ-ವಿಭಿನ್ನವಾಗಿದೆ. ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ ತಂದೆ, ಮುದ್ದು ಮಗಳಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ತಂದೆ ನೀಡಿದ ಕೊಡುಗೆ ಮಗಳಷ್ಟೇ ಅಲ್ಲ ಅಳಿಯನ ಮನಸನ್ನೂ ಗೆದ್ದಿದೆ.

ಹೌದು, ರಾಜಸ್ಥಾನದ ಜುಂಜುನ್ ಜಿಲ್ಲೆ ಚಿವಾಡ್ ಬಳಿ ಅಜಿತ್ ಪುರ್ ನಲ್ಲಿ ರೀನಾ ಹಾಗೂ ಸಂದೀಪ್ ಲಂಬಾ ಎಂಬ ದಂಪತಿಯ ಅದ್ಧೂರಿ ವಿವಾಹ ನಡೆಯಿತು. ಮದುವೆ ನಂತರ ತಂದೆ ಇಂಥದೊಂದು ಗಿಫ್ಟ್ ಕೊಡುತ್ತಾರೆ ಎಂದು ಸ್ವತಃ ಮಗಳಿಗೂ ಗೊತ್ತಿರಲಿಲ್ಲ.

ಮಗಳಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟ ಅಪ್ಪ!

ಮಗಳಿಗೆ ಸರ್ ಪ್ರೈಸ್ ಗಿಫ್ಟ್ ಕೊಟ್ಟ ಅಪ್ಪ!

ರೀನಾ ಹಾಗೂ ಸಂದೀಪ್ ಲಂಬಾ ದಂಪತಿಯ ಅದ್ಧೂರಿ ಮದುವೆಯೇನೋ ಆಯಿತು. ಇನ್ನೇನು, ಮಗಳು ತನ್ನ ಪತಿಯ ಮನೆಗೆ ಹೋಗಬೇಕು. ಅಷ್ಟರಲ್ಲೇ ತಂದೆ ಮಹೇಂದ್ರ ಸಿಂಗ್ ಸೋಲಂಕಿ ಮಗಳಿಗೆ ಅಚ್ಚರಿಯ ಕೊಡುಗೆ ನೀಡಿದರು. ನವದಾಂಪತ್ಯಕ್ಕೆ ಕಾಲಿಟ್ಟ ಮಗಳು-ಅಳಿಯನಿಗೆ ಹೊರಡಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.

ನವ ದಂಪತಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ

ನವ ದಂಪತಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ

ನವದಾಂಪತ್ಯಕ್ಕೆ ಕಾಲಿಟ್ಟ ಯುವಜೋಡಿ ಹೆಲಿಕಾಪ್ಟರ್ ನಲ್ಲಿ ಮೊದಲ ಪ್ರಯಾಣ ಆರಂಭಿಸಿದರು. ರೀನಾ ಹಾಗೂ ಸಂದೀಪ್ ಲಂಬಾ ದಂಪತಿ ಹೆಲಿಕಾಪ್ಟರ್ ಏರಿ ಜುಂಜುನ್ ಜಿಲ್ಲೆ ಚಿವಾಡ್ ಬಳಿ ಅಜಿತ್ ಪುರ್ ದಿಂದ ಸಂದೀಪ್ ಲಂಬಾ ಸ್ವಗ್ರಾಮ ಸುಲ್ತಾನಾ ಪ್ರದೇಶಕ್ಕೆ ತೆರಳಿದರು.

ಎರಡು ತಿಂಗಳ ಮೊದಲೇ ಪ್ಲಾನ್

ಎರಡು ತಿಂಗಳ ಮೊದಲೇ ಪ್ಲಾನ್

ಒಂದು ವರ್ಷದ ಹಿಂದೆ ಮಗಳಿಗೆ ಮಹೇಂದ್ರ ಸಿಂಗ್ ಸೋಲಂಕಿ ಮದುವೆ ನಿಶ್ಚಯ ಮಾಡಿದ್ದರು. ಅಂದೇ ಮಗಳನ್ನು ವಿಶಿಷ್ಯ ರೀತಿಯಲ್ಲಿ ಬಿಳ್ಕೊಡುಗೆ ನೀಡಲು ತೀರ್ಮಾನ ಮಾಡಿದ್ದರು. ಕಳೆದ ಎರಡು ತಿಂಗಳ ಹಿಂದೆ ಮಗಳನ್ನು ಹೆಲಿಕಾಪ್ಟರ್ ಮೂಲಕ ಕಳುಹಿಸಿಕೊಡಲು ತಂದೆ ನಿರ್ಧರಿಸಿದ್ದು, ಈ ಬಗ್ಗೆ ಮನೆಯವರ ಜೊತೆಗೂ ಚರ್ಚಿಸಿದ್ದರು ಎನ್ನಲಾಗಿದೆ.

ಕಂಡುವರು ಹುಬ್ಬು ಹಾರಿಸುವಂತಿತ್ತು ಮದುವೆ!

ಕಂಡುವರು ಹುಬ್ಬು ಹಾರಿಸುವಂತಿತ್ತು ಮದುವೆ!

ರೀನಾ ಹಾಗೂ ಸಂದೀಪ್ ಲಂಬಾ ಮದುವೆ ಅದ್ಧೂರಿತನದಿಂದ ಕೂಡಿತ್ತು. ಸಂಬಂಧಿಕರು, ಬಾಂಧವರು, ಅಷ್ಟೇ ಯಾಕೆ ಮದುವೆ ನೋಡಿದ ಪ್ರತಿಯೊಬ್ಬರು ಅಚ್ಚರಿ ಪಡುವ ರೀತಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಿತು. ಇದರ ಜೊತೆಗೆ ಮದುವೆ ಮುಗಿಯುತ್ತಿದ್ದಂತೆ ನವದಂಪತಿಯನ್ನು ತಂದೆ ಹೆಲಿಕಾಪ್ಟರ್ ನಲ್ಲಿ ಬೀಳ್ಕೊಟ್ಟಿದ್ದು, ಎಲ್ಲರಲ್ಲೂ ಆಶ್ಚರ್ಯಚಕಿತರಾಗಿ ನೋಡುವಂತೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+