ದಾಖಲೆ: ಜೈಪುರದಲ್ಲಿ 1 ವಾರದಲ್ಲಿ ಬರೋಬ್ಬರಿ 4 ಸಾವಿರ ಮದುವೆ
ಜೈಪುರ, ನವೆಂಬರ್ 26: ಈ ಕೊರೊನಾ ಸೋಂಕಿನ ಭಯದ ನಡುವೆಯೂ ಜೈಪುರದಲ್ಲಿ ಒಂದು ವಾರದಲ್ಲಿ 4 ಸಾವಿರ ಮದುವೆ ನಡೆಯುತ್ತಿದೆ.
ನವೆಂಬರ್ 30ರವರೆಗೂ ಮದುವೆಯ ದಿನಾಂಕ ನಿಗದಿಯಾಗಿದೆ. ರಾಜಸ್ಥಾನದಲ್ಲಿ ನಿತ್ಯ 3 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದೀಗ ಇಷ್ಟೊಂದು ಮದುವೆಗಳು ನಡೆಯುತ್ತಿರುವುದು ಆರೋಗ್ಯ ಅಧಿಕಾರಿಗಳಿಗೆ ತಲೆ ನೋವು ಉಂಟು ಮಾಡಿದೆ.
ರಾಜಸ್ಥಾನದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಶೇ.1.34ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 26 ಸಾವಿರದ ಗಡಿ ದಾಟಿದೆ. ಜೈಪುರದಲ್ಲಿ ನಿತ್ಯ 600ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ರಾತ್ರಿ ಕರ್ಫ್ಯೂವನ್ನು ಘೋಷಿಸಲಾಗಿದೆ. ಹೌದು ಬೇರೆ ದೇಶದಲ್ಲಿರುವವರು ಮತ್ತು ನನ್ ಸಾಕಷ್ಟು ಸ್ನೇಹಿತರು, ಬಂಧುಗಳು ಮದುವೆಗೆ ಬರಲು ಸಾಧ್ಯವಾಗುತ್ತಿಲ್ಲ, ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವ ಪರಿಣಾಮ ಕೆಲವೇ ಕೆಲವು ಮಂದಿ ಮದುವೆಗೆ ಬಂದರೆ ಸಾಕು ಎಂದು ವಧು ನಿಹಾರಿಕಾ ಸಿಂಗ್ ಹೇಳಿದ್ದಾರೆ.
ಅವರ ತಾಯಿ ಮಾತನಾಡಿ, ನಮಗೆ ಸಾಕಷ್ಟು ಮಿತ್ರರು, ಬಂಧುಗಳು ಇದ್ದಾರೆ ಆದರೆ ಮದುವಗೆ 100ಮಂದಿಗಿಂತ ಕಡಿಮೆ ಜನರನ್ನು ಅಹ್ವಾನಿಸಿದ್ದೇವೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿದಿದ್ದೇವೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸತತ ಎರಡು ವಾರದಿಂದ ದೈನಂದಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕಳವಳ ಮೂಡಿಸಿದೆ. ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಆಸುಪಾಸಿನಲ್ಲಿರುತ್ತಿದ್ದು, ಚೇತರಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 92,66,706ಕ್ಕೆ ತಲುಪಿದೆ. ಹಾಗೆಯೇ 24 ಗಂಟೆಗಳಲ್ಲಿ 524 ಮಂದಿ ಸಾವುಗಳು ವರದಿಯಾಗಿವೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 1,35,223ಕ್ಕೆ ಏರಿಕೆಯಾಗಿದೆ.












Click it and Unblock the Notifications