Ukraine War: 900 ಡ್ರೋನ್, 3 ದಿನಗಳ ಅಂತರ... ಉಕ್ರೇನ್ ಮಾಡುತ್ತಿದೆ ಭಾರಿ ಗಂಭೀರ ಆರೋಪ!

ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಲ್ಲುವ ಮಾತು ಬಿಡಿ, ಈಗಿರುವ ಸ್ಥಿತಿ ನೋಡಿದ್ರೆ ಸುಮ್ಮನೆ ಇರುವುದು ಕೂಡ ಕಷ್ಟ ಎನ್ನುವ ವಾತಾವರಣ ಎದುರಾಗಿದೆ. ರಷ್ಯಾ & ಉಕ್ರೇನ್ ಯುದ್ಧಕ್ಕೆ ಈಗ ಬ್ರೇಕ್ ಹಾಕಲು ಒಂದು ಕಡೆ ಸಾಲು ಸಾಲು ಸಭೆ ನಡೆಸುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಈ ಎರಡೂ ದೇಶಗಳ ಸೇನೆಗಳ ನಡುವೆ ಘೋರ ಕಾಳಗ ಆರಂಭವಾಗಿದೆ. ಅದರಲ್ಲೂ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದೀಗ ರಷ್ಯಾ ಮಿಲಿಟರಿ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ!

ಹೌದು, ರಷ್ಯಾ ಕಳೆದ ಕೆಲವು ದಿನಗಳಿಂದ ಉಕ್ರೇನ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿಯೇ ದಾಳಿ ಮಾಡುತ್ತಿದೆ. ಅದರಲ್ಲೂ 3 ದಿನಗಳ ಅಂತರದಲ್ಲಿ ಬರೋಬ್ಬರಿ 900 ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡಿದೆ ಎಂಬ ಆರೋಪ ಮಾಡಲಾಗಿದೆ. ಈ ಬಗ್ಗೆ ಈಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪ ಮಾಡಿದ್ದು, ಕದನ ವಿರಾಮ ಸಭೆ & ಮಹತ್ವದ ಮಾತುಕತೆ ಸಮಯದಲ್ಲೇ ಈ ರೀತಿಯಾಗಿ ದಾಳಿ ನಡೆದಿದೆ ಎಂಬುದು ಇನ್ನಷ್ಟು ಸಂಚಲನ ಸೃಷ್ಟಿಸಿದೆ. ಅಲ್ಲದೆ ರಷ್ಯಾ ಸೇನೆಯ ಈ ವರ್ತನೆ ಇದೀಗ ಕದನ ವಿರಾಮಕ್ಕೆ ಕೂಡ ದೊಡ್ಡ ತೊಡಕು ಉಂಟು ಮಾಡುತ್ತಿದೆ, ಎನ್ನುವ ಆರೋಪ ಮಾಡಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.

Zelenskyy Alleged That 900 Drones Launched Against Ukraine In Last 3 Days By Russia

ಅಮೆರಿಕ & ಯುರೋಪ್ ಕ್ರಮ ಗ್ಯಾರಂಟಿ?

ರಷ್ಯಾ ಸೇನೆಯಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವ ರೀತಿಯನ್ನ ನೋಡಿದರೆ ಉಕ್ರೇನ್ ಭಾರಿ ದೊಡ್ಡ ನಷ್ಟ ಅನುಭವಿಸುವ ಭಯ ಕಾಡುತ್ತಿದೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ. ಅದ್ರಲ್ಲೂ ಅಮೆರಿಕ ಕೂಡಲೇ ರಷ್ಯಾ ವಿರುದ್ಧ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ಹೇರಿಕೆ ಮಾಡಬೇಕು, ಯುರೋಪ್ ಕೂಡ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹ ಮಾಡಿದ್ದಾರೆ ವೊಲೊಡಿಮಿರ್ ಝೆಲೆನ್ಸ್ಕಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+