Get Updates
Get notified of breaking news, exclusive insights, and must-see stories!

World's Most Corrupt Countries: ವಿಶ್ವದ ಭಷ್ರ ರಾಷ್ಟ್ರಗಳ ಪಟ್ಟಿ ಬಿಡುಗಡೆ: 100ರೊಳಗೆ ಸ್ಥಾನ ಪಡೆದ ಭಾರತ

World's Most Corrupt countries List: ಆಗಾಗ ಕೆಲವೊಂದು ಕ್ಷೇತ್ರಗಳಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಹಾಗೆಯೇ ಇದೀಗ ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಷನಲ್ 2024ರ ಭ್ರಷ್ಟ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದವು ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಎಷ್ಟನೇ ಸ್ಥಾನ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ವರ್ಷ, ಅತೀ ಭ್ರಷ್ಟರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 180 ದೇಶಗಳಲ್ಲಿ 96ನೇ ಸ್ಥಾನದಲ್ಲಿದೆ. 2023ರ ಶ್ರೇಯಾಂಕದಿಂದ ಮೂರು ಸ್ಥಾನಗಳಿಂದ ಕೆಳಗಿಳಿದಿದೆ. ಅಂದರೆ ಸ್ವಲ್ಪಮಟ್ಟಿಗೆ ಭ್ರಷ್ಟಚಾರ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

World s Most Corrupt countries List released What is India s Rank

ಭಾರತವು ತನ್ನ ಸ್ಥಾನವನ್ನು ಇತರ ಎರಡು ರಾಷ್ಟ್ರಗಳಾದ ಗಾಂಬಿಯಾ ಮತ್ತು ಮಾಲ್ಡೀವ್ಸ್‌ನೊಂದಿಗೆ ಹಂಚಿಕೊಂಡಿದೆ. ಸಾರ್ವಜನಿಕ ವಲಯದ ಭ್ರಷ್ಟಾಚಾರದ ಜಾಗತಿಕ ಮಾಪಕವಾಗಿ ಕಾರ್ಯನಿರ್ವಹಿಸುವ ಸಿಪಿಐ, 0 (ಹೆಚ್ಚು ಭ್ರಷ್ಟ) ರಿಂದ 100 (ತುಂಬಾ ಸ್ವಚ್ಛ) ವರೆಗಿನ ಸ್ಕೇಲ್ನಲ್ಲಿ ಅಂಕಗಳನ್ನು ನಿಗದಿಪಡಿಸುತ್ತದೆ. 2024 ರಲ್ಲಿ, ಭಾರತವು ಒಟ್ಟಾರೆ 38 ಅಂಕಗಳನ್ನು ಪಡೆಯಿತು, ಇದು 2023 ರಲ್ಲಿ 39 ಮತ್ತು 2022 ರಲ್ಲಿ 40 ರಷ್ಟಿತ್ತು.

ಭಾರತದ ನೆರೆಯ ರಾಷ್ಟ್ರಗಳ ಪೈಕಿ ಪಾಕಿಸ್ತಾನ 135, ಶ್ರೀಲಂಕಾ 121, ಬಾಂಗ್ಲಾದೇಶ 149 ಮತ್ತು ಚೀನಾ 76ನೇ ಸ್ಥಾನದಲ್ಲಿವೆ. ಡೆನ್ಮಾರ್ಕ್ (90) ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಫಿನ್‌ಲ್ಯಾಂಡ್ (88), ಸಿಂಗಾಪುರ್ (84) ಮತ್ತು ನ್ಯೂಜಿಲೆಂಡ್ (83) ನಂತರದ ಸ್ಥಾನಗಳಲ್ಲಿವೆ.

ಲಕ್ಸೆಂಬರ್ಗ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ 81 ಅಂಕಗಳೊಂದಿಗೆ 5ನೇ ಸ್ಥಾನವನ್ನು ಹಂಚಿಕೊಂಡರೆ, ಸ್ವೀಡನ್ (80) ಮತ್ತು ನೆದರ್‌ಲ್ಯಾಂಡ್ಸ್ (78) ಕ್ರಮವಾಗಿ 8 ಮತ್ತು 9ನೇ ಸ್ಥಾನಗಳನ್ನು ಹಂಚಿಕೊಂಡಿವೆ. ಆಸ್ಟ್ರೇಲಿಯಾ, ಐಸ್ಲ್ಯಾಂಡ್ ಮತ್ತು ಐರ್ಲೆಂಡ್ 77 ಅಂಕಗಳನ್ನು ಗಳಿಸಿ 10ನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಚಿನ್ನ ಹೊಂದಿರುವ ರಾಷ್ಟ್ರಗಳ ಪಟ್ಟಿ * ಯುನೈಟೆಡ್ ಸ್ಟೇಟ್ಸ್: ಯುಎಸ್ ಡಾಲರ್ ಪ್ರಾಬಲ್ಯ ಹೊಂದಿದ್ದರೂ, ಅಮೆರಿಕವು ತನ್ನ ಆರ್ಥಿಕ ಶಕ್ತಿಯನ್ನು ಪ್ರತಿಬಿಂಬಿಸುವ ವಿಶ್ವದ ಅತಿದೊಡ್ಡ ಬಂಗಾರ ಸಂಗ್ರಹ ಹೊಂದಿರುವ ರಾಷ್ಟ್ರವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು, 8,133.46 ಟನ್‌ ಸಂಗ್ರಹ ಚಿನ್ನವನ್ನು ಒಳಗೊಂಡಿದೆ. * ಜರ್ಮನಿ: ಎರಡನೇ ಮಹಾಯುದ್ಧದ ಬಳಿಕ ತನ್ನ ಸಂಗ್ರಹಗಳನ್ನು ಪುನರ್ನಿರ್ಮಿಸಿದ ಜರ್ಮನಿ, ಜಾಗತಿಕವಾಗಿ ಎರಡನೇ ಅತಿದೊಡ್ಡ ಚಿನ್ನದ ಸಂಗ್ರಹ ಹೊಂದಿದೆ. 3,351.53 ಟನ್‌ ಚಿನ್ನವನ್ನು ಸಂಗ್ರಹಿಸಿದ 2ನೇ ಸ್ಥಾನದಲ್ಲಿದೆ. * ಇಟಲಿ: ಇಟಲಿಯ ಗಮನಾರ್ಹ ಚಿನ್ನದ ಸಂಗ್ರಹ ಅದರ ಆರ್ಥಿಕ ಸ್ಥಿರತೆಗೆ ಕೊಡುಗೆ ನೀಡುತ್ತವೆ, ಇದರಲ್ಲಿ ಹೆಚ್ಚಿನವು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುತ್ತವೆ. 2,451.84 ಟನ್‌ ಚಿನ್ನವನ್ನು ಹೊಂದಿದೆ.

ಅತೀ ಹೆಚ್ಚು ಚಿನ್ನ ಹೊಂದಿರುವ ರಾಷ್ಟ್ರಗಳು

* ಫ್ರಾನ್ಸ್: ಯುರೋಪಿಯನ್ ಆರ್ಥಿಕ ಶಕ್ತಿ ಕೇಂದ್ರ ಆಗಿರುವ ಫ್ರಾನ್ಸ್, ಆರ್ಥಿಕ ಕುಸಿತಗಳು ಮತ್ತು ಬಿಕ್ಕಟ್ಟುಗಳನ್ನು ನಿಭಾಯಿಸಲು ಗಣನೀಯ ಚಿನ್ನದ ಸಂಗ್ರಹವನ್ನು ಹೊಂದಿದೆ. ಒಟ್ಟು 2,436.97 ಟನ್‌ ಬಂಗಾರ ಹೊಂದಿದೆ.

* ರಷ್ಯಾ: ರಷ್ಯಾವು ತನ್ನ ವಿದೇಶೀ ವಿನಿಮಯ ಸಂಗ್ರಹಗಳನ್ನು ವೈವಿಧ್ಯಗೊಳಿಸಲು, ವಿಶೇಷವಾಗಿ ಉಕ್ರೇನ್ ಸಂಘರ್ಷದ ನಂತರ ತನ್ನ ಚಿನ್ನದ ಹಿಡುವಳಿಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಮೂಲಕ 2,335.85 ಟನ್‌ ಚಿನ್ನವನ್ನು ಹೊಂದಿದೆ.

* ಚೀನಾ: ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾ, ತನ್ನ ಕರೆನ್ಸಿಯನ್ನು ಬಲಪಡಿಸಲು ಮತ್ತು ಯುಎಸ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ತನ್ನ ಚಿನ್ನದ ಸಂಗ್ರಹಗಳನ್ನು ಸಕ್ರಿಯವಾಗಿ ವಿಸ್ತರಿಸಿದ್ದು, 2,264.32 ಟನ್‌ ಹೊಂದಿದೆ.

ಜಪಾನ್: ಜಪಾನ್ ತನ್ನ ಹೆಚ್ಚಿನ ರಾಷ್ಟ್ರೀಯ ಸಾಲವನ್ನು ಗಮನದಲ್ಲಿಟ್ಟುಕೊಂಡು ತನ್ನ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಗಣನೀಯ ಚಿನ್ನದ ಸಂಗ್ರಹಗಳನ್ನು ಸಂಗ್ರಹಿಸಿದೆ. 845.97 ಟನ್‌ ಹೊಂದಿದೆ.

* ಭಾರತ: ಭಾರತವು ಚಿನ್ನದ ಸಂಗ್ರಹಗಳಲ್ಲಿ ಜಾಗತಿಕವಾಗಿ 8ನೇ ಸ್ಥಾನದಲ್ಲಿದೆ. ಇಲ್ಲಿ, ಚಿನ್ನವು ಕೇವಲ ಹಣಕಾಸಿನ ಮೌಲ್ಯವನ್ನು ಹೊಂದಿಲ್ಲ, ಆದರೆ ಗಮನಾರ್ಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ, ಮನೆಗಳು ಅಪಾರ ಪ್ರಮಾಣದ ಖಾಸಗಿ ಚಿನ್ನವನ್ನು ಹೊಂದಿವೆ. 840.76 ಟನ್‌ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+