ವಿಶ್ವದ ಭಾರೀ ಗಾತ್ರದ ಮನುಷ್ಯನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮೆಕ್ಸಿಕೋ, ಮೇ 10 : ತೂಕ ಇಳಿಸಿಕೊಳ್ಳಲು ಅಣಿಯಾಗಿದ್ದ ವಿಶ್ವದ ಭಾರೀ ತೂಕದ ವ್ಯಕ್ತಿ ಮೆಕ್ಸಿಕೋದ ಜಾನ್ ಪೆಡ್ರೋ ಫ್ರಾಂಕೊ (600 ಕೆಜಿ) ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಗಜಗಾತ್ರದ ಜಾನ್ ಪೆಡ್ರೋ ಫ್ರಾಂಕೊ ತನ್ನ ತೂಕವನ್ನು ಅರ್ಧದಷ್ಟು ಇಳಿಸಿಕೊಳ್ಳಲು ಬಂದಿದ್ದು ಅವರಿಗೆ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ಮಾಡಲಾಗಿದೆ ಎಂದು ಸರ್ಜನ್ ಜೋಸ್ ಕ್ಯಾಸ್ಟಾನೆಡಾ ತಿಳಿಸಿದ್ದಾರೆ.

World's heaviest man goes under knife in Mexico

ಸರ್ಜರಿ ಯಶಸ್ವಿಯಾಗಿದ್ದು, ಮತ್ತೊಂದು ಶಸ್ತ್ರಕ್ರಿಯೆ ನಂತರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ. ಈ ಸರ್ಜರಿಯು ಅತ್ಯಂತ ಸೂಕ್ಷ್ಮವಾಗಿದ್ದು, ಆತನ ದೇಹಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ 595 ಕೆಜಿ ತೂಕವಿದ್ದ ಈತ ಡಯಾಬಿಟಿಸ್ ಮತ್ತು ರಕ್ತದ ಏರೋತ್ತಡದಿಂದ ಬಳಲುತ್ತಿದ್ದ. ಈ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತಂದು ಚಿಕಿತ್ಸೆ ನೀಡಲಾಗಿದೆ.

ವಿಪರೀತ ತೂಕದಿಂದಾಗಿ ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಫ್ರಾಂಕೊಗೆ ತನ್ನ ಅಗಾಧ ದೇಹವೇ ಶಾಪವಾಗಿತ್ತು. ನವೆಂಬರ್‍ ನಲ್ಲಿ ಇನ್ನೊಂದು ಸುತ್ತಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು.

ಆತನ ಹೊಟ್ಟೆಯಲ್ಲಿನ ಅಂಗಾಂಗಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆ ಬಳಿಕ ಫ್ರಾಂಕೋ ತೂಕ ಅರ್ಧದಷ್ಟು ಇಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಶ್ವದ ಭಾರೀ ತೂಕದ ಮಹಿಳೆ ಎಂದು ಹೇಳಲಾಗಿದ್ದ ಈಜಿಪ್ಟ್‍ ನ ಎಮಾನ್ ಎಂಬ ಮಹಿಳೆಯ ತೂಕವನ್ನು ಮುಂಬೈನ ಸೈಫಿ ಆಸ್ಪತ್ರೆ ವೈದ್ಯರು ಅರ್ಧಕ್ಕಿಂತ ಹೆಚ್ಚು ಭಾಗದಷ್ಟು ಇಳಿಸಿದ್ದರು. ಈ ಮಹಿಳೆಗೆ ಈಗ ಅಬುಧಾಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+