Israel And Iran: ಇರಾನ್ ಸುಪ್ರೀಂ ಲೀಡರ್ ಕಥೆ ಮುಗಿಸಲು ಇಸ್ರೇಲ್ ಸ್ಕೆಚ್?
ಇಸ್ರೇಲ್ ಸೇನೆಯಿಂದ ಭೀಕರ ದಾಳಿ ಶುರುವಾಗಿದ್ದು, ಇನ್ನೇನು ಇರಾನ್ ಸುಪ್ರೀಂ ಲೀಡರ್ ಅಂದ್ರೆ ಅಲಿ ಖಮೇನಿ ಕೂಡ ಫಿನಿಶ್ ಆಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ, ಅಮೆರಿಕ ಕೂಡ ಈ ಯುದ್ಧದ ಅಖಾಡಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡಲು ಸಜ್ಜಾಗಿ ಕೂತಿದ್ದು, ಇದೇ ಸಮಯದಲ್ಲಿ ಮತ್ತೊಂದು ಘೋರ ಸುದ್ದಿ ಹೊರ ಬಿದ್ದಿದೆ. ಈಗಿರುವ ಮಾಹಿತಿ ಪ್ರಕಾರ ಇಂದು ರಾತ್ರಿ ಒಳಗೆ ಇರಾನ್ ಸುಪ್ರೀಂ ಲೀಡರ್ ಅಂದ್ರೆ ಅಲಿ ಖಮೇನಿ ಹತ್ಯೆಗೆ ಸ್ಕೆಚ್ ರೆಡಿ ಆಗಿದೆಯಂತೆ!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಇರಾನ್ ವಿರುದ್ಧ ಆಕ್ರೋಶದ ಕಹಳೆಯ ಮೊಳಗಿಸಿದ್ದಾರೆ. ನಾವು ಸುಮ್ಮನೆ ಕೂತಿಲ್ಲ, ಎಲ್ಲವನ್ನೂ ಪ್ಲಾನ್ ಮಾಡಿ ಇಡೀ ಇರಾನ್ ಆಕಾಶ ಸುತ್ತುವರಿದಿದ್ದೀವಿ. ನಮ್ಮ ಜೊತೆಗೆ ಇದೆಲ್ಲಾ ಇಟ್ಟುಕೊಳ್ಳಬೇಡಿ, ಅಂತಾ ಇದೀಗ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಮೆಸೇಜ್ ಕೊಟ್ಟಿದ್ದರು. ಇಷ್ಟಾದರೂ ಮತ್ತೆ ಮತ್ತೆ ಇರಾನ್ ದಾಳಿಯನ್ನ ನಡೆಸುತ್ತಿದ್ದ ಹಿನ್ನೆಲೆ, ಇದೀಗ ನೇರವಾಗಿ ಇರಾನ್ ಸುಪ್ರೀಂ ಲೀಡರ್ ಅಂದ್ರೆ ಅಲಿ ಖಮೇನಿ ಕಥೆಯನ್ನೇ ಮುಗಿಸಿ ಹಾಕಲು ಇಸ್ರೇಲ್ & ಅಮೆರಿಕ ಮುಂದಾಗಿದೆಯಂತೆ!

ಅಲಿ ಖಮೇನಿ ಹತ್ಯೆಗೆ ಸ್ಕೆಚ್?
ಅಂದಹಾಗೆ ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇಂದು ರಾತ್ರಿಯೇ ಇರಾನ್ ನೆಲದಲ್ಲಿ ಘೋರ ದಾಳಿ ನಡೆಯಲಿದೆ ಎನ್ನಲಾಗಿದೆ. ಆ ಪ್ರಕಾರ ಇರಾನ್ ದೇಶದ ಸರ್ವೋಚ್ಛ ನಾಯಕ ಅಂದ್ರೆ ಸುಪ್ರೀಂ ಲೀಡರ್ ಅಲಿ ಖಮೇನಿ ಹತ್ಯೆಗೆ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಸ್ಕೆಚ್ ಸಿದ್ಧವಾಗಿದೆಯಂತೆ. ಡೊನಾಲ್ಡ್ ಟ್ರಂಪ್ ಕಡೆಯಿಂದ ಕೂಡ ಈ ವಿಚಾರದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಯಲಿದೆ. ಈ ನಡುವೆ ಖುದ್ದು ಅಲಿ ಖಮೇನಿ ಕೊಲೆ ಕೂಡ ನಡೆಯಲಿದೆ ಎಂಬ ಆರೋಪ ಕೂಡ ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications