El Nino returns: ದಾಖಲೆಯ ತಾಪಮಾನ ಎದುರಿಸಲಿರುವ ಜನ, ವಿಜ್ಞಾನಿಗಳ ಎಚ್ಚರಿಕೆ
ಹವಾಮಾನ ಬದಲಾವಣೆ ಮತ್ತು ಎಲ್ ನಿನೊ (El Nino) ಹವಾಮಾನ ವಿದ್ಯಮಾನ ವಾಪಸಾಗುವ ಲಕ್ಷಣಗಳಿರುವ ಕಾರಣ 2023 ಅಥವಾ 2024 ರಲ್ಲಿ ಜಗತ್ತು ಹೊಸ ರೀತಿಯ ಸರಾಸರಿ ತಾಪಮಾನದ ದಾಖಲೆಯನ್ನು ಮುಟ್ಟಿಲಿದೆ. ಜನರು ಬಿಸಿಲಿನ ಝಳಕ್ಕೆ ಬೆಚ್ಚಿಬೀಳುವ ದಿನಗಳು ಬರಲಿವೆ ಎಂದು ಹವಾಮಾನ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.
ಸಾಮಾನ್ಯವಾಗಿ ಜಾಗತಿಕ ತಾಪಮಾನವನ್ನು ಸ್ವಲ್ಪ ಕಡಿಮೆ ಮಾಡುವ ಪೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಹವಾಮಾನದ ಮಾದರಿಗಿಂತ ಹೆಚ್ಚಾಗಿ ಮೂರು ವರ್ಷಗಳ ನಂತರ, ಎಲ್ ನಿನೊ ಮಾದರಿಗಳು ಹೆಚ್ಚಾಗಲಿದ್ದು, ಈ ವರ್ಷ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಮಾದರಿಗಳು ಸೂಚಿಸುತ್ತವೆ.

ಎಲ್ ನಿನೊ ಮಾದರಿಗಳ ಪ್ರವೇಶದ ಸಮಯದಲ್ಲಿ, ಸಮಭಾಜಕ ವೃತ್ತದ ಉದ್ದಕ್ಕೂ ಪಶ್ಚಿಮಕ್ಕೆ ಬೀಸುವ ಗಾಳಿಯು ನಿಧಾನಗೊಳ್ಳುತ್ತದೆ ಮತ್ತು ಬೆಚ್ಚಗಿನ ನೀರನ್ನು ಪೂರ್ವಕ್ಕೆ ತಳ್ಳಳ್ಳುತ್ತದೆ, ಬೆಚ್ಚಗಿನ ಮೇಲ್ಮೈ ಸಾಗರ ತಾಪಮಾನವನ್ನು ಸೃಷ್ಟಿಸುತ್ತದೆ.
"ಎಲ್ ನಿನೋ ಸಾಮಾನ್ಯವಾಗಿ ಜಾಗತಿಕ ಮಟ್ಟದಲ್ಲಿ ದಾಖಲೆ ಮುರಿಯುವ ತಾಪಮಾನಕ್ಕೆ ಸಂಬಂಧಿಸಿದೆ. ಇದು 2023 ಅಥವಾ 2024 ರಲ್ಲಿ ಸಂಭವಿಸುತ್ತದೆಯೇ ಎಂಬುದು ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ, ಆದರೆ ಇದು ಬರುವ ಸಾಧ್ಯತೆ ಹೆಚ್ಚಿದೆ "ಎಂದು ವಿಜ್ಞಾನಿ ಕಾರ್ಲೊ ಬ್ಯೂಂಟೆಂಪೊ ಹೇಳಿದ್ದಾರೆ.
ಹವಾಮಾನ ಮಾದರಿಗಳು ಬೇಸಿಗೆಯ ಕೊನೆಯಲ್ಲಿ ಎಲ್ ನಿನೊ ಮಾದರಿಗೆ ಮರಳಲಿದೆ ಎಂಬುದನ್ನು ಸೂಚಿಸುತ್ತವೆ ಮತ್ತು ವರ್ಷದ ಅಂತ್ಯದ ವೇಳೆಗೆ ಪ್ರಬಲ ಎಲ್ ನಿನೊ ಹವಾಮಾನ ಮಾದರಿಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ ಎಂದು ಕಾರ್ಲೊ ಬುವೊಂಟೆಂಪೊ ಮಾಹಿತಿ ನೀಡಿದ್ದಾರೆ.
.

ಇಲ್ಲಿಯವರೆಗೆ 2016ರನ್ನು ವಿಶ್ವದ ಅತ್ಯಂತ ತಾಪಮಾನದ ವರ್ಷವೆಂದು ಪರಿಗಣಿಸಲಾಗಿದೆ. ಕಳೆದ ಎಂಟು ವರ್ಷಗಳು ವಿಶ್ವದ ಎಂಟು ಅತ್ಯಂತ ತಾಪಮಾನದ ದಾಖಲೆಗಳಾಗಿಯ ಉಳಿದಿವೆ. ಇದು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಉಂಟಾದ ದೀರ್ಘಕಾಲೀನ ತಾಪಮಾನ ಏರಿಕೆಯ ಪ್ರವೃತ್ತಿಯನ್ನು ತಿಳಿಸುತ್ತಿದೆ.
ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಗ್ರಾಂಥಮ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಉಪನ್ಯಾಸಕ ಫ್ರೆಡ್ರಿಕ್ ಒಟ್ಟೊ, "ಎಲ್ ನಿನೊ ಮತ್ತು ಇಂಧನದ ತಾಪಮಾನವು ದೇಶಗಳು ಈಗಾಗಲೇ ಅನುಭವಿಸುತ್ತಿರುವ ತೀವ್ರ ಶಾಖದ ಅಲೆಗಳು, ಬರ ಮತ್ತು ಕಾಡ್ಗಿಚ್ಚುಗಳಂತಹ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಇನ್ನಷ್ಟು ಹದಗೆಡಿಸಬಹುದು. ಎಲ್ ನಿನೊ ಹೆಚ್ಚಾದರೆ, 2023ರ ವರ್ಷವೂ 2016 ಕ್ಕಿಂತ ಹೆಚ್ಚು ತಾಪಮಾನವನ್ನು ಅನುಭವಿಸುವ ಸಾಧ್ಯತೆಯಿದೆ" ಎಂದಿದ್ದಾರೆ.
2022 ರಲ್ಲಿ ಯುರೋಪ್ ತನ್ನ ಅತಿ ಹೆಚ್ಚು ಬೇಸಿಗೆಯನ್ನು ಅನುಭವಿಸಿದೆ. ಆದರೆ, ಇತ್ತ ಹವಾಮಾನ ಬದಲಾವಣೆಯಿಂದ ಉಂಟಾದ ವಿಪರೀತ ಮಳೆಯು ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹವನ್ನು ಉಂಟುಮಾಡಿತು. ಫೆಬ್ರವರಿಯಲ್ಲಿ ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯು ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿಯೂ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಬೆಂಗಳೂರಿನಲ್ಲಿ ಈ ನಡುವೆ ವರ್ಷದ ಅತ್ಯಂತ ತಾಪಮಾನದ ದಿನವಾಗಿ ಏಪ್ರಿಲ್ 18ರ ಮಂಗಳವಾರ ಸಾಕ್ಷಿಯಾಗಿದೆ. ಅಂದು ಬೆಂಗಳೂರಿನಲ್ಲಿ 36.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು ಎಂದು ವರಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ ಏಪ್ರಿಲ್ 30, 2022 ರಂದು ದಾಖಲಾಗಿತ್ತು. ಈ ವೇಳೆ ತಾಪಮಾನ 36.8 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟಿತ್ತು.












Click it and Unblock the Notifications