Relationship: ಮಹಿಳೆಯರಿಗೆ ಇಂತಹ ಪುರುಷರೇ ಇಷ್ಟ, ಯಾಕೆ ಗೊತ್ತಾ?
ಹುಡುಗಿಯ ಮನಸ್ಸು ಗೆಲ್ಲಲು ಹುಡುಗರು ಏನೆಲ್ಲಾ ಮಾಡ್ತಾರೆ ಹೇಳಿ? ಇದಕ್ಕೆ ಸಿಂಪಲ್ಲಾದ ಉತ್ತರ 'ಏನ್ ಬೇಕಾದ್ರೂ ಮಾಡ್ತಾರೆ!'. ಇದೆಲ್ಲ ಜಗತ್ತಿನಲ್ಲಿ ಜಾರಿಯಲ್ಲಿರುವ ಅಘೋಷಿತ ನಿಮಯ. ಅಮೆರಿಕದಿಂದ ಹಿಡಿದು ಆಸ್ಟ್ರೇಲಿಯಾ ತನಕ, ಭಾರತದಿಂದ ಹಿಡಿದು ಬ್ರೆಜಿಲ್ ತನಕ ಇದೇ ರೀತಿ ಹುಡುಗಿ ಮನಸ್ಸು ಗೆಲ್ಲಲು ಹುಡುಗ ಪರದಾಡುತ್ತಾನೆ. ಅದ್ರಲ್ಲೂ ಜಿಮ್ ಸೇರಿ ಬಾಡಿ ಬೆಳೆಸೋರೆ ಹೆಚ್ಚು, ಆದ್ರೆ ಇದು ಉಪಯೋಗಕ್ಕೆ ಬರಲ್ಲ ಅಂತಿದೆ ಅಧ್ಯಯನ.
ಹೌದು, ಬಹುತೇಕ ಹುಡುಗಿಯರು ಜಿಮ್ ಬಾಡಿ ಇದ್ದರೆ ಇಷ್ಟ ಪಡ್ತಾರೆ, ಮದುವೆ ಆಗ್ತಾರೆ ಅನ್ನೋದು ಬಹುತೇಕ ಹುಡುಗರ ಕನಸು. ಆದರೆ ಹುಡುಗರಾ ಇಲ್ಲಿ ಕೇಳಿ, ನಿಮ್ಮ ಕನಸು ಕನಸಾಗಿಯೇ ಉಳಿಯುತ್ತೆ. ಯಾಕಂದ್ರೆ ಹೊಸ ಅಧ್ಯಯನ ಹೇಳಿದೆ, ಹುಡುಗಿಯರು ಜಿಮ್ ಬಾಡಿ ಇರೋ ಹುಡುಗರನ್ನ ಇಷ್ಟಪಡುವುದು ತಾತ್ಕಾಲಿಕ ಮಾತ್ರ. ಆದ್ರೆ ಹುಡುಗಿಯರು & ಮಹಿಳೆಯರು ಹಾಸ್ಯ ಪ್ರಜ್ಞೆ ಇರುವ ಹುಡುಗನನ್ನೇ ತಮ್ಮ ಬಾಳ ಸಂಗಾತಿಯಾಗಿ ವರಿಸಲು ಇಷ್ಟ ಪಡುತ್ತಾರೆ ಎಂದು ಹೇಳಿದೆ ಅಮೆರಿಕದ ಸಂಶೋಧಕರ ಹೊಸ ಅಧ್ಯಯನ.

ಹುಡುಗಿ ಮನಸ್ಸು ಏನ್ ಹೇಳುತ್ತೆ?
ಅಮೆರಿಕದ ಅರ್ಕಾನ್ಸಾಸ್ ವಿವಿ ಪ್ರಾಧ್ಯಾಪಕ ಮಿಚ್ ಬ್ರೌನ್ ಹೇಳುವಂತೆ ಹುಡುಗಿ ಮನಸ್ಸು ಪುರುಷನ ದೈಹಿಕ ಶಕ್ತಿ ಹಾಗೂ ಹಾಸ್ಯ ಪ್ರಜ್ಞೆ ಎರಡನ್ನೂ ಇಷ್ಟಪಡುತ್ತದೆ. ಆದರೆ ದೈಹಿಕ ಶಕ್ತಿ ತಾತ್ಕಾಲಿಕ, ಹುಡುಗಿಯರು ಶಾಶ್ವತವಾಗಿ ಅಂದ್ರೆ ಮದುವೆಯಾಗಲು ಇಷ್ಟ ಪಡುವುದೆ ಹಾಸ್ಯ ಪ್ರಜ್ಞೆ ಇರುವ ಹುಡುಗನನ್ನು ಅಂತಾ ತಿಳಿಸುತ್ತಾರೆ. ಈ ಕುರಿತು ನಡೆಸಿದ ನೂತನ ಅಧ್ಯಯನ ಹೊಸ ಸತ್ಯ ತಿಳಿಸಿದೆ. ಈ ಮೂಲಕ ಮಹಿಳೆಯರು ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಹೇಗೆಲ್ಲ ವಿವಿಧತೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ ಗೊತ್ತಾಗುತ್ತದೆ.
ಇನ್ನು ಈ ಸಂಶೋಧನೆ, ಸಾಮಾಜಿಕ ಗ್ರಹಿಕೆ & ಪರಸ್ಪರ ಆದ್ಯತೆ ರೂಪಿಸುವ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಕಸನೀಯ ದೃಷ್ಟಿಕೋನ ಕೇಂದ್ರೀಕರಿಸುತ್ತದೆ. ಅಲ್ಪಾವಧಿ ಮತ್ತು ದೀರ್ಘಾವಧಿ ಸಂಗಾತಿಯ ಆಯ್ಕೆ ವಿಚಾರದಲ್ಲಿ ಮಹಿಳೆಯರು ಯಾವ ರೀತಿ ನಿರ್ಧಾರವನ್ನ ಕೈಗೊಳ್ಳುತ್ತಾರೆ ಎಂಬುದು ಈ ಅಧ್ಯಯನದ ಮೂಲಕ ತಿಳಿದುಬಂದಿದೆ. ಅಲ್ಲದೆ, ದೈಹಿಕ ಲಕ್ಷಣ & ನಡವಳಿಕೆ ಪೈಕಿ ಹುಡುಗಿಯರು ಅಲ್ಪಾವಧಿ ಹಾಗೂ ದೀರ್ಘಾವಧಿಗೆ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕೂಡ ಸ್ಪಷ್ಟವಾಗಿದೆ. ಹಾಗಾದರೆ ಈ ಅಧ್ಯಯನಕ್ಕೆ ಒಟ್ಟು ಎಷ್ಟು ಜನರನ್ನ ಆಯ್ಕೆ ಮಾಡಲಾಗಿತ್ತು ಗೊತ್ತಾ?

ಅಧ್ಯಯನದಲ್ಲಿ ಪಾಲ್ಗೊಂಡವರ ಮಾತು ಏನು?
ಇನ್ನು ಈ ಅಧ್ಯಯನ ನಡೆಸಲು ಒಟ್ಟು 394 ಮಹಿಳೆಯರನ್ನ ಆಯ್ಕೆ ಮಾಡಿಕೊಂಡಿದ್ದರು ಸಂಶೋಧಕರು. 19 ವರ್ಷ ವಯಸ್ಸಿನ ಒಳಗಿರುವ 251 ಯುವತಿಯರು & 143 ವಯಸ್ಕರು ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಈ ಮೊದಲು ಅಂದುಕೊಂಡ ವಿಚಾರಕ್ಕಿಂತ ಈಗಿನ ಅಧ್ಯಯನ ಹೊಸದನ್ನೇ ಕಲಿಸಿದೆ ಎನ್ನುತ್ತಿದ್ದಾರೆ ಸಂಶೋಧಕರು. ಈ ಹಿಂದೆ ಮಹಿಳೆಯರು ಅಥವಾ ಯುವತಿಯರು, ಪುರುಷರ ಮೈಕಟ್ಟನ್ನೇ ಇಷ್ಟಪಡ್ತಾರೆ ಎಂಬ ಆಲೋಚನೆ ಇತ್ತು. ಆದರೆ ಅದು ಅಲ್ಪಾವಧಿಗಾ? ಅಥವಾ ದೀರ್ಘಾವಧಿ ಸಂಬಂಧಕ್ಕಾ? ಎಂಬ ಪ್ರಶ್ನೆಗಳು ಸದಾ ಕಾಡುತ್ತಿದ್ದವು. ಆದರೆ ಹೊಸ ಅಧ್ಯಯನ ಸಾಕಷ್ಟು ವಿಚಾರ ಸ್ಪಷ್ಟಪಡಿಸಿದೆ.

ಒಟ್ನಲ್ಲಿ ಹುಡುಗಿಯರ ಮನಸ್ಸು ಗೆಲ್ಲಲು ನಮ್ ಹುಡುಗರು ಏನೆಲ್ಲ ಸರ್ಕಸ್ ಮಾಡ್ತಿದ್ರು. ಆದ್ರೆ ಅಲ್ಲಿ ಯಾರೋ ಜೋಕ್ ಮಾಡುವ ವ್ಯಕ್ತಿ ಹುಡುಗಿಯ ಮನಸ್ಸು ಗೆಲ್ಲುತ್ತಿದ್ದ. ಇದು ಅರ್ಥವಾಗದೆ ಒದ್ದಾಡುತ್ತಿದ್ದ ಜಿಮ್ ಬಾಡಿ ಹುಡುಗರಿಗೆ ಅಮೆರಿಕದ ಈ ಅಧ್ಯಯನ ಹೊಸ ವಿಚಾರ ಕಲಿಸಿಕೊಟ್ಟಿದೆ. ಹಾಗಾದ್ರೆ ಇನ್ಮುಂದೆ ಹುಡುಗಿ ಮನಸ್ಸು ಗೆದ್ದು, ಮದುವೆ ಆಗಲು ಹುಡುಗರು ಯಾವ ಟ್ರಿಕ್ಸ್ ಫಾಲೋ ಮಾಡ್ತಾರೆ? ಈಗ ಜಿಮ್ ಮಾಡೋದು ಬಿಟ್ಟು ಜೋಕ್ಸ್ ಕಲಿಯುತ್ತಾರಾ? ಅಥವಾ ಈಗಿನ ಹಾದಿಯಲ್ಲೇ ಮುಂದುವರಿಯುತ್ತಾರಾ? ಬೇರೆ ಏನೇನು ಸರ್ಕಸ್ ಮಾಡ್ತಾರೆ? ಅನ್ನೋದನ್ನ ಮುಂದೆ ಕಾದು ನೋಡಬೇಕಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications