ಲಾಕ್‌ಡೌನ್ ನಿಯಮ ಮುರಿದಿದ್ದಕ್ಕೆ ಬಂಧನ: ಮಹಿಳೆಯ ಬೆತ್ತಲೆ ಪ್ರತಿಭಟನೆ
ಮ್ಯಾಡ್ರಿಡ್ (ಸ್ಪೇನ್) ಏಪ್ರಿಲ್ 16: ಕೊರೊನಾ ವೈರಸ್ ತಡೆಯುವ ಸಲುವಾಗಿ ಹಲವು ದೇಶಗಳು ಲಾಕ್‌ಡೌನ್ ಘೋಷಣೆ ಮಾಡಿದೆ. ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರ ಬರುವುದನ್ನು ತಡೆದಿದ್ದಾರೆ. ಲಾಕ್‌ಡೌನ್ ನಿಯಮ ಮುರಿದವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
ಆದರೆ, ಈ ರೀತಿ ತನ್ನ ಮೇಲೆ ಪೊಲೀಸರು ಕ್ರಮ ಕೈಗೊಂಡರು ಎಂದು ಮಹಿಳೆಯೊಬ್ಬರು ಪ್ರತಿಭಟನೆ ಮಾಡಿದ್ದಾರೆ. ಆದರೆ, ಇದು ಸಾಮಾನ್ಯದ ಪ್ರತಿಭಟನೆ ಆಗಿರಲಿಲ್ಲ. ತನ್ನ ಬಟ್ಟೆ ಬಿಚ್ಚಿ ಬೆತ್ತಲಾಗಿ, ಪೊಲೀಸ್ ವಾಹನದ ಮೇಲೆ ನಿಂತು ಪ್ರತಿಭಟನೆ ಮಾಡಿದ್ದಾಳೆ. ಈ ಘಟನೆ ಸ್ಪೇನ್ ದೇಶದಲ್ಲಿ ನಡೆದಿದೆ.
ಭಾರತದಂತೆ ಸ್ಪೇನ್‌ನಲ್ಲಿ ಲಾಕ್‌ಡೌನ್ ನಿಯಮ ಇದೆ. ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ. ಆದರೆ, ಈ ರೀತಿ ತಮ್ಮ ಕೆಲಸ ಮಾಡಿದ ಪೊಲೀಸರ ಎದುರು ಮಹಿಳೆಯೊಬ್ಬರು ಹುಚ್ಚಾಟ ನಡೆಸಿದ್ದಾರೆ.

ಟೊರೆಮೊಲಿನೋಸ್ ನಗರದಲ್ಲಿ ನಡೆದ ಘಟನೆ
ಸ್ಪೇನ್ ದೇಶದ ಟೊರೆಮೊಲಿನೋಸ್ ನಗರದ ಕೋಸ್ಟಾ ಡೆಲ್ ಸಾಲ್ ರೆಸಾರ್ಟ್ 41 ಮಹಿಳೆ ವಾಸ ಮಾಡುತ್ತಿದ್ದರು. ಲಾಕ್‌ಡೌನ್ ನಿಯಮ ಇರುವ ಕಾರಣ ಆ ಪ್ರದೇಶದ ಜನರ ಪ್ರವೇಶಕ್ಕೆ ನಿರ್ಬಂಧ ಏರಲಾಗಿತ್ತು. ನಿಯಮ ಮುರಿದು ಮನೆಯಿಂದ ಆಚೆ ಬಂದ ಮಹಿಳೆಯನ್ನು ಪೊಲೀಸರು ಪ್ರಶ್ನೆ ಮಾಡಿದರು. ನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಬೆತ್ತಲೆ ಪ್ರತಿಭಟನೆ
ಲಾಕ್‌ಡೌನ್ ನಿಯಮ ಪಾಲಿಸದೆ ಇದ್ದ ಕಾರಣ ಪೊಲೀಸರು ನ್ಯಾಯಾಲಯಕ್ಕೆ ಆಕೆಯನ್ನು ಕರೆದುಕೊಂಡು ಹೋದರು. ತಾನು ಮನೆಯಿಂದ ಹೊರಗೆ ಹೋದೆ ಎನ್ನುವ ಕಾರಣ ತನ್ನನ್ನು ನ್ಯಾಯಾಲಯಕ್ಕೆ ಹೋಗುವಂತೆ ಮಾಡಿದರು ಎಂದು ಮಹಿಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂತರ ಬಟ್ಟೆ ಬಿಚ್ಚಿ ಬೆತ್ತಲಾಗಿ ಪೊಲೀಸ್ ವಾಹನದ ಮೇಲೆ ಪ್ರತಿಭಟನೆ ಮಾಡಿದ್ದಾಳೆ.

ಹರಸಾಹಸಪಟ್ಟ ಪೊಲೀಸರು
ಬೆತ್ತಲಾಗಿ, ಪೊಲೀಸ್ ವಾಹನದ ಮೇಲೆ ನಿಂತು ಪ್ರತಿಭಟನೆ ಮಾಡಿದ ಮಹಿಳೆ, ಪೊಲೀಸ್ ವಿರುದ್ಧ ಘೋಷಣೆಯನ್ನು ಕೂಗಿದ್ದಾಳೆ. ಆಕೆಯನ್ನು ನಿಯಂತ್ರಣ ತಂದು, ಹಿಡಿದು ಹಾಕುವಲ್ಲಿ ಪೊಲೀಸರು ಭಾರಿ ಶ್ರಮ ಪಡಬೇಕಾಯಿತು. ಬಳಿಕ ಆಂಬುಲೆನ್ಸ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಹುಚ್ಚಾಟವನ್ನು ಅಲ್ಲಿಯೇ ಇದ್ದವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.

ಸೋಂಕಿತರ ಪಟ್ಟಿಯಲ್ಲಿ ಸ್ಪೇನ್‌ಗೆ 2ನೇ ಸ್ಥಾನ
ಕೊರೊನಾ ವೈರಸ್‌ನಿಂದ ಸ್ಪೇನ್ ದೇಶದ ಪರಿಸ್ಥಿತಿ ಕೂಡ ಹಾಳಾಗಿದೆ. 1 ಲಕ್ಷದ 82 ಸಾವಿರ ಮಂದಿಗೆ ಸೋಂಕು ಇರುವುದು ದೃಢವಾಗಿದೆ. ಅಮೆರಿಕದ ನಂತರದ ಸ್ಥಾನ ಈ ರಾಷ್ಟ್ರಕ್ಕೆ ಸಿಕ್ಕಿದೆ. 19,130 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಿದಾಡುತ್ತಿದ್ದು, ಅಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ.












Click it and Unblock the Notifications