Israel: ಕಾಡ್ಗಿಚ್ಚು ಹೊತ್ತಿಕೊಂಡು ನರಳುತ್ತಿರುವ ಇಸ್ರೇಲ್, ತುರ್ತು ಪರಿಸ್ಥಿತಿ ಘೋಷಣೆ!

ಇಸ್ರೇಲ್ ಇದೀಗ ಡಬಲ್ ಸಂಕಷ್ಟಕ್ಕೆ ಸಿಲುಕಿದೆ, ಒಂದು ಕಡೆ ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಯುದ್ಧ ನಡೆಸುತ್ತಿದೆ. ಯುದ್ಧದ ಕಾರಣಕ್ಕೆ ಗಾಜಾ ಪಟ್ಟಿ ಸೇರಿದಂತೆ ಲೆಬನಾನ್ & ಸಿರಿಯಾ ಮೇಲೂ ದಾಳಿ ಮಾಡುತ್ತಿದೆ. ಇನ್ನೊಂದು ಕಡೆ ತನ್ನ ದೇಶದ ಮೇಲೆ ಆಕ್ರಮಣ ನಡೆಯುವ ಭೀತಿ ಕೂಡ ಎದುರಿಸುತ್ತಿದೆ. ಇಂತಹ ಸಮಯದಲ್ಲೇ, ಕಾಡ್ಗಿಚ್ಚು ಹೊತ್ತಿಕೊಂಡು ನರಳುತ್ತಿರುವ ಇಸ್ರೇಲ್ ದಿಢೀರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.

ಇಸ್ರೇಲ್ ಇದೀಗ ಯುದ್ಧದ ಜೊತೆಯಲ್ಲೇ ನೈಸರ್ಗಿಕ ವಿಕೋಪದ ಸುಳಿಯಲ್ಲೂ ಸಿಲುಕಿದೆ. ಅಂದಹಾಗೆ ಮಧ್ಯಪ್ರಾಚ್ಯದಲ್ಲಿ ಇದೀಗ ಹಲವಾರು ಯುದ್ಧ ಮಾಡುತ್ತಿರುವ ಇಸ್ರೇಲ್ ನೆಲದಲ್ಲೇ ಭಾರಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಏಪ್ರಿಲ್ 30ರ ಬುಧವಾರ ಪಶ್ಚಿಮ ಜೆರುಸಲೇಂನಿಂದ 30 ಕಿಮೀ ದೂರದ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಬಿದ್ದಿದೆ. ಹೀಗಾಗಿ ಇದೀಗ ಬೆಂಕಿ ನಂದಿಸಲು ಇಸ್ರೇಲ್ ಪರದಾಡುತ್ತಿದೆ ಎನ್ನಲಾಗಿದೆ. ಹೀಗೆ ದಿಢೀರ್ ಬೆಂಕಿ ಬಿದ್ದ ಹಿನ್ನೆಲೆ ಅರಣ್ಯ ಪ್ರದೇಶ ಹಾಗೂ ಹೊಲ ಬೆಂಕಿಗೆ ಆಹುತಿ ಆಗಿದೆ. ಸರ್ಕಾರ ಕೂಡ ಬೆಂಕಿಯನ್ನ ತಕ್ಷಣ ಹಿಡಿತಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹಲವು ರಸ್ತೆಗಳ ಸಂಪರ್ಕ ಕೂಡ ಬಂದ್ ಆಗಿದೆ.

Wildfires Prompt National Emergency in Israel And Explore The Present Situation

ಜೀವ ಉಳಿಸಿಕೊಳ್ಳಲು ಜನರ ಪರದಾಟ

ಬೆಂಕಿಯ ಕೆನ್ನಾಲಿಗೆ ರಾಚುತ್ತಿರುವ ರೀತಿ ನೋಡಿದರೆ ಪರಿಸ್ಥಿತಿ ಈಗಲೇ ಹಿಡಿತಕ್ಕೆ ಸಿಗುತ್ತಾ? ಎಂಬುದೇ ಅನುಮಾನವಾಗಿದೆ. ಜೆರುಸಲೇಂ-ಟೆಲ್ ಅವೀವ್ ಹೈವೇ ಕೂಡ ಬಂದ್ ಆಗುವ ಸ್ಥಿತಿಗೆ ಕಾಡ್ಗಿಚ್ಚು ಹಬ್ಬಿದ್ದು, ಮತ್ತೊಂದು ಕಡೆ ಈ ಘಟನೆ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಜಮಿನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಾಡ್ಗಿಚ್ಚು ಹಬ್ಬಿರುವ ಹಿನ್ನೆಲೆ ಇದೀಗ ನೆತನ್ಯಾಹು ಬೆಂಜಮಿನ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ಜನರನ್ನು ಕೂಡ ತೆರವು ಮಾಡಲಾಗಿದೆ. ಹಾಗೇ ಇನ್ನೊಂದು ಕಡೆ ಬೆಂಕಿಯ ಕೆನ್ನಾಲಿಗೆಯ ರೂಪ ಕಂಡು ಜನರು ಕೂಡ ಜಾಗ ಬಿಟ್ಟು ಓಡಿದ್ದಾರೆ.

ಇಸ್ರೇಲ್ ಬೆನ್ನಿಗೆ ನಿಂತ ದೇಶಗಳು

ಒಟ್ನಲ್ಲಿ ಗಾಜಾ ಪಟ್ಟಿ ಸೇರಿದಂತೆ ತಮ್ಮ ಸುತ್ತಮುತ್ತ ಇರುವ ಹಲವು ದೇಶಗಳ ಜೊತೆಯಲ್ಲಿ ಯುದ್ಧ ಮಾಡುತ್ತಿರುವ ಇಸ್ರೇಲ್ ಸೇನೆಗೆ ಇದೀಗ ಪ್ರಕೃತಿ ಕೂಡ ಸವಾಲು ಹಾಕಿದೆ. ಹೀಗಾಗಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮತ್ತೊಂದು ಕಡೆ ಇದೇ ರೀತಿಯಾಗಿ, ಕಾಡಿನ ಬೆಂಕಿ ಹಬ್ಬುತ್ತಾ ಹೋದರೆ ಇಸ್ರೇಲ್ ದೇಶದ ನಗರಗಳ ಮೇಲೆ ಕೂಡ ಭಾರಿ ದೊಡ್ಡ ಪರಿಣಾಮ ಸಾಧ್ಯತೆ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯ ಕೂಡ ಇಸ್ರೇಲ್‌ಗೆ ಈಗ ಸಹಾಯ ಮಾಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+