Palestine- Israel War: ಯುದ್ಧದ ಹಿಂದಿನ ಮಾಸ್ಟರ್ ಮೈಂಡ್, ಆಪರೇಷನ್ ಕುರಿತ ಮಹತ್ವದ ಮಾಹಿತಿ
ನವದೆಹಲಿ, ಅಕ್ಟೋಬರ್ 08: ಇಸ್ರೇಲಿನ ಮೇಲೆ ಹಮಾಸ್ ಉಗ್ರರು ಶನಿವಾರ ದಿಢೀರ್ ಬಹುಮುಖ ದಾಳಿ ನಡೆಸಿದ್ದ ಪರಿಣಾಮ ನೂರಾರು ಇಸ್ರೇಲಿಗಳು ಮೃತಪಟ್ಟಿದ್ದಾರೆ. ಇತ್ತ ಪ್ಯಾಲೆಸ್ತೆನಿಯ ಹಲವರ ಸಾವಾಗಿದೆ. ಈ ಯುದ್ದ ತೀವ್ರಗೊಂಡಿದ್ದು, ಹಮಾಸ್ ಮಿಲಿಟಲಿ ವಿಭಾಗದ ನಾಯಕರೊಬ್ಬರು ಯುದ್ಧಕ್ಕೆ ಇಸ್ರೇಲ್ ಗೆ ಕರೆ ನೀಡಿದ ಸಂದೇಶ ಮುನ್ನೆಲೆಗೆ ಬಂದಿದೆ. ಎರಡು ವರ್ಷದ ಹಿಂದೆ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ಆ ನಾಯಕ ಯಾರು, ಅವನ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.
ಹಮಾಸ್ ಮಿಲಿಟಲಿ ವಿಭಾಗದ ನಾಯಕ ಮೊಹಮ್ಮದ್ ಡೀಫ್ ಅವರು ಈ ಯುದ್ಧವನ್ನು "ಆಪರೇಷನ್ ಎಐ-ಅಕ್ಸಾ ಸ್ಟಾರ್ಮ್" ಎಂದು ಕರೆದಿದ್ದಾರೆ. ಇಸ್ರೇಲ್ ಸಾಕು, ಸಾಕು ಎನ್ನುವವರೆಗೂ ಎಚ್ಚರಿಕೆ ಕೊಡಲು ಮತ್ತು ಪೂರ್ವ ಜೆರುಸಲೆಮ್‌ನಿಂದ ಉತ್ತರ ಇಸ್ರೇಲ್‌ವರೆಗಿನ ಪ್ಯಾಲೆಸ್ಟೀನಿಯಾದವರಿಗೆ ಹೋರಾಟ ಮಾಡಲು ಅವರು ಕರೆ ನೀಡಿದ್ದರು. ಈ ಮೂಲಕ ಜನರು ಹೋರಾಟ ಕಿಚ್ಚು ಆರಂಭಿಸಲಿದ್ದಾರೆ ಎಂದು ತಿಳಿಸಿದ್ದರು.

ಇದಕ್ಕೆ ಗಂಭಿರವಾಗಿ ಪ್ರತಿಕ್ರಿಯಿಸಿರುವ ಇಸ್ರೇಲಿ ರಾಯಭಾರಿ ಕೊಬ್ಬಿ ಶೋಶಾನಿ ಟೆಲ್ ಅವಿವ್ ಮೇಲಿನ ರಾಕೆಟ್ ದಾಳಿಗೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಯುದ್ಧ ಆರಂಭಿಸಿದ ಹಮಾಸ್ ತಕ್ಕ ಬೆಲೆ ತೆರಲಿದೆ ಎಂದು ಭವಿಷ್ಯ ನುಡಿಸಿದರು.
ಈ ಹಿಂದೆ ಇಸ್ರೇಲ್‌ಗೆ ಡೀಫ್ ಎಚ್ಚರಿಕೆ
ಮೊಹಮ್ಮದ್ ಡೀಫ್ ಅವರ ಯುದ್ಧದ ಕರೆ ಸಂದೇಶದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಜೆರುಸಲೆಮ್- ಮೇಲೆ ಹಮಾಸ್‌ನ ಬೇಡಿಕೆಗಳನ್ನು ಪೂರೈಸದಿದ್ದರೆ ಇಸ್ರೇಲ್‌ಗೆ ಭಾರಿ ಬೆಲೆ ತೆರ ಬೇಕಾಗಿದೆ ಎಂದು ಅವರು ಎರಡು ವರ್ಷಗಳ ಹಿಂದೆ ಸಾರ್ವಜನಿಕ ವೇದಿಕೆಯಲ್ಲಿ ಎಚ್ಚರಿಕೆ ನೀಡಿದ್ದರು.
ಪ್ಯಾಲಿಸ್ತೇನಿಯ ಮಿಲಿಟರಿಯ ಡೀಫ್ ಅವರು 1965 ರಲ್ಲಿ ಗಾಜಾದ ಖಾನ್ ಯುನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದವರು. ಶಿಬಿರವಿದ್ಧ ಪ್ರದೇಶವನ್ನು ಈಜಿಪ್ಟ್ ದೇಶ ಆಕ್ರಮಿಸಿಕೊಂಡಿತ್ತು. ಅವರು 1980ರ ದಶಕದ ಹಮಾಸ್‌ಗೆ ಸೇರಿದ್ದು, ಇಸ್ರೇಲಿ ಸೈನಿಕರ ಅಪಹರಣ ಮತ್ತು ಹತ್ಯೆಗಳಲ್ಲಿ ಭಾಗಿ ಆಗಿದ್ದರು.

ಡೀಫ್ ಅವನತಿ ಬಗ್ಗೆ ಊಹಾಪೋಹ
ಕಳೆದ ಎರಡು ದಶಕಗಳಿಗೂ ಹೆಚ್ಚು ಡೀಪ್ ತಲೆಮರೆಸಿಕೊಂಡಿದ್ದರು. ಮತ್ತು ಅನೇಕ ಇಸ್ರೇಲಿ ದಾಳಿಗಳಲ್ಲಿ ತೀವ್ರವಾದ ಗಾಯಗಳನ್ನು ಅನುಭವಿಸಿದ ನಂತರ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿತ್ತು. ಹಮಾಸ್ ಪ್ರಕಾರ, 2014 ರಲ್ಲಿ ಇಸ್ರೇಲಿ ವೈಮಾನಿಕ ದಾಳಿಯು ಅವನ ಹೆಂಡತಿ ಮತ್ತು ಶಿಶುವನ್ನು ಹತ್ಯೆ ಮಾಡಲಾಗಿತ್ತ ಅಂತಲೂ ನಂಬಲಾಗಿತ್ತು.
ಅದಾದ ಬಳಿಕ ಡೀಫ್ ಸಾರ್ವಜನಿಕವಾಗಿ ಅತೀ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಜೆರುಸಲೆಮ್‌ನ ಮೇಲೆ ಹಮಾಸ್‌ನ ಬೇಡಿಕೆಗಳನ್ನು ಪೂರೈಸದಿದ್ದರೆ ಇಸ್ರೇಲ್‌ಗೆ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದ್ದೇ ಅವರ ಕೊನೆಯ ಧ್ವನಿಯನ್ನು ಎರಡು ದೇಶದವರು ಕೇಳಿಸಿಕೊಂಡಿದ್ದರು.
ವಿಶ್ವದ ದೊಡ್ಡಣ್ಣ ದೇಶ ಅಮೆರಿಕಾ 2009 ರಲ್ಲಿ ಪ್ಯಾಲಿಸ್ತೇನಿಯ ಡೀಫ್ ಅನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹಮಾಸ್ ಮಿಲಿಟರಿ ವಿಭಾಗದಲ್ಲಿ ಪ್ರಮುಖ ವ್ಯಕ್ತಿ ಡೀಫ್ ಅವರನ್ನು ಇಸ್ರೇಲಿ ನಾಗರಿಕರ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳಿಗೆ ಈತನೇ ಜವಾಬ್ದಾರಿ ಆಗಿದ್ದಾನೆ ಎಂದು ಆರೋಪಿಸಿತು.
ಇನ್ನೂ ಮುಖ್ಯವಾಗಿ ಇಸ್ರೇಲ್ ವಿರುದ್ಧ ರಾಕೆಟ್‌ಗಳು, ಸುರಂಗಗಳು, ಡ್ರೋನ್‌ಗಳು ಮತ್ತು ಆತ್ಮಹತ್ಯಾ ಬಾಂಬರ್‌ಗಳ ಬಳಕೆ ಒಳಗೊಂಡಿರುವ ಹಮಾಸ್‌ನ ಮಿಲಿಟರಿ ದಾಳಿ ಮತ್ತು ಅದರ ಕಾರ್ಯತಂತ್ರ ಮಾಸ್ಟರ್‌ಮೈಂಡ್ ಡೀಫ್ ಎಂದು ಇಸ್ರೇಲ್ ಪರಿಗಣಿಸಿದೆ ಎಂದು ವರದಿ ಆಗಿದೆ.












Click it and Unblock the Notifications