ಕೋವೊವಾಕ್ಸ್‌ ತುರ್ತು ಬಳಕೆಗೆ WHO ಅನುಮೋದನೆ

ಯುಎಸ್‌ ಸಂಸ್ಥೆಯ ಕೋವಿಡ್‌ ಲಸಿಕೆ ನೋವೊವಾಕ್ಸ್‌ನ ಮೂಲಕ ನೀಡಲಾದ ಪರವಾನಗಿ ಅಡಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುವ ಕೋವೊವಾಕ್ಸ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಶುಕ್ರವಾರ ಅನುಮೋದನೆ ನೀಡಿದೆ. ಕಡಿಮೆ ಆದಾಯ ದೇಶಗಳಲ್ಲಿ ಲಸಿಕೀಕರಣವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೋವೊವಾಕ್ಸ್‌ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೂಲಗಳು ತಿಳಿಸಿವೆ.

"ಇಂದು, ವಿಶ್ವ ಆರೋಗ್ಯ ಸಂಸ್ಥೆಯು NVX-CoV2373 ಗಾಗಿ ತುರ್ತು ಬಳಕೆಯ ಪಟ್ಟಿಯನ್ನು (EUL) ಬಿಡುಗಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದಿತ ಕೋವಿಡ್‌ ಲಸಿಕೆಗಳ ಪಟ್ಟಿಯನ್ನು ವಿಸ್ತರಣೆ ಮಾಡಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ ಉತ್ಪಾದನೆ ಮಾಡಿದ CovovaxTM ಎಂಬ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಈ ತುರ್ತು ಬಳಕೆಗೆ ಅನುಮೋದಿತ ಮಾಡಿದ ಲಸಿಕೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ, Covovax ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಯ ಪಟ್ಟಿ (EUL) ಅಲ್ಲಿ ಸೇರ್ಪಡೆ ಮಾಡಿದೆ. ಈ ಅನುಮೋದಿತ ಕೋವಿಡ್‌ ಲಸಿಕೆಯು ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಅಪಾಯ ನಿರ್ವಹಣಾ ಯೋಜನೆ, ಪ್ರೋಗ್ರಾಮ್ಯಾಟಿಕ್ ಸೂಕ್ತತೆ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನಡೆಸಿದ ಉತ್ಪಾದನಾ ಸ್ಥಳ ಪರಿಶೀಲನೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ.

WHO approves SIIs Covovax for emergency use

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಪಟ್ಟಿಗಾಗಿ ಪ್ರಪಂಚದಾದ್ಯಂತದ ತಜ್ಞರನ್ನು ಸಂಪರ್ಕ ಮಾಡಲಾಗಿದೆ. ಕೋವಾವಾಕ್ಸ್‌ ಭಾರತದಲ್ಲಿನ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮಕ್ಕಳಿಗಾಗಿ ತಂದ ನೋವಾವಕ್ಸ್‌ ಲಸಿಕೆಯ ಭಾರತೀಯ ಆವೃತ್ತಿಯಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್‌ನ ಆಧಾರ್‌ ಪೂನಾವಾಲಾ

ವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್‌ ನ ತುರ್ತು ಬಳಕೆಗೆ ಶುಕ್ರವಾರ ಅನುಮತಿ ನೀಡಿದ್ದು, ಇದಕ್ಕೆ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದಾರ್‌ ಪೂನಾವಾಲಾ ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿದ್ದು, WHO ಅನುಮತಿ ಪಡೆದ 9ನೇ ಲಸಿಕೆ ಕೊವೊವ್ಯಾಕ್ಸ್‌ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್‌ ನ ತುರ್ತು ಬಳಕೆಗೆ ಅನುಮೋದನೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಆಧಾರ್‌ ಪೂನಾವಾಲಾ, "ಕೊರೊನಾ ವೈರಸ್‌ ಸೋಂಕಿನ ವಿರುದ್ಧ ನಮ್ಮ ಹೋರಾಟದಲ್ಲಿ ಇದು ಒಂದು ಉತ್ತಮ ಮೈಲಿಗಲ್ಲು ಆಗಿದೆ. ಕೊವೊವಾಕ್ಸ್‌ ಈಗ ತುರ್ತು ಬಳಕೆಗಾಗಿ ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿದೆ. ಈ ಮೂಲಕ ಈ ಲಸಿಕೆಯು ಅತ್ಯುತ್ತಮ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇದು ಸಾಬೀತುಪಡಿಸಿದೆ. ಈ ವಿಚಾರದಲ್ಲಿ ಬೆಂಬಲ ಮಾಡಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೊವೊವಾಕ್ಸ್‌ ನೀಡಲು ಎಸ್‌ಐಐ ಯೋಜನೆ ರೂಪಿಸಿದೆ," ಎಂದು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆಯೇ ಪುಣೆಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಮೊದಲ ಬ್ಯಾಚ್ ಕೊವೊವಾಕ್ಸ್ ಲಸಿಕೆ ತಯಾರಿಕೆಯನ್ನು ಪ್ರಾರಂಭ ಮಾಡಲಾಗಿದೆ. ಈ ಹಿಂದೆ ಈ ಬಗ್ಗೆ ಟ್ವೀಟ್‌ ಮಾಡಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ''ಹೊಸ ಮೈಲಿಗಲ್ಲು ತಲುಪಲಾಗಿದೆ. ಈ ವಾರ ನಾವು ಪುಣೆಯಲ್ಲಿರುವ ನಮ್ಮ ಸಂಸ್ಥೆಯಲ್ಲಿ ನಮ್ಮ ಮೊದಲ ಬ್ಯಾಚ್‌ನ ಕೊವೊವಾಕ್ಸ್ (ನೋವಾವಾಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್‌ ಲಸಿಕೆ) ಯ ಉತ್ಪಾದನೆ ಆರಂಭಿಸಿದ್ದೇವೆ,'' ಎಂದು ತಿಳಿಸಿದೆ. ''ಭಾರತದಲ್ಲಿ ನೊವಾವಾಕ್ಸ್‌ನ ಕೊರೊನಾವೈರಸ್ ಲಸಿಕೆಯ ಪ್ರಯೋಗವು ನವೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಲಸಿಕೆ ಪ್ರಯೋಗದ ಜಾಗತಿಕ ಮಾಹಿತಿಯ ಆಧಾರದ ಮೇಲೆ ದೇಶದಲ್ಲಿ ಲಸಿಕೆ ಪ್ರಯೋಗ ಮುಕ್ತಾಯಗೊಳ್ಳುವ ಮೊದಲೇ ಈ ಸಂಸ್ಥೆಯು ಲಸಿಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು,'' ಎಂದು ಮಾಧ್ಯಮವೊಂದಕ್ಕೆ ಪೂನವಾಲಾ ಮಾಹಿತಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+