ವೈಟ್ ವಿಡೋ ಕೊಂದವನ ತಲೆಗೆ 6.3 ಲಕ್ಷ ಡಾಲರ್ !

ಉಕ್ರೇನ್, ನ.14: ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕಿ ಸಮಂತಾ ಲ್ಯೂತ್‍ವೈಟ್ ಅಲಿಯಾಸ್ ಬಿಳಿ ವಿಧವೆ (White widow)ಯನ್ನು ಯುದ್ಧಪೀಡಿತ ಉಕ್ರೇನ್ನಿನಲ್ಲಿ ರಷ್ಯನ್ ಸೈನಿಕ ಗುಂಡಿಟ್ಟು ಕೊಲ್ಲಲಾಗಿದೆ ಎಂದು ವರದಿ ಬಂದಿದೆ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಸಮಂತಾ ಅಥವಾ ಬಿಳಿ ವಿಧವೆ ಕಳೆದ 2 ವಾರಗಳ ಹಿಂದೆ ಉಕ್ರೇನ್ನಿನ್ನ ಯುದ್ಧರಂಗ ಪ್ರವೇಶಿಸಿ, ಸರ್ಕಾರದ ಪರ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ಈಕೆಯನ್ನು ರಷ್ಯಾದ ಸೈನಿಕನೊಬ್ಬ ಹೊಡೆದುರುಳಿಸಿದ್ದಾನೆ ಎಂದು ಮಿರರ್ ಪತ್ರಿಕೆ ವರದಿ ಮಾಡಿದೆ.

ಬ್ರಿಟನ್ ಮೂಲದ ಬಿಳಿ ವಿಧವೆಯನ್ನು ಹತ್ಯೆ ಮಾಡಿದ ಈ ಸೈನಿಕನ ತಲೆಗೆ ಉಕ್ರೇನ್ ವಿಶೇಷ ಸೇನಾ ತಂಡ 6,30,000 ಯುಎಸ್ ಡಾಲರ್ ಬಹುಮಾನ ಘೋಷಿಸಿದೆ. ಲಂಡನ್ನಿನ 7/7 ಆತ್ಮಹತ್ಯಾ ಬಾಂಬರ್ ಜರ್ಮೈನ್ ಲಿಂಡ್ಸೆ ಎಂಬುವವನನ್ನು ಮದುವೆಯಾಗಿದ್ದಳು. 2011ರಲ್ಲಿ ಕೀನ್ಯಾರ ಮೊಂಬಸಾದಲ್ಲಿ ಹೋಟೆಲ್ ಹಾಗೂ ಶಾಪಿಂಗ್ ಮಾಲ್ ಗಳನ್ನು ಸ್ಫೋಟಿಸುವ ಸಂಚು ಹೂಡಿದ್ದಳು.ಆದರೆ, ಆಕೆಯ ತಂತ್ರ ವಿಫಲವಾಗಿತ್ತು.

‘White Widow', world’s most-wanted woman terrorist, shot dead Reports

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನೈರೋಬಿಯ ಮಾಲ್ ಒಂದರಲ್ಲಿ ನಡೆದ ಉಗ್ರರ ದಾಳಿ ಹಾಗೂ ಹತ್ಯಾಕಾಂಡ ನಡೆಸಿದ್ದ ಅಲ್ ಶಬಾಬ್ ಸಂಘಟನೆಯ ಮುಖ್ಯ ಕಮಾಂಡರ್ ಆಗಿದ್ದ ಈ ಬಿಳಿ ವಿಧವೆ ಕೀನ್ಯಾ ಹಾಗೂ ಸೋಮಾಲಿಯಾಗಳಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಪ್ರಮುಖವಾಗಿ ಕಾಣಿಸಿಕೊಂಡಿದ್ದಳು. ಸುಮಾರು 67 ಜನರನ್ನು ಬಲಿ ತೆಗೆದುಕೊಂಡ ನೈರೋಬಿ ಮಾಲ್ ಮೇಲಿನ ದಾಳಿ ಬಳಿಕ ಈ ಸಮಂತಾಳನ್ನು ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಗೆ ಇಂಟರ್ ಪೋಲ್ ಸೇರಿಸಿತ್ತು.

ಕಳೆದ ತಿಂಗಳು ಈಕೆ ಇಸ್ಲಾಮಿಕ್ ರಾಜ್ಯಗಳ ಒಕ್ಕೂಟ(ಐಎಸ್ ಐಎಸ್) ಸೇರಿ, ಮಹಿಳಾ ಕಮಾಂಡರ್ ಆಗಿದ್ದಾಳೆ ಎಂಬ ಸುದ್ದಿ ಬಂದಿತ್ತು. ಅದರೆ, ಈಕೆ ಉಕ್ರೇನಿಗೆ ಹಾರಿ ಅಲ್ಲಿನ ಇಸ್ಲಾಮಿಕ್ ಸಂಘಟನೆಗಳ ಜೊತೆ ಸೇರಿ ರಷ್ಯಾ ಸರ್ಕಾರದ ವಿರುದ್ಧ ಸಮರ ಸಾರಿದ್ದಳು.

ಇದು ರಷ್ಯನ್ನರ ಕುತಂತ್ರ ವೈಟ್ ವಿಡೋ ಸಾವನ್ನಪ್ಪಿಲ್ಲ ಈ ಬಗ್ಗೆ ಯಾವುದೇ ಸುದ್ದಿ ನನ್ನ ಕಿವಿಗೆ ಬಿದ್ದಿಲ್ಲ ಎಂದು ಬ್ರಿಟಿಷ್ ಸೈನಾಧಿಕಾರಿ, ಸಮಂತಾ ತಂದೆ ಆಂಡ್ರ್ಯೂ ಲ್ಯೂಥ್ ವೈಟ್(58) ಪ್ರತಿಕ್ರಿಯಿಸಿದ್ದಾರೆ. ನಾಲ್ಕು ಮಕ್ಕಳ ತಾಯಿ 'ವೈಟ್ ವಿಡೋ' ಸಾವಿನ ಸುದ್ದಿ ಸತ್ಯಾಸತ್ಯತೆ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+