India & America: ಭಾರತ & ಅಮೆರಿಕ ಸಂಬಂಧ ಹಿಂದಿಗಿಂತ ಗಟ್ಟಿಯಾಗಿದೆ ಎಂದ ದೊಡ್ಡಣ್ಣ!

ವಾಷಿಂಗ್ಟನ್: ಭಾರತವು ಎಲ್ಲಾ ಕ್ಷೇತ್ರದಲ್ಲೂ ಗಟ್ಟಿಯಾಗಿ ಬೆಳೆಯುತ್ತಿದೆ. ಹೀಗಾಗಿ ಜಗತ್ತಿನ ಪ್ರತಿಯೊಂದು ದೇಶಕ್ಕೂ ಭಾರತದ ಸಂಬಂಧ ಅತ್ಯಗತ್ಯ. ಅದರಲ್ಲೂ ಅಮೆರಿಕ ಇದೀಗ ಭಾರತದ ಜೊತೆ ಮತ್ತಷ್ಟು ಒಡನಾಟ ಇಟ್ಟುಕೊಳ್ಳಲು ಬಯಸುತ್ತಿದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಸಾಕಷ್ಟು ಸದ್ದು ಮಾಡಿತ್ತು. ಪಿಎಂ ಮೋದಿ ಅಮೆರಿಕ ಪ್ರವಾಸ ಕೈಗೊಂಡ ಒಂದು ತಿಂಗಳಲ್ಲೇ ದೊಡ್ಡಣ್ಣ ಅಮೆರಿಕ ಮಹತ್ವದ ಮಾತು ಹೇಳಿದೆ.

ಕಳೆದ ತಿಂಗಳು ಇದೇ ಸಮಯದಲ್ಲಿ ಪಿಎಂ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಡೀ ಜಗತ್ತು ಆ ಕಡೆ ಕಣ್ಣು ನೆಟ್ಟಿತ್ತು. ಹೀಗೆ ಒಂದು ತಿಂಗಳ ಈ ಸುಂದರ ನೆನಪುಗಳ ಬೆನ್ನಲ್ಲೇ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಅಮೆರಿಕದ ಖ್ಯಾತ ಸಂಸದರ ಗುಂಪು ಮತ್ತು ಶ್ವೇತಭವನ ಭಾರತ, ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾತನಾಡಿದ್ದು, ಭಾರತ-ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದಿದೆ. ಈ ಮೂಲಕ ಜಗತ್ತಿನ ಶಕ್ತಿಶಾಲಿ ರಾಷ್ಟ್ರವೊಂದು ಭಾರತದ ಜೊತೆ ಸಂಬಂಧವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಮುಂದಾಗಿದೆ.

White house happy about developing relations with India

ದೊಡ್ಡಣ್ಣ ಅಮೆರಿಕದ ನಾಯಕರಿಗೆ ಹೆಮ್ಮೆ!

ಅಂದಹಾಗೆ ಸಂಸತ್ತಿನ ಸದಸ್ಯರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರ್ಷಿಕ ಭೋಜನ ಕೂಟ ಆಯೋಜಿಸಿದ್ದರು. ಶ್ವೇತಭವನ ಹುಲ್ಲುಹಾಸಿನಲ್ಲಿ ಆಯೋಜಿಸಿದ್ದ ವಾರ್ಷಿಕ ಭೋಜನ ಕೂಟ ಸಾಕಷ್ಟು ಗಮನ ಸೆಳೆದಿತ್ತು, ಅಲ್ಲದೆ ಹಲವು ಸಂಸದರು ಈ ವೇಳೆ ಹಾಜರಿದ್ದರು. ಆಗಲೇ ಭಾರತ ಮತ್ತು ಅಮೆರಿಕ ಸಂಬಂಧದ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ ಶ್ವೇತಭವನ. ಕಳೆದ ತಿಂಗಳು ಪ್ರಧಾನಿ ಮೋದಿ ಅವರು ನೀಡಿದ ಭೇಟಿ ಅತ್ಯಂತ ಯಶಸ್ವಿ ಹಾಗೂ ಮಹತ್ವದ್ದಾಗಿದೆ. ಭಾರತದ ಜೊತೆಗಿನ ಅಮೆರಿಕ ಸಂಬಂಧವು ಎಂದಿಗಿಂತಲೂ ಗಟ್ಟಿಯಾಗಿದೆ. ನಾವು ಹಲವು ಪ್ರಮುಖ ಒಪ್ಪಂದ ಘೋಷಿಸಿದ್ದೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್‌ ಜೀನ್‌ ಪಿಯರ್‌ ಮಾಹಿತಿ ನೀಡಿದ್ದಾರೆ.

ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಕಳೆದ ತಿಂಗಳು ಅಮೆರಿಕಗೆ ಭೇಟಿ ನೀಡಿದ್ದು ಇತಿಹಾಸ ಸೃಷ್ಟಿಸಿತ್ತು. 2ನೇ ಬಾರಿಗೆ ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದಾರೆ. ಈ ಹಿಂದೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿ, ಅಮೆರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ 2 ಬಾರಿ ಅಮೆರಿಕನ್ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನ ಪಡೆದಿದ್ದಾರೆ ಮೋದಿ. ಹೀಗೆ ಭಾರತದ ಪ್ರಧಾನಿ ಅಮೆರಿಕದಲ್ಲಿ ಭಾರತದ ಪವರ್ ತೋರಿಸಿದ್ದಾರೆ ಎಂಬುದು ಮೋದಿ ಅವರ ಅಭಿಮಾನಿಗಳ ಮಾತು.

ಅಂದು ಸಾಮಾನ್ಯ ವ್ಯಕ್ತಿ ಇಂದು ಪ್ರಧಾನಿ!

1993ರ ಘಟನೆಯನ್ನು ಪ್ರಧಾನಿ ಮೋದಿ ಅಮೆರಿಕ ಭೇಟಿ ಸಂದರ್ಭ ಮೆಲುಕು ಹಾಕಿದ್ದರು. 3 ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೇರಿಕಾ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್ ಹೌಸ್‌ನ ಹೊರಗಡೆಯಿಂದ ನೋಡಿದ್ದೆ. ಈಗ ಪ್ರಧಾನಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದರು. ಹಾಗೇ ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಮತ್ತು ಭಾರತದ ಸ್ನೇಹ ಇನ್ನಷ್ಟು ಗಟ್ಟಿ ಆಗಲು ಭಾರತೀಯರ ಕೊಡುಗೆ ಸಾಕಷ್ಟಿದೆ ಎಂದು ಬಣ್ಣಿಸಿದ್ದರು. ಹೀಗೆ ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಭೇಟಿಗೆ ಒಂದು ತಿಂಗಳು ತುಂಬಿದೆ.

ಒಟ್ನಲ್ಲಿ ಭಾರತ ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಇದೇ ಕಾರಣಕ್ಕಾಗಿ ಅಮೆರಿಕ ಕೂಡ ಭಾರತದ ಜೊತೆ ತನ್ನ ಸಂಬಂಧ ವೃದ್ಧಿಸಿಕೊಳ್ಳುತ್ತಿದೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ. ಆದರೆ ಅಮೆರಿಕದ ಜೊತೆಗಿನ ಸ್ನೇಹ ಭಾರತಕ್ಕೂ ಲಾಭ ತಂದು ಕೊಡುತ್ತಿದೆ ಅನ್ನೋದು ಸುಳ್ಳಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಎರಡೂ ರಾಷ್ಟ್ರ ಮತ್ತಷ್ಟು ಹತ್ತಿರವಾಗುತ್ತಿವೆ. ತಂತ್ರಜ್ಞಾನ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+