ಸುಂದರ ನೃತ್ಯಗಾರ್ತಿಯೊಂದಿಗೆ ಒಬಾಮಾ ಡ್ಯಾನ್ಸ್..ಡ್ಯಾನ್ಸ್

Subscribe to Oneindia Kannada

ಡ್ಯಾನ್ಸ್ ...ಡ್ಯಾನ್ಸ್ ರಾಜಾ ಡ್ಯಾನ್ಸ್ ...ಡ್ಯಾನ್ಸ್ ...ಡ್ಯಾನ್ಸ್ ರಾಜಾ ಡ್ಯಾನ್ಸ್ ... ನೀವೇ ನನ್ನ ತಾಯಿ ತಂದೆ,, ಎಂದೂ ಬಂದೇ ಇಲ್ಲಿಗೆ,, ಹಾಡು ಬಂದು ಹೋಗಿ ಅದೆಷ್ಟೊ ವರ್ಷಗಳು ಕಳೆದು ಹೋಗಿವೆ.

ಅರೆ, ಈಗ ಯಾಕೆ ಈ ಕತೆ ಹೇಳ್ತಾ ಇದ್ದರೆ ಅಂದುಕೊಳ್ಳಬೇಡಿ. ಅದಕ್ಕೆ ಕಾರಣ ಇದೆ. ಅಮೆರಿಕದ ದೊರೆ ಡ್ಯಾನ್ಸ್ ಮಾಡಿದ್ದಾರೆ. ಅರ್ಜೆಂಟೀನಾಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಟಿಂಗೋ ಡ್ಯಾನ್ಸರ್ ಜತೆ ಹೆಜ್ಜೆ ಹಾಕಿದರು. ಅಮೆರಿಕದ ಅಧ್ಯಕ್ಷರ ನೃತ್ಯದ ವಿಡಿಯೋವೂ ಇದೆ ನೋಡಿಕೊಂಡು ಬನ್ನಿ....[ವಿಶ್ವದ ಟಾಪ್ 10 ಪ್ರಭಾವಿ ವ್ಯಕ್ತಿಗಳು]

ದಂಪತಿ ಸಮೇತ ಅರ್ಜೆಂಟೀನಾಕ್ಕೆ ತೆರಳಿದ್ದ ಅಮೆರಿಕದ ಅಧ್ಯಕ್ಷರು ಪುಲ್ ಜಾಲಿ ಮೂಡ್ ನಲ್ಲಿದ್ದರು. ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

 ಔತಣಕೂಟದಲ್ಲಿ ಹೆಜ್ಜೆ

ಔತಣಕೂಟದಲ್ಲಿ ಹೆಜ್ಜೆ

ಅರ್ಜೇಂಟೀನಾದ ಅಧ್ಯಕ್ಷರು ಅಮೆರಿಕದ ಅಧ್ಯಕ್ಷರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಅಮೆರಿಕದ ಅಧ್ಯಕ್ಷರು ಟಾಂಗೋ ನೃತ್ಯ ಮಾಡಿದ್ದಾರೆ.

ನೃತ್ಯಗಾರ್ತಿ ಜತೆ ಡ್ಯಾನ್ಸ್

ನೃತ್ಯಗಾರ್ತಿ ಜತೆ ಡ್ಯಾನ್ಸ್

ಕಾರ್ಯಕ್ರಮದಲ್ಲಿ ಒಬಾಮಾ ಹೆಂಡತಿ ಮಿಶೆಲ್ ಒಬಾಮ ಸಹ ಪಾಲ್ಗೊಂಡಿದ್ದರು. ಆದರೆ ಹೆಂಡತಿಗೆ ಹೆದರದ ಒಬಾಮಾ ಸಖತ್ತಾಗೇ ಹೆಜ್ಜೆ ಹಾಕಿದರು.

 ನಾನೇನು ಕಡಿಮೆ ಎಂದ ಮಿಶೆಲ್

ನಾನೇನು ಕಡಿಮೆ ಎಂದ ಮಿಶೆಲ್

ಅತ್ತ ಒಬಾಮಾ ಮಹಿಳಾ ಡ್ಯಾನ್ಸರ್ ಜತೆ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಮಿಶೆಲ್ ಪುರುಷ ಡ್ಯಾನ್ಸರ್ ರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಇದೇ ಮೊದಲಲ್ಲ

ಇದೇ ಮೊದಲಲ್ಲ

ಸಂಗೀತ ಪ್ರೇಮಿ ಒಬಾಮಾ ಹೆಜ್ಜೆ ಹಾಕಿದ್ದು ಇದೇ ಮೊದಲಲ್ಲ. ಆದರೆ ನೃತ್ಯಗಾರ್ತಿಯೊಂದಿಗೆ ಒಬಾಮಾ ಹೆಜ್ಜೆ ಹಾಕಿದ್ದು ವಿಶೇಷ. ಒಬಾಮಾ ಅವಧಿ ಮುಗಿದಿದ್ದು ಅಮೆರಿದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವು ಜೋರಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People were in for a surprise when US President Barack Obama shook a leg and did the 'tango' with an Argentinian dancer on Wednesday, during the state dinner here. Obama was attending the state dinner hosted by Argentinine President with his wife Michelle Obama when he was pulled by a female tango dancer, who was performing with her partner at the venue.
Please Wait while comments are loading...