ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್: ಸಿಖ್ ಯುವಕನ ಮೇಲೆ ಹಲ್ಲೆ, ವ್ಯಾಪಕ ಖಂಡನೆ

By Mahesh
|
Google Oneindia Kannada News

ಲಂಡನ್, ಏ.1: ಬರ್ಮಿಂಗ್ ಹ್ಯಾಮ್ ನಲ್ಲಿ ಸಿಖ್ ಯುವಕನೊಬ್ಬನಿಗೆ ಸ್ಥಳೀಯರು ಹಲ್ಲೆ ಮಾಡಿದ ಸುದ್ದಿ, ವಿಡಿಯೋ ಎಲ್ಲೆಡೆ ವ್ಯಾಪಕ ಚರ್ಚೆಗೊಳಪಟ್ಟಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಬರ್ಮಿಂಗ್ ಹ್ಯಾಮ್ ನ ಬ್ರಾಡ್ ರೋಡಿನಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಅಲ್ಲದೆ, ಹಲ್ಲೆ ನಡೆಯುವ ವೇಳೆಯಲ್ಲಿ ಹಾಜರಿದ್ದ ಸಾರ್ವಜನಿಕರು ಯಾರೂ ನೆರವಿಗೆ ಬಂದಿಲ್ಲ ಎಂಬುದು ಇನ್ನೂ ಆತಂಕಕಾರಿ, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ. [ಏನಾಶ್ವರ್ಯ! ಎಲಿಜಬೆತ್ ರಾಣಿ ವಿರುದ್ಧ ನಿಂತ ಸೇವಕರು]

ಇದು ಧಾರ್ಮಿಕ ವಿಷಮ ಭಾವನೆಯಿಂದ ನಡೆದ ಕೃತ್ಯ ಎಂದು ಹೇಳಲಾಗುತ್ತಿದೆ. ಜನಾಂಗೀಯ ನಿಂದನೆ ಮಾಡಿರುವುದು ಕಂಡು ಬಂದರೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಆರೋಪಿಗಳನ್ನು ಸೆರೆ ಹಿಡಿಯಲು ಸಾರ್ವಜನಿಕರು ನೆರವಾಗಬೇಕು. ಹಲ್ಲೆಗೊಳಗಾದ ಭಾರತೀಯ ಮೂಲದ ವ್ಯಕ್ತಿ ಘಟನೆ ಬಗ್ಗೆ ಹೆಚ್ಚಿನ ವಿವರ ನೀಡಿದರೆ ಪ್ರಕರಣದ ತನಿಖೆ ಸುಲಭವಾಗಲಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.

Watch Video : Sikh man beaten up in Birmingham
ಮಾ.29ರಂದು ಬ್ರಾಡ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇಂಟರ್ನೆಟ್ ನಲ್ಲಿ ವಿಡಿಯೋ ಹರಿದಾಡುತ್ತಿರುವುದು ನಮಗೆ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ವೆಸ್ಟ್ ಮಿಡ್ ಲ್ಯಾಂಡ್ ನ ಪೊಲೀಸ್ ವಕ್ತಾರರು ಹೇಳಿದ್ದಾರೆ.

ಅದರೆ, ಘಟನೆ ಬಗ್ಗೆ ಸಿಖ್ ಸಮುದಾಯ ಸಿಟ್ಟಿಗೆದ್ದಿದ್ದು, ಡೈಲಿ ಸಿಖ್ ಅಪ್ಡೇಟ್ಸ್ ಎಂಬ ಫೇಸ್ ಬುಕ್ ಪುಟದಲ್ಲಿ ಘಟನೆಯನ್ನು ಖಂಡಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅಲ್ಲದೆ, ಘಟನೆ ದಿನ ಸುಮ್ಮನೆ ನಿಂತು ನೋಡುತ್ತಿದ್ದ ಸಾರ್ವಜನಿಕರಿಗೆ ಛೀಮಾರಿ ಹಾಕಲಾಗಿದೆ. ಘಟನೆಯನ್ನು ಇಂಗ್ಲೆಂಡಿನ ಮಾಧ್ಯಮಗಳು ಪ್ರಸಾರ ಮಾಡಿದ ರೀತಿಗೂ ಖಂಡನೆ ವ್ಯಕ್ತವಾಗಿದೆ.

ಇಂಗ್ಲೆಂಡಿನ ಸಂಸತ್ತು ಇನ್ನೇನು ವಿಸರ್ಜನೆಗೊಂಡು ದೇಶ ಚುನಾವಣೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ಸ್ಥಳೀಯ ಮುಸ್ಲಿಮರು ಇಂಗ್ಲೆಂಡಿನಲ್ಲಿ ಮತ ಹಾಕಬೇಡಿ, ಮುಸ್ಲಿಮರಾಗೇ ಉಳಿಯಿರಿ ಎಂದು ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಜನಾಂಗೀತ ದ್ವೇಷ, ಹಲ್ಲೆ ಪ್ರಕರಣಗಳು ಇಂಗ್ಲೆಂಡ್ ಸರ್ಕಾರಕ್ಕೆ ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ.

ಘಟನೆ ವಿಡಿಯೋ ಕೆಳಗೆ ಇದೆ ಇದು PG ವಿಡಿಯೋ ಪೋಷಕರೇ ಗಮನಿಸಿ..

English summary
A Sikh man was beaten up in a suspected racial attack in the British city of Birmingham and police have launched an investigation after the sickening video of the assault emerged on the Internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X