ವಿಡಿಯೋ: ಸಸೆಕ್ಸ್ ಏರ್ ಶೋ, ಹಾಕರ್ ಹಂಟರ್ ವಿಮಾನ ಪತನ
ಲಂಡನ್, ಆಗಸ್ಟ್ 23: ಶೋರ್ಹ್ಯಾಂ ವೈಮಾನಿಕ ಪ್ರದರ್ಶನದ ವೇಳೆ ಪ್ರದರ್ಶನ ನೀಡುತ್ತಿದ್ದ ವಿಮಾನವೊಂದು ಪತನವಾಗಿದೆ. ಹಾಕರ್ ಹಂಟರ್ ವಿಮಾನ ರಸ್ತೆಗೆ ಬಿದ್ದಿದ್ದು ಭಾರಿ ಸ್ಫೋಟದೊಂದಿಗೆ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 14ಕ್ಕೂ ಅಧಿಕ ಜನರಿಗೆ ತೀವ್ರಗಾಯಗಳಾಗಿವೆ.
ಇಂಗ್ಲೆಂಡಿನ ಪಶ್ಚಿಮ ಸಸೆಕ್ಸ್ ನಲ್ಲಿ ನಡೆದಿದ್ದ ಶೋರ್ಹ್ಯಾಂ ವೈಮಾನಿಕ ಪ್ರದರ್ಶನದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾಕರ್ ಹಂಟರ್ ಎಂಬ ವಿಮಾನ ವೈಮಾನಿಕ ಪ್ರದರ್ಶನ ನೀಡುವ ವೇಳೆ ಇದ್ದಕ್ಕಿದ್ದಂತೆ ಕೆಳ ಮುಖವಾಗಿ ವೇಗವಾಗಿ ಚಲಿಸಿ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಗೆ ಅಪ್ಪಳಿಸಿದೆ.

ಮೊದಲಿಗೆ ವಿಮಾನ ನೆಲ ಮಟ್ಟಕ್ಕೆ ಇಳಿದು ನಂತರ ಮೇಲಕ್ಕೆ ಚಿಮ್ಮುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ವೈಮಾನಿಕ ಪ್ರದರ್ಶನದ ಅಧಿಕೃತ ವಿಡಿಯೋಗ್ರಾಫರ್ ಗಳಲ್ಲದೆ ಕೆಲ ಉತ್ಸಾಹಿಗಳು ಕೂಡಾ ತಮ್ಮ ಮನೆ ಬಾಲ್ಕನಿಯಿಂದ ವಿಮಾನ ಹಾರಾಟವನ್ನು ಸೆರೆ ಹಿಡಿಯುತ್ತಿದ್ದರು.
ನೋಡ ನೋಡುತ್ತಿದ್ದಂತೆ ಧರೆಗೆ ಬಿದ್ದು ಸ್ಫೋಟಗೊಂಡ ಘಟನೆ ಕಂಡು ಎಲ್ಲರೂ ಬೆಚ್ಚಿದ್ದಾರೆ. ವಿಮಾನ ಅಪಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ವಿಮಾನ ಪತನದ ದೃಶ್ಯ ಇಲ್ಲಿದೆ:












Click it and Unblock the Notifications