ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶ್ರೀಲಂಕಾ ಸ್ಫೋಟದ ಮುಖ್ಯ ಶಂಕಿತ ಹಶೀಮ್ ದಾಳಿ ವೇಳೆಯೇ ಸತ್ತಿದ್ದಾನೆ'

By ಅನಿಲ್ ಆಚಾರ್
|
Google Oneindia Kannada News

ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಸರಣಿ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾದ ಇಸ್ಲಾಮಿಕ್ ಉಗ್ರಗಾಮಿ ಕೊಲಂಬೋ ಹೋಟೆಲ್ ನ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ ಎಂದು ಶ್ರೀಲಂಕಾದ ಅಧ್ಯಕ್ಷರು ಶುಕ್ರವಾರ ಖಾತ್ರಿ ಪಡಿಸಿದ್ದಾರೆ.

ನನಗೆ ಗುಪ್ತಚರ ದಳ ನೀಡಿದ ಮಾಹಿತಿ ಪ್ರಕಾರ, ಶಾಂಗ್ರಿ ಲಾ ಹೋಟೆಲ್ ದಾಳಿಯಲ್ಲಿ ಝಹ್ರಾನ್ ಮೃತಪಟ್ಟಿದ್ದಾನೆ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ. ಸ್ಥಳೀಯ ಉಗ್ರ ಸಂಘಟನೆ ನಾಯಕ ಝಹ್ರಾನ್ ಹಶೀಮ್ ನ ಹೆಸರನ್ನು ಪ್ರಸ್ತಾವ ಮಾಡಿ, ಅವರು ಹೇಳಿದ್ದಾರೆ.

ಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆಶ್ರೀಲಂಕಾ ಸ್ಫೋಟ: ಮೂವರು ಮಹಿಳೆಯರು ಸೇರಿ ಆರು ಶಂಕಿತರ ಫೋಟೋ ಬಿಡುಗಡೆ

ಶ್ರೀಲಂಕಾ ದಾಳಿಯ ಹೊಣೆ ಹೊತ್ತು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹಶೀಮ್ ಕಂಡುಬಂದಿದ್ದ. ಆದರೆ ದಾಳಿ ನಡೆದ ತಕ್ಷಣ ಯಾವುದೂ ಸ್ಪಷ್ಟವಾಗಿಲ್ಲ. ಸಿರಿಸೇನಾ ಅವರು ಕೂಡ ತಕ್ಷಣವೇ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆ ಸ್ಫೋಟದಲ್ಲಿ ಹಶೀಮ್ ನ ಪಾತ್ರವೇನು ಎಂಬುದನ್ನು ತಿಳಿಸಿಲ್ಲ.

Wanted Sri Lanka radical Hashim Zahran died in hotel attack: Sirisena

ಸರಣ ಸ್ಫೋಟದಲ್ಲಿ ನ್ಯಾಷನಲ್ ತೌಹಿದ್ ಜಮಾತ್ ಹಾಗೂ ಅದರ ಮುಖ್ಯಸ್ಥ, ನಲವತ್ತು ವರ್ಷದ ಹಶೀಮ್ ನ ಹೆಸರು ಕೇಳಿಬಂದಿತ್ತು. ಪ್ರಮುಖ ಶಂಕಿತನಾಗಿ ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಆತನ ಉಗ್ರವಾದ ವರ್ತನೆ, ನಿಲವು ಹಾಗೂ ಆಲೋಚನೆಗಳ ಬಗ್ಗೆ ಒಂದಕ್ಕೂ ಹೆಚ್ಚು ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು ಎಂದು ಸ್ಥಳೀಯ ಮುಸ್ಲಿಂ ನಾಯಕರು ಹೇಳಿದ್ದಾರೆ.

English summary
An Islamic extremist believed to have played a key role in Sri Lanka’s deadly Easter bombings died in an attack on a Colombo hotel, the country’s president confirmed Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X