3ನೇ ಮಹಾಯುದ್ಧ: ‘ತಂಟೆಗೆ ಬಂದ್ರೆ ತಟ್ಟಿಬಿಡ್ತೀವಿ’ ಅಂತು ರಷ್ಯಾ!

ಮಾಸ್ಕೋ: ವ್ಲಾದಿಮಿರ್ ಪುಟಿನ್ ಮನೆ ಮೇಲೆ ಡ್ರೋನ್ ದಾಳಿ ಬಳಿಕ ಉಕ್ರೇನ್ & ರಷ್ಯಾ ತಿಕ್ಕಾಟ ತೀವ್ರಗೊಂಡಿದೆ. ಅದ್ರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಕಾರ್ಯಾಚರಣೆ ತೀವ್ರಗೊಳಿಸಿ, ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕೆಂಡ ಕಾರುತ್ತಿದೆ. ಈ ಮಧ್ಯೆ ರಷ್ಯಾ ಅಧ್ಯಕ್ಷರೇ ಖುದ್ದಾಗಿ ಅಮೆರಿಕ ಮತ್ತದರ ಪಟಾಲಂಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯುದ್ಧವನ್ನ ಮತ್ತಷ್ಟು ಭೀಕರಗೊಳಿಸುವ ಸಂದೇಶ ಸಿಕ್ಕಿದೆ.

ಅಮೆರಿಕ ಪರೋಕ್ಷವಾಗಿ ಉಕ್ರೇನ್ ಬೆನ್ನಿಗೆ ನಿಂತು ರಷ್ಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪೆಟ್ರೋಲ್ ಸುರಿಯುವ ಕೆಲಸವನ್ನ ಅಮೆರಿಕ ಆಗಾಗ ಮಾಡುತ್ತಿದೆ. ಇಷ್ಟೆಲ್ಲಾ ಗೋಜು, ಗದ್ದಲದ ಮಧ್ಯೆ ಮೊನ್ನೆ ಬೆಳಗಿನ ಜಾವ ದಿಢೀರ್ ಪುಟಿನ್‌ರ ಕ್ರೆಮ್ಲಿನ್ ಮನೆ ಮೇಲೆ ಡ್ರೋನ್ ಅಟ್ಯಾಕ್ ನಡೆದಿದೆ. ದಾಳಿಯಲ್ಲಿ ರಷ್ಯಾ ಅಧ್ಯಕ್ಷರು ಬಚಾವ್ ಆಗಿದ್ದಾರೆ. ಆದ್ರೆ ದಾಳಿ ಬಳಿಕ ಕೆರಳಿ ಕೆಂಡವಾಗಿರುವ ಪುಟಿನ್ ರಷ್ಯಾ ಶತ್ರು ಅಮೆರಿಕಗೆ ಎಚ್ಚರಿಕೆ ಸಂದೇಶ ಕೊಟ್ಟು ತೆಪ್ಪಗಿರಲು ಸೂಚಿಸಿದ್ದಾರೆ.

Vladimir Putin warned to America and Allies about Ukraine aid

'ನಮ್ಮ ತಂಟೆಗೆ ಬಂದ್ರೆ ತಟ್ಟಿಬಿಡ್ತೀವಿ'

ರಷ್ಯಾ ಸೇನೆ ಉಕ್ರೇನ್ ರಾಜಧಾನಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಅಮೆರಿಕ ಮತ್ತದರ ಪಟಾಲಂ ಸೇರಿ ತುಂಬಾ ತೊಂದರೆ ಕೊಡುತ್ತಿವೆ. ಉಕ್ರೇನ್ ಸೇನೆಗೆ ಅಗತ್ಯವಿರುವ ವೆಪನ್ಸ್ ಒದಗಿಸುವ ಕೆಲಸದ ಜೊತೆಯಲ್ಲಿ, ನ್ಯಾಟೋ ಪಡೆಯ ಸದಸ್ಯರು ನೇರವಾಗಿ ಉಕ್ರೇನ್ ಪರ ನಿಂತಿದ್ದಾರೆ ಎಂಬ ಆರೋಪವಿದೆ. ಇದನ್ನ ನೋಡಿ, ನೋಡಿ ಉಗ್ರರೂಪ ತೋರಿಸಿರುವ ಪುಟಿನ್ 'ತಂಟೆಗೆ ಬಂದ್ರೆ ತಟ್ಟಿಬಿಡ್ತೀವಿ' ಎಂದು ಅಮೆರಿಕದ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಬೆಳವಣಿಗೆ ಸಹಜವಾಗಿ 3ನೇ ಮಹಾಯುದ್ಧದ ಭಯ ಹುಟ್ಟುಹಾಕಿದೆ.

ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?

ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಈ ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾದ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬುದನ್ನ ಈಗ ಪರೋಕ್ಷವಾಗಿ ತಿಳಿಸಿದೆ ರಷ್ಯಾ ಸೇನೆ. ಪುಟಿನ್ ಹತ್ಯೆಗೆ ಯತ್ನಿಸಿದವರನ್ನು ಬಲಿ ಹಾಕಲು ಈ ಮೂಲಕ ಸಿದ್ಧತೆ ಸಾಗಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಪುಟಿನ್ ಮನೆ ಮೇಲೆ ಡೆಡ್ಲಿ ಅಟ್ಯಾಕ್!

ಜಗತ್ತು 3ನೇ ಮಹಾಯುದ್ಧದ ಭಯದಲ್ಲಿ ನಲುಗುವ ಸಂದರ್ಭದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿ ಲಕ್ಷಾಂತರ ಜನರ ಪ್ರಾಣ ತೆಗೆದಿದೆ. ಈ ಸಂದರ್ಭದಲ್ಲಿ ರಷ್ಯಾ ಕೆಲ ದಿನದಿಂದ ಉಕ್ರೇನ್ ವಿರುದ್ಧ ದಾಳಿ ತೀವ್ರಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವಾಗಲೇ, ರಷ್ಯಾ ಅಧ್ಯಕ್ಷ ಪುಟಿನ್‌ರ ಸರ್ಕಾರಿ ನಿವಾಸದ ಮೇಲೆ ನೇರವಾಗಿ ಬಾಂಬ್ ಹಾಕಿದ ಆರೋಪ ಮಾಡಲಾಗಿತ್ತು. ಮಾನವ ರಹಿತ ಡ್ರೋನ್ ಸಹಾಯದಿಂದ ಈ ದಾಳಿ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ 2 ಡ್ರೋನ್ ಪುಟಿನ್ ಮನೆ ಬಳಿ ಎಂಟ್ರಿ ಕೊಟ್ಟಿದ್ದೇ ತಡ ಎರಡೂ ಡ್ರೋನ್‌ಗಳನ್ನ ಉಡಾಯಿಸಿತ್ತು ರಷ್ಯಾ ಸೇನೆ.

ಬಂಕರ್ ಒಳಗೆ ಪುಟಿನ್‌ಗೆ ರಕ್ಷಣೆ

ಪುಟಿನ್ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದ ನಂತರ ತಕ್ಷಣ ಅವರನ್ನು ಅಲ್ಲಿಂದ ಕೂಡಲೇ ಸಮೀಪದ ಬಂಕರ್‌ಗೆ ಶಿಫ್ಟ್ ಮಾಡಲಾಗಿದೆ. ಈಗಲೂ ಪುಟಿನ್ ಅಲ್ಲಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಘಟನೆ ನಡುವೆ ಉಕ್ರೇನ್ ನಾಯಕರು ಅಮೆರಿಕ ಮತ್ತಿತರ ರಾಷ್ಟ್ರಗಳ ಬೆಂಬಲ ಕೋರುತ್ತಿದ್ದಾರೆ. ಉಕ್ರೇನ್ & ರಷ್ಯಾ ಯುದ್ಧ ಶುರುವಾಗಿ 1 ವರ್ಷ ಕಳೆದಿದ್ದು, ಈಗಲೂ ಸ್ಥಿತಿ ಸುಧಾರಿಸುತ್ತಿಲ್ಲ. ಇದರ ನಡುವೆ ರಷ್ಯಾ ಅಧ್ಯಕ್ಷರ ಮನೆಯ ಮೇಲೆಯೇ ದಾಳಿ ನಡೆದಿದೆ. ಹೀಗಾಗಿ ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಎರಗುವುದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+