ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹ್ಲಿ ಪಾಕ್ ಅಭಿಮಾನಿಗೆ ಜಾಮೀನಿಲ್ಲ, ಜೈಲೇ ಕಾಯಂ

|
Google Oneindia Kannada News

ಲಾಹೋರ್, ಫೆಬ್ರವರಿ, 19: ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ವಿರಾಟ್ ಕೊಹ್ಲಿ ಅಭಿಮಾನಿಗೆ ಪಾಕಿಸ್ತಾನದ ನ್ಯಾಯಾಲಯ ಜಾಮೀನು ನೀಡಲ್ಲ ಎಂದು ಹೇಳಿದೆ. ಹಾಗಾಗಿ ಕೊಹ್ಲಿ ಅಭಿಮಾನಿಗೆ 10 ವರ್ಷದ ಶಿಕ್ಷೆ ಕಾಯಂ ಎಂಬಂತಾಗಿದೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಟಿ-20 ಯಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ಕೊಹ್ಲಿ ಅಭಿಮಾನಿ ಉಮರ್ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಒಕಾರಾ ಜಿಲ್ಲೆಯಲ್ಲಿನ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದ. ಇದಾದ ಮೇಲೆ ದೇಶ ದ್ರೋಹದ ಆರೋಪದ ಮೇಲೆ ಉಮರ್ ನನ್ನು ಪೊಲೀಸರು ಬಂಧಿಸಿದ್ದರು. ಬಂಧಿಸಿದ ಎರಡೇ ದಿನಕ್ಕೆ ಉಮರ್ ಗೆ 10 ವರ್ಷ ಶಿಕ್ಷೆ ನೀಡಿ ತೀರ್ಪು ಹೊರಡಿಸಲಾಗಿತ್ತು.[ತ್ರಿವರ್ಣ ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿಗೆ 10 ವರ್ಷ ಜೈಲು]

virat kohli

ಆದರೆ ಇದಾದ ಮೇಲೆ ಪಾಕಿಸ್ತಾನದ ಪೊಲೀಸರು ಆರೋಪಿಗೆ ಕ್ಲೀನ್ ಚಿಟ್ ನೀಡಿದ್ದರು. ತಮ್ಮ ಬಳಿ ದೇಶದ್ರೋಹದ ಕುರಿತಾಗಿ ಯಾವುದೇ ದಾಖಲೆಗಳು ಇಲ್ಲ ಎಂದು ತಿಳಿಸಿದ್ದರೂ ಸಹ ನ್ಯಾಯಾಲಯ ಶಿಕ್ಷೆಯಿಂದ ಹಿಂದೆ ಸರಿದಿಲ್ಲ.[ಪಾಕಿಸ್ತಾನದಲ್ಲೂ ಹಾರಾಡಿತು ಭಾರತದ ತ್ರಿವರ್ಣ ಧ್ವಜ]

ಕೊಹ್ಲಿ ಅಭಿಮಾನಿ ಉಮರ್ ವೃತ್ತಿಯಲ್ಲಿ ಟೈಲರ್‌. ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಪೊಲೀಸರು ಆತನನ್ನು ಕಳೆದ ಜನವರಿ 25ರಂದು ಪೊಲೀಸರು ದೇಶದ್ರೋಹದ ಆಪಾದನೆಯ ಮೇಲೆ ಬಂಧಿಸಿದ್ದರು. [ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ಗರಂ]

English summary
Notwithstanding a police clean chit, a Pakistani court has dismissed the bail plea of a young die-hard fan of ace cricketer Virat Kohli who was arrested on treason charges for hoisting the Indian flag atop his home. Umar Daraz, a 22-year-old Kohli lookalike, is facing an imprisonment of up to 10 years for hoisting the Indian flag atop his house in Okara district in Punjab province. District court judge Anique Anwar announced his verdict yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X