Donald Trump: ವಿಮಾನದ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ ಯುಎಸ್ ಪ್ರೆಸಿಡೆಂಟ್ ಡೊನಾಲ್ಡ್‌ ಟ್ರಂಪ್ ವೈರಲ್‌ ವಿಡಿಯೋ!

Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಮಾನ ಹತ್ತುವಾಗ ಮುಗ್ಗರಿಸಿದ್ದು ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದಲ್ಲಿ ಹಲವು ಹೊಸ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ. ಅಕ್ರಮ ವಲಸೆ ನೀತಿಯನ್ನು ವಿರೋಧಿಸಿ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿರುವಾಗಲೇ ಟ್ರಂಪ್ ಅವರು ವಿಶ್ವದ ಮುಂದೆ ಎರಡು ವಿಚಾರದಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಒಂದು ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸುವುದಕ್ಕೆ ಅಮೆರಿಕದ ಸರ್ಕಾರಕ್ಕೆ ಆಗುತ್ತಿಲ್ಲ. ಮತ್ತೊಂದು ಅವರು ವಿಮಾನವನ್ನು ಹತ್ತುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರು ನ್ಯೂಜೆರ್ಸಿಯಲ್ಲಿ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೆ ಮುಗ್ಗರಿ ಬಿದ್ದಿದ್ದು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೇ ಈ ವಿಡಿಯೋವನ್ನು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹೋಲಿಕೆ ಮಾಡಿದ್ದಾರೆ. ಜೋ ಬೈಡನ್‌ ಅವರು ಬಿದ್ದ ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಹಾಗೂ ಮತ್ತೆ ಚುನಾವಣೆಗೆ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿಗಳು ಎದುರಾಗಿತ್ತು.

Viral video of US President Donald Trump tripping on the stairs of an airplane

ಅಮೆರಿಕದ ಬೆಡ್‌ಮಿನಿಸ್ಟರ್ ‌ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಈ ಮಳೆ ಸಂದರ್ಭದಲ್ಲಿಯೇ ಯುಎಸ್ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾಗೂ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ಮೆಟ್ಟಿಲುಗಳನ್ನು ಹತ್ತುವಾಗ ಮುಗ್ಗರಿಸಿದ್ದಾರೆ. ಕೂಡಲೇ ಕೈಗಳನ್ನು ಮೆಟ್ಟಿಲಿನ ಕಂಬಿಗಳಿಗೆ ಹಿಡಿದುಕೊಂಡು ಮುಗ್ಗರಿಸಿ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಇನ್ನು ಟ್ರಂಪ್ ಅವರು ಮೆಟ್ಟಿಲು ಹತ್ತಿದ ಮೇಲೆ ರುಬಿಯೊ ಅವರು ವಿಮಾನವನ್ನು ಹತ್ತಿದ್ದು ಅವರು ಸಹ ಎಡವಿದ್ದಾರೆ.

ಜೋ ಬೈಡನ್‌ಗೆ ಹೋಲಿಕೆ: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಡವಿರುವುದನ್ನು ಈ ಹಿಂದಿನ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಎಡವಿರುವುದಕ್ಕೆ ಹೋಲಿಕೆ ಮಾಡಲಾಗಿದೆ. ಈ ಹಿಂದೆ ಯುಎಸ್‌ನ ಅಧ್ಯಕ್ಷ ಜೋ ಬೈಡನ್ ಅವರು ಸಹ ಇದೇ ರೀತಿಯ ಮುಜುಗರದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದರು. ಆದರೆ, ಜೋ ಬೈಡನ್‌ ಎಡವಿದ್ದನ್ನೂ ಟ್ರಂಪ್ ಅವರು ಅಮೆರಿಕದ ಭಾಷಣದ ಸಂದರ್ಭದಲ್ಲಿ ಬಳಕೆ ಮಾಡಿಕೊಂಡಿ ಕಾಮಿಡಿ ಮಾಡಿದ್ದರು. ಇದೀಗ ಜನ ಟ್ರಂಪ್ ಅವರನ್ನು ಕೆಣಕುತ್ತಿದ್ದಾರೆ.

ಫ್ಲ್ಯಾಶ್‌ಬ್ಯಾಕ್

ಡೊನಾಲ್ಡ್ ಟ್ರಂಪ್: ಜೋ ಬೈಡನ್‌ ಅವರಿಗೆ ವಿಮಾನದ ಎರಡು ಮೆಟ್ಟಿಲುಗಳನ್ನು ಹತ್ತುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಮೆರಿಕದಂತಹ ಸೂಪರ್ ನೇಷನ್‌ ದೇಶವನ್ನು ಜೋ ಬೈಡನ್ ಅವರು ಹೇಗೆ ಪ್ರತಿನಿಧಿಸುತ್ತಾರೆ. ನ್ಯೂಕ್ಲಿಯರ್ ಪವರ್‌ ಇರುವ ರಷ್ಯಾ ಹಾಗೂ ಚೀನಾದೊಂದಿಗೆ ಜೋ ಬೈಡನ್‌ ಅವರು ಹೇಗೆ ವ್ಯವಹರಿಸುತ್ತಾರೆ ಎಂದು ಟ್ರಂಪ್‌ ಹಿಂದೆ ಪ್ರಶ್ನೆ ಮಾಡಿದ್ದರು. ಇದೀಗ ಈ ವಿಡಿಯೋ ಸಹ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+