ಶ್ರೀಲಂಕಾ ಸ್ಫೋಟ: ಸುತ್ತಾಡುತ್ತಿದ್ದ ಶಂಕಿತ ಉಗ್ರನ ವಿಡಿಯೋ ವೈರಲ್
ಕೋಲಂಬೋ, ಏಪ್ರಿಲ್ 23: ಶ್ರೀಲಂಕಾದಲ್ಲಿ ಚರ್ಚ್, ಹೊಟೇಲ್ ಸೇರಿದಂತೆ ಎಂಟು ಕಡೆ ನಡೆದ ಉಗ್ರದಾಳಿಯನ್ನು ತಾನೇ ಮಾಡಿದ್ದಾಗಿ ಈಗಾಗಲೇ ಐಸಿಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ ದಾಳಿಗೂ ಮುನ್ನ ಶಂಕಿತ ಉಗ್ರ ರಾಜಾರೋಷವಾಗಿ ಚರ್ಚ್ ಬಳಿ ಸುತ್ತಾಡಿಕೊಂಡಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬ್ಯಾಕ್ ಪ್ಯಾಕ್ ಹಾಕಿಕೊಂಡಿರುವ ಶಂಕಿತ ಉಗ್ರ ಚರ್ಚ್ ನ ಹೊರಗಡೆ, ಮತ್ತು ಒಳಗಡೆ ಸುಮ್ಮನೇ ಓಡಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
#WATCH Colombo: CCTV footage of suspected suicide bomber (carrying a backpack) walking into St Sebastian church on Easter Sunday. #SriLankaBombings (Video courtesy- Siyatha TV) pic.twitter.com/YAe089D72h
— ANI (@ANI) April 23, 2019
ಏಪ್ರಿಲ್ 21 ಭಾನುವಾರದಂದು ಶ್ರೀಲಂಕಾದಲ್ಲಿ ಒಟ್ಟು ಏಳು ಕಡೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಈಗಾಗಲೇ 300 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರೆ, ಸಾವಿರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಎಂತು ಜನ ಭಾರತೀಯರೂ ಇದ್ದರು.

ಇದುವರೆಗೂ ಯಾವ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಇದೀಗ ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ(ಐಸಿಸ್) ಈ ದಾಳಿಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದೆ.












Click it and Unblock the Notifications