12ನೇ ಮಹಡಿಯ ಕಿಟಕಿ ಸರಳಿನ ಮಧ್ಯೆ ಸಿಕ್ಕಿ ಹಾಕಿಕೊಂಡ ಮಗು : ಮೈ ಜುಮ್ಮೆನಿಸುವ ವಿಡಿಯೋ ಇದು

Viral Video : ಮನೆಯಲ್ಲಿ ಮಗುವಿದ್ದರೆ ಮೈಯೆಲ್ಲ ಕಣ್ಣಾಗಿರಬೇಕು. ಅದು ಕೂಡಾ ಮಗು ತೆವಳಲು, ಅಂಬೆಗಾಲಿಡಲು ನಡೆದಾಡಲೂ ಶುರು ಮಾಡಿದರಂತೂ ಮುಗಿದೇ ಹೋಯಿತು. ಯಾವ ಕಡೆಗೆ ಹೋಗುತ್ತದೆ, ಎಲ್ಲಿ ಮೇಲೆ ಹತ್ತುತ್ತದೆ, ಎಲ್ಲಿ ಬೀಳುತ್ತದೆ ಯಾವುದನ್ನೂ ಊಹಿಸೋದೂ ಸಾಧ್ಯವಿಲ್ಲ. ಒಬ್ಬರಲ್ಲ ಒಬ್ಬರು ಮಗುವನ್ನು ಕಾವಲು ಕಾಯುತ್ತಲೇ ಇರಬೇಕು. ಇಲ್ಲವಾದರೆ ನಾವು ಮಾಡುವ ಸಣ್ಣ ಎಡವಟ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.

ಮಗು ಒಂದನ್ನೇ ಬಿಟ್ಟು ಹೋದ ಮನೆಯವರು :

ಇಲ್ಲಿ ಆದದ್ದೂ ಇದೇ. ಚೀನಾದ (china) ಫ್ಯೂಜಿಯಾನ್ ಪ್ರಾಂತ್ಯದ ಅಪಾರ್ಟ್ಮೆಂಟಿನಲ್ಲಿ ಮಗುವನ್ನು ಬಿಟ್ಟು ಮನೆಯವರೆಲ್ಲಾ ಹೊರಗೆ ಹೋಗಿದ್ದಾರೆ. ವರದಿಯ ಪ್ರಕಾರ ಮಗುವಿನ ತಂದೆ ಕೆಲಸಕ್ಕೆ ಹೋದರೆ ತಾಯಿ ಮಗು ಮಲಗಿದೆ ಅಂದುಕೊಂಡು ದಿನಸಿ ತರಲು ಹೋಗಿದ್ದಾರೆ. ಮಗು ಏಳುವುದಕ್ಕೆ ಇನ್ನೂ ಟೈಂ ಇದೆ. ಅದಿನ್ನೂ ಪುಟ್ಟ ಒಂದು ವೇಳೆ ನಿದ್ದೆಯಂದ ಎದ್ದರೂ ಇಲ್ಲೇ ಸುತ್ತಾಡಿಕೊಂಡು ಇರಬಹುದು ಎನ್ನುವ ಲೆಕ್ಕಾಚಾರದಲ್ಲಿ ಮಗುವನ್ನ ಬಿಟ್ಟು ಹೋಗಿದ್ದಾರೆ ಅನ್ನಿಸುತ್ತದೆ. ಅಷ್ಟರಲ್ಲಿ ಎಚ್ಚರಗೊಂಡ ಮಗು ದೊಡ್ಡ ಕಿತಾಪತಿಯನ್ನೇ ಮಾಡಿದೆ.

Viral Video China Baby Dangles From 12th Floor Window Neighbors With Security Persons Saved Baby Video Goes Viral

ಕಿಟಕಿ ಡ್ರಿಲ್ ಮಧ್ಯೆ ಸಿಕ್ಕಿಹಾಕಿಕೊಂಡ ಮಗು :

ಈ ತುಂಟ ಮಗು ಬಂದು ಕಿಟಕಿ ಸರಳುಗಳ ಮೇಲೆ ಹತ್ತಿದೆ. ಹತ್ತಿ ಅಲ್ಲೇ ಇದ್ದರೆ ಪರವಾಗಿರಲಿಲ್ಲ. ತನ್ನ ದೇಹವನ್ನು ಕಿಟಕಿ ಸರಳುಗಳ ಮಧ್ಯೆ ದೇಹ ತೂರಿಸಿಕೊಂಡಿದೆ. 12 ನೇ ಮಹಡಿಯ ಅಪಾರ್ಟ್ಮೆಂಟಿನ ಕಿಟಕಿ ಡ್ರಿಲ್ ಮಧ್ಯೆ ಮಗು ಸಿಕ್ಕಿ ಹಾಕಿಕೊಂಡಿದೆ. ಹೀಗೆ ಕಿಟಕಿ ಡ್ರಿಲ್ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಮಗುವನ್ನು ಪಕ್ಕದ ಫ್ಲಾಟಿನವರು ನೋಡಿದ್ದಾರೆ. ಕೂಡಲೇ ಏನು ಮಾಡುವುದು ಯಾರನ್ನು ಕರೆಯುವುದು ಒಂದೂ ತೋಚುವುದಿಲ್ಲ. ಅವರು ತಕ್ಷಣ ಕಿಟಕಿ ಸರಳುಗಳ ಮಧ್ಯೆ ನೇತಾಡುತ್ತಿರುವ ಮಗುವಿನ ಫೋಟೋ ತೆಗೆದು ಸೊಸೈಟಿ ಗ್ರೂಪಿನಲ್ಲಿ ಶೇರ್ ಮಾಡಿದ್ದಾರೆ. ಮಗುವನ್ನು ರಕ್ಷಿಸುವಂತೆ ಕೇಳಿಕೊಂಡಿದ್ದಾರೆ. ಮಾತ್ರವಲ್ಲ ಸೆಕ್ಯೂರಿಟಿ ಅಗ್ನಿಶಾಮಕ ದಳದವರನ್ನು ಕರೆದಿದ್ದಾರೆ. ಅಗ್ನಿಶಾಮಕದಳವದವರು ಬರುವುದು ಸ್ವಲ್ಪವಾದರೂ ತಡವಾಗುತ್ತದೆ. ಅಲ್ಲಿವರೆಗೆ ಅಕ್ಕ ಪಕ್ಕದ ಮನೆಯವರು ಮಗುವನ್ನು ಕಾಪಾಡುವುದಕ್ಕೆ ಹೋಗುತ್ತಾರೆ. ಸ್ಟೂಲಿನ ಸಪೋರ್ಟ್ ನೀಡಿ ಮಗು ಕೆಳಗೆ ಬೀಳದಂತೆ ತಡೆದು ನಿಲ್ಲಿಸುತ್ತಾರೆ. ಮಗು ಕೂಡಾ ತನ್ನೆರಡೂ ಕೈಯಿಂದ ಸರಳುಗಳನ್ನು ಗಟ್ಟಿಯಾಗಿ ಹಿಡಿದು ಕೂತಿತ್ತು.

ವೈರಲ್ ಆದ ಮಗುವಿನ ವಿಡಿಯೋ :

ಮಗುವಿನ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ( social media) ಹರಿದಾಡ್ತಾ ಇದೆ. ಸಿಂಗಾಪುರ ಮೂಲದ ಸುದ್ದಿ ಸಂಸ್ಥೆ 8 ವರ್ಲ್ಡ್ ನ್ಯೂಸ್, ಬೀಜಿಂಗ್ ನ್ಯೂಸ್ ಮತ್ತು ಜಿಯುಪೈ ನ್ಯೂಸ್ ಪ್ರಕಾರ, ಅಕ್ಟೋಬರ್ 17ರ ಬೆಳಿಗ್ಗೆ 7. 48ಕ್ಕೆ ಈ ಘಟನೆ ನಡೆದಿದೆ. ಈ ಮಗು ಮೊದಲು ಸೇಫ್ಟಿ ಡ್ರಿಲ್ ಹತ್ತಿದೆ. ನಂತರ ಸರಳುಗಳ ಮಧ್ಯೆ ತಲೆ ಹೊರ ಹಾಕಿದೆ.

ರಕ್ಷಣೆಗೆ ಬಂದ ಸೆಕ್ಯೂರಿಟಿ, ಅಕ್ಕಪಕ್ಕದವರು :

ಈ ವಿಡಿಯೋ ಸೊಸೈಟಿ ಗ್ರೂಪಿನಲ್ಲಿ ಶೇರ್ ಆಗ್ತಾ ಸೆಕ್ಯೂರಿಟಿ ಮತ್ತು ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸ್ಟಾಫ್ ಓಡೋಡಿ ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವ ಕಾರಣ ಅವರೇ ಮನೆಯ ಬೀಗ ತೆಗೆದು ಒಳಗೆ ಹೋಗಿದ್ದಾರೆ. ಕೆಳಗಿನ ಫ್ಲಾಟಿನ ಕಿಟಕಿ ಬಳಿ ಬಂದು ಮಗುವಿಗೆ ಸ್ಟೂಲ್ ಇಟ್ಟು ಕೆಳಗ ಬೀಳದಂತೆ ಆಧಾರ ನೀಡಿದ್ದಾರೆ. ಅಗ್ನಿಶಾಮಕ ದಳ ಬರುವವರೆಗೂ ಅಕ್ಕಪಕ್ಕದ ಫ್ಲಾಟಿನವರು ಮತ್ತು ಸೆಕ್ಯೂರಿಟಿ ಮಗುವಿಗೆ ಏನೂ ಆಗದಂತೆ ತಡೆದಿದ್ದಾರೆ.

ಬಾಲಕಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ:

ನಂತರ ಅಗ್ನಿಶಾಮಕ ದಳದವರು ಬಂದು ಸೇಫ್ಟಿ ಗ್ರಿಲ್ ಮಧ್ಯೆ ಸಿಕ್ಕು ಹಾಕಿಕೊಂಡಿದ್ದ ಮಗುವನ್ನು ಕಾಪಾಡಿದ್ದಾರೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+