ಫಾರ್ಮುಲಾ ಒನ್ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ

ಲಂಡನ್, ಜೂನ್ 1: ಹಣ ವಂಚನೆ ಪ್ರಕರಣದಲ್ಲಿ ಕಾನೂನಾತ್ಮಕ ಸಂಕಷ್ಟಗಳನ್ನು ಎದುರಿಸುತ್ತಿರುವ ವಿಜಯ್ ಮಲ್ಯ, ಫಾರ್ಮುಲಾ ಒನ್ ಮೋಟಾರ್‌ಸ್ಪೋರ್ಟ್ ಕಂಪೆನಿ ಫೋರ್ಸ್ ಇಂಡಿಯಾದ ನಿರ್ದೇಶಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಮಾರು 9 ಸಾವಿರ ಕೋಟಿ ಹಣ ವಂಚನೆ ಆರೋಪದಲ್ಲಿ ಬ್ರಿಟನ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದಾರೆ.

ಅವರು ಮೇ 24ರಂದು ಸಹಾರ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ಟೀಮ್ ಲಿಮಿಟೆಡ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಕಂಪೆನಿಯು ಇಂಗ್ಲೆಂಡ್‌ನ ಈಸ್‌ ಮಿಡ್ಲ್‌ಲ್ಯಾಂಡ್ಸ್‌ನ ಸಿಲ್ವರ್‌ ಸ್ಟೋನ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ.

vijay mallya

ಸಹಾರ ಇಂಡಿಯಾ ಪರಿವಾರದ ಮುಖ್ಯಸ್ಥ ಸುಬ್ರತಾ ರಾಯ್ ಅವರು ಕಂಪೆನಿಯ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಫೋರ್ಸ್ ಇಂಡಿಯಾ ನಿರಾಕರಿಸಿದೆ.

ವಿಜಯ್ ಮಲ್ಯ ಅವರು ಟೀಮ್ ಪ್ರಿನ್ಸಿಪಾಲ್ ಪಾತ್ರದಲ್ಲಿ ಮುಂದುವರಿಯಲಿದ್ದು, ತಮ್ಮ ಮಗ ಸಿದ್ಧಾರ್ಥ ಮಲ್ಯ ಅವರನ್ನು ನಿರ್ದೇಶಕನ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಮಲ್ಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಕಾನೂನು ಹೋರಾಟದ ಸವಾಲುಗಳು ಇರುವುದರಿಂದ ಕಂಪೆನಿ ಮೇಲೆ ದುಷ್ಪರಿಣಾಮ ಬೀರಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+