ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಸಿಕ್ಕಿರಬಹುದು, ಆದ್ರೆ ಮಲ್ಯ ಪರಿಸ್ಥಿತಿ ದೇವ್ರಿಗೇ ಪ್ರೀತಿ!

'ಷರತ್ತು ಬದ್ಧ' ಜಾಮೀನು ಆಗಿರುವುದರಿಂದ ಮಲ್ಯ ಅವರಿಗೆ ಇಲ್ಲಿರಲಾರೆ ಬಿಟ್ಟು ಹೋಗಲಾರೆ ಎಂಬಂಥ ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿದ್ದಾರೆಂದು ಹೇಳಲಾಗಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 19: ಭಾರತೀಯ ಬ್ಯಾಂಕುಗಳಲ್ಲಿ ಕೋಟ್ಯಂತರ ಸಾಲ ಮಾಡಿ ತಲೆಮರೆಸಿಕೊಂಡಿದ್ದ ಆರೋಪದಡಿ ಸ್ಕಾಟ್ಲೆಂಡ್ ಪೊಲೀಸರು ಭಾರತೀಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ನಲ್ಲಿ ಏ. 18ರಂದು ಬಂಧಿಸಿದ್ದರು.

ಅದಾಗಿ, ಮೂರು ಗಂಟೆಗಳಲ್ಲೇ ಅವರಿಗೆ ಜಾಮೀನೂ ಸಿಕ್ಕಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಏಪ್ರಿಲ್ 18ರ ರಾತ್ರಿವರೆಗೂ ಚರ್ಚೆಯಾಯಿತಲ್ಲದೆ, ಹಲವಾರು ಜೋಕ್ ಗಳಿಗೂ ನಾಂದಿ ಹಾಡಿತು.

ಇದೆಲ್ಲವೂ ರಾಜಕೀಯ ಷಡ್ಯಂತ್ರವಾ? ಅವರನ್ನು ಬಂಧಿಸಿದ ಹಾಗೆ ಮಾಡಿ ಜನರ ಶಹಬ್ಬಾಸ್ ಗಿರಿ ಪಡೆದು ಆನಂತರ, ನಮ್ಮದೇನೂ ತಪ್ಪಿಲ್ಲ, ಆದರೆ, ಯುಕೆನಲ್ಲಿನ ಕಾನೂನು ಅಡ್ಡ ಬಂತೆಂಬ ನೆಪ ಹೇಳಿ ಅವರನ್ನು ಬಿಡುಗಡೆ ಮಾಡುವಂಥ ನಾಟಕ ಆಗುತ್ತಿದೆಯಾ ಎಂದೆಲ್ಲಾ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.

ಇದೆಲ್ಲದರ ಜತೆಗೆ ಜಾಮೀನು ಸಿಕ್ಕಕೂಡಲೇ ಮಲ್ಯಗೆ ತುಸು ಆರಾಮ್ ಸಿಕ್ಕಿರಬಹುದು. ಸದ್ಯಕ್ಕೀಗ ಅವರೀಗ ನಿರಾಳ ಎಂದೆಲ್ಲಾ ಮಾತುಗಳೂ ಕೇಳಿಬಂದವು.

ಆದರೆ, ನಿಮಗೆ ಗೊತ್ತಿರಲಿ. ಮಲ್ಯ ಪರಿಸ್ಥಿತಿ ನಾವಂದು ಕೊಂಡಂತೆ ಆರಾಮವಾಗಿ ಇರೋ ಹಾಗಿಲ್ಲ. ಅವರ ಪರಿಸ್ಥಿತಿ ಈಗ ಇತ್ತ ದರಿ, ಅತ್ತ ಪುಲಿ ಎಂಬಂತಾಗಿದೆ ಎಂದು ಫಸ್ಟ್ ಪೋಸ್ಟ್ ತನ್ನ ವರದಿಯೊಂದರಲ್ಲಿ ಹೇಳಿಕೊಂಡಿದೆ.

ಶೀಘ್ರದಲ್ಲೇ ಮಲ್ಯ ಅವರ ಪರಿಸ್ಥಿತಿ ಬಿಗಡಾಯಿಸಲಿರುವ ಎಲ್ಲಾ ಲಕ್ಷಣಗಳೂ ಇವೆ. ಅದೆಲ್ಲಕ್ಕೂ ಮಿಗಿಲಾಗಿ ಅವರಿಗೆ ಕೊಟ್ಟಿರುವ ಜಾಮೀನು, 'ಷರತ್ತು ಬದ್ಧ' ಜಾಮೀನು ಆಗಿರುವುದರಿಂದ ಮಲ್ಯ ಅವರಿಗೆ ಇಲ್ಲಿರಲಾರೆ ಬಿಟ್ಟು ಹೋಗಲಾರೆ ಎಂಬಂಥ ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿದ್ದಾರೆಂದು ಹೇಳಲಾಗಿದೆ.

ಹಾಗಾದರೆ, ಸದ್ಯಕ್ಕೆ ಮಲ್ಯ ಅವರ ಮೇಲೆ ವಿಧಿಸಲಾಗಿರುವ ಷರತ್ತುಗಳು ಯಾವುವು? ಇನ್ನು 28 ದಿನಗಳಲ್ಲಿ ಅವರ ಮೇಲೆ ಮತ್ತೊಂದು ಬರಸಿಡಿಲು ಬಡಿಯುವ ಸಂಭವವಿದೆಯೇ ಎಂಬುದರ ವಿವರ ಇಲ್ಲಿವೆ.

ಅಂದು ನಿರ್ಧಾರವಾಗುತ್ತೆ ಮಲ್ಯ ಮುಂದಿನ ಜೀವನ

ಅಂದು ನಿರ್ಧಾರವಾಗುತ್ತೆ ಮಲ್ಯ ಮುಂದಿನ ಜೀವನ

ಸದ್ಯಕ್ಕೆ ಜಾಮೀನು ಸಿಕ್ಕಿದ್ದು ಮಲ್ಯ ಅವರಿಗೆ ತಾತ್ಕಾಲಿಕ ಖುಷಿ ಕೊಟ್ಟಿದ್ದರೂ, ಹಾಗಂತ ಅವರು ಮೈಮರೆಯುವ ಹಾಗಿಲ್ಲ. ಏಕೆಂದರೆ, ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಅವರ ಮುಂದಿನ ವಿಚಾರಣೆ ಮೇ 17ರಂದು ನಡೆಯಲಿದೆ. ಅಲ್ಲಿಯವರೆಗೆ ಮಾತ್ರ ಅವರ ಜಾಮೀನು ಜಾರಿಯಲ್ಲಿರುತ್ತದೆ. ಅಂದು ನಡೆಯಲಿರುವ ವಿಚಾರಣೆಯಲ್ಲಿ ಅವರು ಯುಕೆಯಲ್ಲೇ ಇರಬೇಕೇ, ಭಾರತಕ್ಕೆ ಹಸ್ತಾಂತರಗೊಳ್ಳಬೇಕೇ ಎಂಬುದು ತೀರ್ಮಾನವಾಗಲಿದೆ.

ಇಷ್ಟರಲ್ಲೇ ಏನಾದ್ರೂ ಮಾಡ್ಕೋಬೇಕು ಮಲ್ಯ

ಇಷ್ಟರಲ್ಲೇ ಏನಾದ್ರೂ ಮಾಡ್ಕೋಬೇಕು ಮಲ್ಯ

ಈಗಗಾಲೇ ಹೇಳಿರುವಂತೆ ಮಲ್ಯ ಪ್ರಕರಣದ ವಿಚಾರಣೆ ನಡೆಯೋದು ಮೇ 17ರಂದು. ಅಲ್ಲಿಯವರೆಗೆ ಮಲ್ಯಗೆ ಜಾಮೀನು ಇದೆ. ಆದರೆ, ಇಷ್ಟರಲ್ಲಿ ಮಲ್ಯ ಈ ಕೇಸಿನಿಂದ ತಮಗೆ ಬೇಕಾದಂತೆ ಬಚಾವಾಗಲು ಹಲವಾರು ದಾರಿಗಳನ್ನು ಹುಡುಕಬೇಕಿದೆ. ಹಾಗಾಗಿ, ಮಲ್ಯ ಅವರ ವಕೀಲರ ತಂಡಕ್ಕೆ ಇದೊಂದು ದೊಡ್ಡ ತಲೆಬಿಸಿಯಾಗಿದೆ. ಅಕಸ್ಮಾತ್ ಅವರು ಯಾವುದೇ ದಾರಿ ಕಂಡುಕೊಳ್ಳುವಲ್ಲಿ ವಿಫಲರಾದರೆ ಅಥವಾ ಅವರ ದಾರಿ ನ್ಯಾಯಾಲಯಕ್ಕೆ ಸರಿಕಾಣದಿದ್ದರೆ ಮಲ್ಯ ಪರಿಸ್ಥಿತಿ ಡೋಲಾಯಮಾನವಾಗಲಿದೆ. ಇದರ ಭೀತಿಯಲ್ಲಿ ಮಲ್ಯ ಇದ್ದಾರೆಂದು ಹೇಳಲಾಗಿದೆ.

ತಿಂದ ಕೂಳೂ ಕರಗೋಹಾಗಿಲ್ಲ

ತಿಂದ ಕೂಳೂ ಕರಗೋಹಾಗಿಲ್ಲ

ಸದ್ಯಕ್ಕೆ ಜಾಮೀನು ಪಡೆದಿರುವ ಮಲ್ಯಗೆ ನ್ಯಾಯಾಲಯ ವಿಧಿಸಿರುವ ಷರತ್ತುಗಳಾದರೂ ಯಾವ್ಯಾವು ? ಇಲ್ಲಿವೆ ಓದಿ...
- ಮಲ್ಯ ಅವರು ನಿರ್ದಿಷ್ಟ ಅಡ್ರಸ್ ನಲ್ಲೇ ಇರಬೇಕು. ವಾಸ್ತವ್ಯವನ್ನು ಯಾವುದೇ ಕಾರಣಕ್ಕೂ ಬದಲಿಸುವ ಹಾಗಿಲ್ಲ.
- ಕೆಲವು ವ್ಯಕ್ತಿಗಳನ್ನು ಸಂಪರ್ಕಿಸುವ ಹಾಗಿಲ್ಲ
- ಪೊಲೀಸರಿಗೆ ಮಲ್ಯ ಅವರು ತಮ್ಮ ಪಾಸ್ ಪೋರ್ಟ್ ಒಪ್ಪಿಸಬೇಕು. ಅಲ್ಲದೆ, ಯುಕೆಯಿಂದ ಯಾವುದೇ ಕಾರಣಕ್ಕೂ ಹೊರಹೋಗುವಂತಿಲ್ಲ.
- ಪ್ರತಿ ವಾರಕ್ಕೊಮ್ಮೆ ನಿಗದಿಗೊಳಿಸಲಾಗಿರುವ ಪೊಲೀಸ್ ಠಾಣೆಗೆ ತಪ್ಪದೇ ಹಾಜರಾಗಿ ಸಹಿ ಹಾಕಬೇಕು.
- ಜಾಮೀನು ಮೇ 17ರವರೆಗೂ ಇದೆ ಎಂದು ತಿಳಿಯುವ ಹಾಗಿಲ್ಲ. ಯಾವುದೇ ಸಂದರ್ಭದಲ್ಲೂ ಜಾಮೀನು ತೆರವು ಆಗಬಹುದು, ಮಲ್ಯ ಬಂಧನಕ್ಕೊಳಗಾಗಬಹುದು.

ತನಿಖೆಗೆ ಸಹಕರಿಸಬೇಕಷ್ಟೇ

ತನಿಖೆಗೆ ಸಹಕರಿಸಬೇಕಷ್ಟೇ

ನಿರ್ಬಂಧಗಳು ಇಷ್ಟಕ್ಕೇ ಮುಗಿದಿಲ್ಲ. ಪೊಲೀಸ್ ಅಧಿಕಾರಿಗಳು ಯಾವಾಗ ವಿಚಾರಣೆಗೆ ಕರೆದರೂ ಹಾಜರಾಗಬೇಕು. ಪೊಲೀಸರು, ತನಿಖಾಧಿಕಾರಿಗಳು ಯಾವುದೇ ಸಮಯದಲ್ಲಿ ಬಂದು ಬಾಗಿಲಿನ ಕಾಲಿಂಗ್ ಬೆಲ್ ಒತ್ತಿದರೂ ಅವರನ್ನು ಸ್ವಾಗತಿಸಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು, ತೋರಿಸು ಎಂದ ದಾಖಲೆಗಳನ್ನು ತೋರಿಸಬೇಕು. ಒಟ್ಟಿನಲ್ಲಿ ವಿಚಾರಣೆಗೆ ಸಹಕರಿಸಬೇಕು.

ನ್ಯಾಯಾಲಯದ ಮುಂದೆ ಮೂರು ಆಯ್ಕೆಗಳು

ನ್ಯಾಯಾಲಯದ ಮುಂದೆ ಮೂರು ಆಯ್ಕೆಗಳು

ಇದಿಷ್ಟೇ ಅಲ್ಲ, ತನಿಖಾಧಿಕಾರಿಗಳಾಗಿ ಯಾರ್ಯಾರೋ ತಮ್ಮ ಮನೆಗೆ ಬಂದು ಬೇಕಾದ ಕಡೆಗೆ ಓಡಾಡಿದರೂ ಅದೆಲ್ಲವನ್ನೂ ಮಲ್ಯ ಸಹಿಸಿಕೊಳ್ಳಬೇಕು. ಹೇಳಿ ಕೇಳಿ ಬ್ರಿಟನ್ ಕಾನೂನು ತುಂಬಾನೇ ಸ್ಟ್ರಿಕ್ಟ್. ಇಷ್ಟೆಲ್ಲಾ ಆದ ಮೇಲೂ, ಮೇ 17ರಂದು ನಡೆಯಲಿರುವ ವಿಚಾರಣೆಯಲ್ಲಿ ನ್ಯಾಯಾಲಯವು ತನ್ನ ಮುಂದಿರುವ ಈ ಮೂರು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಂತೂ ಖಚಿತ.
ಮೊದಲನೆಯದು - ಮಲ್ಯ ಅವರ ಜಾಮೀನು ವಿಸ್ತರಿಸುವುದು.
ಎರಡನೆಯದು - ಜಾಮೀನು ಅವಧಿ ಮುಕ್ತಾಯವಾಗಿರುವುದರಿಂದ ಅವರನ್ನು ಬಂಧಿಸಲು ಆದೇಶಿಸುವುದು.
ಮೂರನೇಯದು- ಮೂಲತಃ ಅವರು ಭಾರತ ಕಾನೂನು ವ್ಯವಸ್ಥೆಗೆ ಬೇಕಾಗಿರುವ ವ್ಯಕ್ತಿಯಾಗಿರುವುದರಿಂದ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನಿರ್ಧರಿಸಬಹುದು.

English summary
For those who think Mallya is a happy camper and has fooled the Indian authorities, think again. The vital difference is that he was not called in for questioning. He was arrested. Somewhere down the line there will be a seat on a plane back to India. The loading has begun and there is no getting away from that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X