USA Military: ಅಮೆರಿಕ ಮತ್ತು ಇರಾನ್ ಪರಮಾಣು ಒಪ್ಪಂದ ಮಾತುಕತೆ, ಒಮಾನ್ ನೆಲದಲ್ಲಿ ಸಭೆ ಆರಂಭ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶ ಹಿನ್ನೆಲೆ ಅಲರ್ಟ್ ಆಗಿರುವ ಅಮೆರಿಕ ಸೇನೆ ಅತ್ತ ಇರಾನ್ ಬಳಿ ಸನ್ನದ್ಧವಾಗಿದ್ದು, ಯಾವುದೇ ಸಂದರ್ಭ ಬಂದರೂ ಎದುರಿಸಲು ಸಿದ್ಧವಾಗಿದೆ. ಅದೇ ರೀತಿ ಇತ್ತ ಇರಾನ್ ಕೂಡ ಮರುದಾಳಿ ಮಾಡುವ ಹೇಳಿಕೆ ನೀಡುತ್ತಿದೆ. ಹೀಗೆ ಮಧ್ಯಪ್ರಾಚ್ಯ ಜ್ವಾಲಾಮುಖಿ ರೀತಿ ಕೊತ ಕೊತ ಅನ್ನುವಾಗಲೇ ಒಮನ್ ಒಂದು ಹೊಸ ಐಡಿಯಾ ಮಾಡಿದ್ದು, ಅಮೆರಿಕ & ಇರಾನ್ ನಡುವೆ ಪರಮಾಣು ಒಪ್ಪಂದಕ್ಕೆ ಶಾಂತಿ ಸಭೆ ಆಯೋಜನೆ ಮಾಡಿತ್ತು. ಇದೀಗ ಸಭೆಯು ಆರಂಭವಾಗಿ, ಎರಡೂ ದೇಶಗಳ ನಾಯಕರು ಪ್ರಮುಖ ವಿಚಾರಗಳ ಪ್ರಸ್ತಾಪಕ್ಕೆ ಸಜ್ಜಾಗಿದ್ದಾರೆ.

ಮಧ್ಯಪ್ರಾಚ್ಯ ಭಾಗದಲ್ಲಿ ಬಹುತೇಕ ಎಲ್ಲಾ ದೇಶಗಳು ಅಮೆರಿಕದ ಮಾತು ಕೇಳುತ್ತವೆ, ಆದರೆ ಇರಾನ್ ಮಾತ್ರ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಪದೇ ಪದೇ ಕೆಂಡಕಾರಿ ಯುದ್ಧಕ್ಕೆ ಸಿದ್ಧ ಎಂಬ ಮೆಸೇಜ್ ಕೊಡುತ್ತಲೇ ಬಂದಿತ್ತು. ಅಲ್ಲದೆ ಪದೇ ಪದೇ ಎರಡು ಬಣಗಳ ನಡುವೆ ಹಿಂಸಾಚಾರವೂ ನಡೆದಿದ್ದು, ಆತಂಕ ಮನೆ ಮಾಡಿತ್ತು. ಈ ಬಾರಿ ಅದು ದೊಡ್ಡ ಮಟ್ಟಕ್ಕೆ ಹೋಗಿ, ಪರಮಾಣು ಯುದ್ಧವಾಗುತ್ತಾ? ಎನ್ನುವ ಭಯ ಮೂಡಿರುವ ಸಮಯದಲ್ಲೇ ಒಮಾನ್ ನೆಲದಲ್ಲಿ ಸಂಧಾನ ಸಭೆ ಆರಂಭವಾಗಿದೆ. ಈ ಮೂಲಕ ಅಮೆರಿಕ ಹಾಗೂ ಇರಾನ್ ಇಂದು ಹೊಸ ನಿರ್ಧಾರಕ್ಕೆ ಬಂದು, ತಮ್ಮ ನಡುವೆ ಇರುವಂತಹ ತಿಕ್ಕಾಟ ಕೊನೆಗೊಳಿಸುವ ಸಾಧ್ಯತೆ ದಟ್ಟವಾಗಿದೆ.

USA Military

ಏನೆಲ್ಲಾ ಚರ್ಚೆಗಳು ನಡೆಯುತ್ತವೆ?

ಅಮೆರಿಕ ಜೊತೆಗೆ ಮಧ್ಯಪ್ರಾಚ್ಯ ಭಾಗದ ದೇಶಗಳು ಉತ್ತಮ ಬಾಂಧವ್ಯ ಹೊಂದಿವೆ, ಆದರೆ ಇರಾನ್ ಜೊತೆಗೆ ಬಹುತೇಕ ದೇಶಗಳು ಅಂತರ ಕಾಯ್ದುಕೊಂಡು ಬಂದಿವೆ. ಆದರೆ ಒಮಾನ್ ಮಾತ್ರ ಎರಡೂ ದೇಶಗಳ ಜೊತೆಗೆ ನಂಬಿಕೆ ಹಾಗೂ ಸ್ನೇಹ ಉಳಿಸಿಕೊಂಡು ಬಂದಿದ್ದು, ಇರಾನ್ ಮತ್ತು ಅಮೆರಿಕ ಜೊತೆ ಒಮಾನ್‌ಗೆ ಒಳ್ಳೆಯ ಸಂಬಂಧ ಇದೆ. ಹೀಗಾಗಿಯೇ ಇದೀಗ ಒಮಾನ್ ನೆಲದಲ್ಲಿ ಸಂಧಾನ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಲು ಇರಾನ್ ಕೂಡ ಒಪ್ಪಿಗೆ ಸೂಚಿಸಿದೆ. ಹೀಗಿದ್ದಾಗಲೇ 2015ರ ಪರಮಾಣು ಒಪ್ಪಂದದ ಮಾತುಕತೆ ಆಧಾರದಲ್ಲಿ ಇದೀಗ ಮತ್ತೊಮ್ಮೆ ಅಮೆರಿಕ ಹಾಗೂ ಇರಾನ್ ಚರ್ಚೆಗೆ ಕೂರುವ ಸಾಧ್ಯತೆ ಇದೆ.

ಅಧಿಕಾರಿಗಳು & ನಾಯಕರು ಭಾಗಿ

ಒಮಾನ್ ಇದೀಗ ಆಯೋಜನೆ ಮಾಡಿರುವ ಅಮೆರಿಕ ಮತ್ತು ಇರಾನ್ ಸಂಧಾನ ಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ನಾಯಕರು ಭಾಗಿ ಆಗಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪರಮಾಣು ಕಾರ್ಯಕ್ರಮದ ಭಾಗವಾಗಿರುವ ವ್ಯಕ್ತಿಗಳು ಈ ಸಮಯದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ ಮತ್ತು ಹೇಗಾದರೂ ಮಾಡಿ ಇಂದು ಒಂದು ಹಂತಕ್ಕೆ ಮಾತುಕತೆ ಬಂದರೆ ಪರಿಸ್ಥಿತಿ ಹಿಡಿತಕ್ಕೆ ಸಿಗುವ ನಿರೀಕ್ಷೆ ಮೂಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಸಭೆಯ ಯಶಸ್ಸು ಅಥವಾ ಸೋಲಿನ ಬಗ್ಗೆ ಪಕ್ಕಾ ಮಾಹಿತಿ ಸಿಗಲಿದೆ. ಹೀಗಾಗಿ ಇಡೀ ಮಧ್ಯಪ್ರಾಚ್ಯ ಸೇರಿದಂತೆ ಜಗತ್ತಿನ ಕಣ್ಣು ಈಗ ಒಮಾನ್ ಮೇಲೆ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+