ರಷ್ಯಾ ಬುಡವನ್ನೇ ಅಲುಗಾಡಿಸಲು ಅಮೆರಿಕದ ಮಹಾ ತಂತ್ರ!

2022ರ ಫೆಬ್ರವರಿ 20, ಅಂದು ಇಡೀ ಜಗತ್ತು ಕನಸು & ಮನಸ್ಸಿನಲ್ಲೂ ಅಂದುಕೊಳ್ಳದ ಘಟನೆ ನಡೆದಿತ್ತು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಂತಹ ನಿರ್ಧಾರ ಕೈಗೊಂಡಿದ್ದರು. ಹೀಗೆ ಉಕ್ರೇನ್ ನ್ಯಾಟೋ ಒಕ್ಕೂಟ ಸೇರುತ್ತಿದೆ ಅಂತ ಆರೋಪ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿಬಿಟ್ಟರು. ಈ ಯುದ್ಧ 2ನೇ ವರ್ಷವನ್ನ ಪೂರೈಸಿದ ಸಮಯದಲ್ಲೇ ಅಮೆರಿಕ ಕೂಡ ರಷ್ಯಾಗೆ ಶಾಕ್ ನೀಡಿದೆ!

ಹೌದು ರಷ್ಯಾ & ಉಕ್ರೇನ್​ ಸಂಘರ್ಷಕ್ಕೆ 2 ವರ್ಷಗಳು ಪೂರ್ಣಗೊಂಡು 3ನೇ ವರ್ಷಕ್ಕೆ ಇದೀಗ ಕಾಲಿಡುತ್ತಿರುವ ಹೊತ್ತಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್,‌ ರಷ್ಯನ್ನರ ವಿರುದ್ಧ 500 ಹೊಸ ನಿರ್ಬಂಧ ವಿಧಿಸಿದ್ದಾರೆ. ಈ ಮೂಲಕ ಅಮೆರಿಕ ಇದೀಗ ರಷ್ಯಾಗೆ ಹೊಸ ಹೊಸ ರೀತಿಯಲ್ಲಿ ಶಾಕ್ ನೀಡುತ್ತಿದೆ. ಈಗಾಗಲೇ ರಷ್ಯಾ ವಿರುದ್ಧ ಅಮೆರಿಕ ವಿಧಿಸಿರುವ ನಿರ್ಬಂಧಗಳು ಭಾರಿ ದೊಡ್ಡ ಸಮಸ್ಯೆ ತಂದಿವೆ. ಈ ಹೊತ್ತಲ್ಲೇ ಮತ್ತಷ್ಟು ನಿರ್ಬಂಧ ವಿಧಿಸಿದೆ ಜೋ ಬೈಡನ್‌ರ, ಅಮೆರಿಕ ಸರ್ಕಾರ.

USA Gave Shock To Russia After Russia & Ukraine War Completed 2 Years

ಅಮೆರಿಕದ ರಿವೇಂಜ್‌ಗೆ ಕಾರಣ ಏನು?

ರಷ್ಯಾ ವಿರುದ್ಧ ಇದೀಗ ವಿಧಿಸಿರುವ ನಿರ್ಬಂಧಕ್ಕೆ ವಿವರಣೆ ನೀಡಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ & ರಷ್ಯಾ ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಲ್ನಿ ಸಾವಿಗೆ ಪ್ರತಿಕಾರವನ್ನ ತೀರಿಸಿಕೊಳ್ಳಲು ರಷ್ಯಾ ವಿರುದ್ಧ 500ಕ್ಕೂ ಹೆಚ್ಚು ಹೊಸ ನಿರ್ಬಂಧ ಘೋಷಿಸುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ರಷ್ಯಾ ವಿರುದ್ಧ ಅಮೆರಿಕ ಇದೀಗ ರಣಕಹಳೆ ಮೊಳಗಿಸಿ, ಪರೋಕ್ಷ ಯುದ್ಧಕ್ಕೆ ಸಜ್ಜಾಗಿದೆ.

'ನ್ಯಾಟೋ ಹಿಂದೆಂದಿಗಿಂತ ಪ್ರಬಲ'

ಹಾಗೇ ಇದೇ ವೇಳೆ ಉಕ್ರೇನ್ ಬಗ್ಗೆಯೂ ಅಮೆರಿಕ ಅಧ್ಯಕ್ಷರು ಹೆಮ್ಮೆಯ ಮಾತು ಆಡಿದ್ದು. ಉಕ್ರೇನ್​ ಕೆಚ್ಚೆದೆಯ ನಾಗರಿಕರು ತಮ್ಮ ಸ್ವಾತಂತ್ರ್ಯ ಹಾಗೂ ಭವಿಷ್ಯಕ್ಕೆ, ಯಾವುದೇ ರೀತಿ ರಾಜಿ ಮಾಡಿಕೊಳ್ಳದೆ ಹೋರಾಡುತ್ತಿದ್ದಾರೆ. ನ್ಯಾಟೋ ಹಿಂದೆಂದಿಗಿಂತ ಪ್ರಬಲವಾಗಿದ್ದು ಒಟ್ಟಾಗಿದೆ. ಅಮೆರಿಕ​ ನೇತೃತ್ವದಲ್ಲಿ ಉಕ್ರೇನ್​ ಬೆಂಬಲ ನೀಡುವ ಅಭೂತ ಪೂರ್ವ 50 ರಾಷ್ಟ್ರಗಳ ಜಾಗತಿಕ ಒಕ್ಕೂಟವು ಉಕ್ರೇನ್​ ಗೆ ನೆರವು ನೀಡುವುದನ್ನು ಮುಂದುವರೆಸಲಿದೆ ಎಂದಿದ್ದಾರೆ. ಈ ಮೂಲಕ ರಷ್ಯಾ ವಿರುದ್ಧ ಉಕ್ರೇನ್‌ಗೆ ಬೆಂಬಲ ಗ್ಯಾರಂಟಿ ಎಂದಿದ್ದಾರೆ.

USA Gave Shock To Russia After Russia & Ukraine War Completed 2 Years

2 ವರ್ಷಗಳ ನಿರಂತರ ದಾಳಿ

ಮೊದಲೇ ಹೇಳಿದಂತೆ ರಷ್ಯಾದ ಅಧ್ಯಕ್ಷ ಪುಟಿನ್ 2022ರ ಫೆಬ್ರವರಿ 20 ರಂದು ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ್ದರು. ರಷ್ಯಾ ಸೇನಾಧಿಕಾರಿಗಳ ಜೊತೆಯಲ್ಲಿ ಮಹತ್ವದ ಮಾತುಕತೆ ನಡೆಸಿ, ಕೆಲವೇ ಕ್ಷಣದಲ್ಲಿ ಯುದ್ಧ ಘೋಷಣೆ ಮಾಡಿದ್ದರು ಪುಟಿನ್. ಈ ಮೂಲಕ, ಶತ್ರುವಿನ ಸಾವಿಗೆ ಪಣತೊಟ್ಟರು ಪುಟಿನ್. ನೋಡ ನೋಡುತ್ತಲೇ ಯುದ್ಧ ಕೈಮೀರುತ್ತಿದ್ದು, ಈಗಾಗಲೇ ಉಕ್ರೇನ್ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದರೂ ರಷ್ಯಾದ ಕಡೆಯಿಂದ ಆಗಲಿ, ಅಥವಾ ಉಕ್ರೇನ್ ಕಡೆಯಿಂದ ಆಗಲಿ ಯುದ್ಧ ನಿಲ್ಲಿಸುವ ಚರ್ಚೆ ಆರಂಭ ಆಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+