Russia & Ukraine: ಉಕ್ರೇನ್‌ಗೆ 6000 ಕೋಟಿ ರೂಪಾಯಿ ಗಿಫ್ಟ್ ಕೊಟ್ಟ ಅಮೆರಿಕ!
ರಷ್ಯಾ & ಉಕ್ರೇನ್ ಹೊಡೆದಾಟದಲ್ಲಿ ಮಧ್ಯಪ್ರವೇಶ ಮಾಡುವ ತನ್ನ ಗುಣವನ್ನು ಈಗ ಅಮೆರಿಕ ಮತ್ತೆ ಮುಂದುವರಿಸಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಚುನಾವಣೆ ಗೆದ್ದ ನಂತರ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗಿದೆ. ಜೋ ಬೈಡನ್ ಇದೀಗ ಅಮೆರಿಕದ ಅಧಿಕಾರ ಬಿಟ್ಟು ಹೋಗಬೇಕಿದ್ದು, 2025ರ ಜನವರಿ ತಿಂಗಳಲ್ಲಿಯೇ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇಂತಹ ಸಮಯದಲ್ಲೇ 6000 ಕೋಟಿ ರೂಪಾಯಿ ಗಿಫ್ಟ್ ಉಕ್ರೇನ್‌ಗೆ ಸಿಗುತ್ತಿದೆ!
ಜಗತ್ತಿನ ದೊಡ್ಡಣ್ಣ & ಶ್ರೀಮಂತ ದೇಶ ಅನ್ನೋ ಬಿರುದು ಪಡೆದಿರುವ ಅಮೆರಿಕ ವಿರುದ್ಧ ಭಾರಿ ಗಂಭೀರ ಆರೋಪಗಳು ಕೂಡ ಇವೆ. ಹಾಗೇ ಅಮೆರಿಕ ವಿರುದ್ಧ ನಿಂತಿರುವ ಶತ್ರು ದೇಶಗಳ ಸಂಖ್ಯೆ ಕೂಡ ಇದೀಗ ದೊಡ್ಡ ಪ್ರಮಾಣದಲ್ಲಿಯೇ ಈ ಜಗತ್ತಿನಾದ್ಯಂತ ಇದೆ. ಅಮೆರಿಕ ತನಗೆ ಲಾಭ ಇದ್ದಾಗ ಮಾತ್ರ ಬೇರೆ ದೇಶಗಳಿಗೆ ಸಹಾಯ ಮಾಡುತ್ತದೆ ಎಂಬ ಗಂಭೀರ ಆರೋಪ ಇದೆ. ಹಾಗೇ ಅಮೆರಿಕ ತನ್ನ ಲಾಭ ಪಡೆದ ನಂತರ ನಂಬಿದವರಿಗೆ ಮೋಸ ಮಾಡುತ್ತದೆ ಅನ್ನೋ ಆರೋಪಗಳು ಕೂಡ ಇವೆ.

6000 ಕೋಟಿ ರೂಪಾಯಿ ಗಿಫ್ಟ್!
ಇಂತಹ ಆರೋಪಗಳ ಮಧ್ಯೆ ಈಗ ಮತ್ತೊಮ್ಮೆ ಉಕ್ರೇನ್‌ಗೆ ಅಮೆರಿಕದ ನಾಯಕರು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇದರ ಜೊತೆಯಲ್ಲೇ ಟ್ರಂಪ್ ಅಮೆರಿಕ ಅಧಿಕಾರವನ್ನ ವಹಿಸಿಕೊಳ್ಳುವ ಮೊದಲು ದೊಡ್ಡ ಸಂಚಲನ ಸೃಷ್ಟಿ ಮಾಡಲು ಉಕ್ರೇನ್‌ಗೆ ಒಂದಲ್ಲ.. ಎರಡಲ್ಲ.. 6000 ಕೋಟಿ ರೂಪಾಯಿ ಗಿಫ್ಟ್ ಕೊಡಲಾಗಿದೆಯಂತೆ!
725 ಮಿಲಿಯನ್ ಡಾಲರ್....
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿಗೆ ದೊಡ್ಡ ಚಿಂತೆ ಶುರುವಾಗಿದೆ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಮುಂದೆ ಮತ್ತೊಂದು ಮಹಾಯುದ್ಧ, ಅಂದರೆ 3ನೇ ಮಹಾಯುದ್ಧಕ್ಕೆ ತಿರುಗಿಬಿಟ್ಟರೆ ಜಗತ್ತಿನ ಪರಿಸ್ಥಿತಿ ಏನು? ಅಂತಾ ಚಿಂತೆ ಮಾಡ್ತಾ ಇದ್ದಾರೆ ಜನರು.
ಸ್ಥಿತಿ ಹೀಗಿದ್ದಾಗ ಅಮೆರಿಕ ಸುಮಾರು 725 ಮಿಲಿಯನ್ ಡಾಲರ್ ಅಂದ್ರೆ, ಹತ್ತಿರ ಹತ್ತಿರ 6000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಶಸ್ತ್ರಾಸ್ತ್ರ ಸಹಾಯ ಮಾಡುವ ನಿರ್ಧಾರ ಪ್ರಕಟಿಸಿದೆ ಎನ್ನಲಾಗಿದೆ. ಇದು ಈಗ ಮತ್ತಷ್ಟು ಸಂಚಲನ ಸೃಷ್ಟಿಸಿದ್ದು, ಇಡೀ ಜಗತ್ತಿನ ಎದೆ ನಡುಗಿಸುತ್ತಿದೆ.
ಹೀಗೆ ಜಗತ್ತಿನಲ್ಲಿ ಏನೇನೋ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಅನ್ನೋದು ಪ್ರಪಂಚದ ಬೇಡಿಕೆ ಆಗಿದೆ. ಆದರೆ ಈ ಬೇಡಿಕೆ ಈಡೇರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಯಾಕೆ ಅಂದ್ರೆ ಈಗಾಗಲೇ ರಷ್ಯಾ ಕೂಡ ಸಂಧಾನ ಮಾತುಕತೆಯ ಪ್ರಸ್ತಾಪ ತಿರಸ್ಕಾರ ಮಾಡಿದೆ.












Click it and Unblock the Notifications