India-Pakistan Tensions: ಭಾರತದ ವಿದೇಶಾಂಗ ಸಚಿವ ಹಾಗೂ ಪಾಕ್‌ ಪ್ರಧಾನಿ ಜೊತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾತುಕತೆ

India-Pakistan Tensions: ಭಾರತ-ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಲಿದೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಭಾರತದ ವಿದೇಶಾಂಗ ಸಚಿವರು ಜೈಶಂಕರ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಜೊತೆ ಮಾತನಾಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತಕ್ಷಣ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕದ ಕಾರ್ಯದರ್ಶಿ ರುಬಿಯೊ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಪಾಕ್ ಪ್ರಧಾನಿಯೊಂದಿಗೆ ಮಾತನಾಡಿದ್ದಾರೆ.

US Secretary talks with Minister of External Affairs of India and Pakistani Prime Minister

ಅಲ್ಲದೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆಯಲ್ಲಿ ಭಾರತದ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಬೆಂಬಲವನ್ನು ಜೈಶಂಕರ್ ಅವರು ಶ್ಲಾಘಿಸಿದ್ದಾರೆ.

ಡಾ.ಜೈಶಂಕರ್ ಅವರು ತಮ್ಮ ಟ್ವೀಟ್‌ನಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತದ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದೆ. ಯಾವುದೇ ರೀತಿಯ ದಾಳಿ ಪ್ರಯತ್ನಗಳನ್ನು ಭಾರತ ಧೈರ್ಯವಾಗಿ ಎದುರಿಸಲಿದೆ ಎಂದು ಬರೆದುಕೊಂಡಿದ್ದಾರೆ.

ಜಮ್ಮುವಿನ ಏರ್‌ಪೋರ್ಟ್‌ ಮತ್ತು ಭದ್ರತಾ ಕಾಲೋನಿ ಮೇಲೆ ಪಾಪಿ ಪಾಕಿಸ್ತಾನದ ವಾಯು ದಾಳಿಗೆ ಯತ್ನಿಸಿದೆ. ಆದರೆ ಭಾರತೀಯ ಸೇನೆ ಇದನ್ನು ತಡೆದಿದೆ. ಪಾಕಿಸ್ತಾನಿ ಸೇನೆಯು ಜಮ್ಮುವಿನಾದ್ಯಂತ ಹಲವಾರು ಸ್ಥಳಗಳ ಮೇಲೆ ಫಿರಂಗಿ ಗುಂಡಿನ ದಾಳಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಬೆನ್ನಲ್ಲೇ ಜಮ್ಮುವಿನಲ್ಲಿ ಸೈರನ್‌ ಮೊಳಗಿಸಿದ್ದು, ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನ ಪಠಾಣ್‌ಕೋಟ್‌‌ ಏರ್‌‌ಬೇಸ್‌ ಮೇಲೆ ದಾಳಿಗೆ ಯತ್ನಿಸಲಾಗಿದೆ. ಆದರೆ ಭಾರತೀಯ ಇದನ್ನು ಮತ್ತೆ ಎಸ್‌-400 ಮೂಲಕ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದೆ. ಭಾರತೀಯ ಸೇನಾ ನೆಲೆಯ ಮೇಲೆಯೇ ಪಾಕಿಸ್ತಾನ ದಾಳಿಗೆ ಯತ್ನಿಸಿದ್ದು, ಇದು ತೀವ್ರ ಸ್ವರೂಪದಲ್ಲಿದ್ದು ಭಾರತ ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದೆ. ಮಾಹಿತಿ ಪ್ರಕಾರ, ಪಾಕಿಸ್ತಾನ 8 ಕ್ಷಿಪಣಿಗಳ ಮೂಲಕ ಭಾರತಕ್ಕೆ ದಾಳಿಗೆ ಯತ್ನಿಸಿದ್ದು, ಆದರೆ ಈ ಎಂಟನ್ನೂ ಭಾರತ ಬ್ಲಾಕ್‌ ಮಾಡಿದೆ ಎಂದು ತಿಳಿದುಬಂದಿದೆ.

ಐಪಿಎಲ್ ರದ್ದಾಗುವ ಆತಂಕ: ಮತ್ತೊಂದೆಡೆ ಐಪಿಎಲ್ 2025ರಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದ್ದು, ಈ ಪೈಕಿ ಇಲ್ಲಿಯವರೆಗೆ 58 ಪಂದ್ಯಗಳು ಪೂರ್ಣಗೊಂಡಿವೆ. ಟೂರ್ನಿಯಲ್ಲಿ ಲೀಗ್ ಹಂತದ ಕೆಲವು ಪಂದ್ಯಗಳು ಮಾತ್ರ ಉಳಿದಿವೆ. ನಂತರ ಫೈನಲ್ ಸೇರಿದಂತೆ 4 ಪ್ಲೇ ಆಫ್ ಪಂದ್ಯಗಳು ಇನ್ನೂ ನಡೆಯಬೇಕಿದೆ. ಅಂತಹ ಪರಿಸ್ಥಿತಿಯಲ್ಲಿ ಪಂದ್ಯಾವಳಿಯನ್ನು ಮುಂದೂಡಲಾಗುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂದು ಕಾದುನೋಡಬೇಕಾಗಿದೆ. ಈ ಬಗ್ಗೆ ಬಿಸಿಸಿಐ ಶುಕ್ರವಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+