Syrian Conflict: ಸಿರಿಯಾ ಬಂಡುಕೋರರ ಗುಂಪಿನ ಜೊತೆಗೆ ಅಮೆರಿಕದ ನೇರ ಸಂಪರ್ಕ?

ಸಿರಿಯಾ ಸತ್ತು ಬದುಕಿದೆ, ಆಂತರಿಕ ಯುದ್ಧದಲ್ಲಿ ಸಿರಿಯಾ ನಲುಗಿ ಹೋಗಿದೆ. ಹೀಗಿದ್ದಾಗ ಸಿರಿಯಾ ನಿವಾಸಿಗಳು ಕೂಡ ಈ ಜಂಜಾಟ ನೋಡಿ ಸಾಕಪ್ಪಾ ಸಾಕು ಅಂತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸ್ಫೋಟಕ ಆರೋಪ ಕೇಳಿ ಬಂದಿದೆ. ಅದು ಏನು ಅಂದ್ರೆ, ಈ ರೀತಿ ಸಿರಿಯಾ ಸರ್ಕಾರದ ವಿರುದ್ಧ ಮುಗಿಬಿದ್ದ ಬಂಡುಕೋರರ ಜೊತೆಯಲ್ಲಿ ಅಮೆರಿಕ ಆಡಳಿತ ನೇರ ಸಂಪರ್ಕದಲ್ಲಿ ಇತ್ತಂತೆ ಎಂಬ ಆರೋಪ ಕೇಳಿ ಬಂದಿದೆ.

ಸಿರಿಯಾ ನೆಮ್ಮದಿಯಾಗಿತ್ತು & ಸಿರಿಯಾ ಜನ ಸಾಮಾನ್ಯ ಪ್ರಜೆಗಳ ರೀತಿಯೇ ಜೀವನವನ್ನು ಕೂಡ ನಡೆಸುತ್ತಿದ್ದರು. ಆದರೆ ಅದೊಂದು ದಿನ ಮಾತ್ರ ಭೀಕರ ಘಟನೆ ನಡೆದೇ ಹೊಗಿತ್ತು. ಸಿರಿಯಾ ಅಧ್ಯಕ್ಷ ಬಶರ್‌ ಅಲ್ ಅಸ್ಸಾದ್ ಆಡಳಿತದ ವಿರುದ್ಧ ತಿರುಗಿದ್ದ ಬಂಡುಕೋರರ ಗುಂಪು, 2011ರ ಸಮಯದಲ್ಲಿ ಬೃಹತ್ ಹೋರಾಟ ಶುರು ಮಾಡಿಬಿಟ್ಟಿತ್ತು.

US Secretary Of State Antony Blinken Is Said This About Syrian Rebel Group

ಹೀಗೆ ಶುರುವಾದ ಹೋರಾಟವು ಸುಮಾರು 13 ವರ್ಷ, 9 ತಿಂಗಳು ನಡೆದಿತ್ತು. ಕೊನೆಗೆ ಸಿರಿಯಾ ಅಧ್ಯಕ್ಷರೇ ಓಡಿ ಹೋಗುವಂತೆ ಆಗಿದ್ದು, ಇದೀಗ ಸಿರಿಯಾ ದೇಶದ ನೆಲದಲ್ಲಿ ಬಂಡುಕೋರರು ನೆಲೆಯೂರಿದ್ದಾರೆ. ಇಂತಹ ಸ್ಥಿತಿಯಲ್ಲೇ ಭಾರಿ ಗಂಭೀರ ಆರೋಪ ಕೇಳಿ ಬಂದಿದ್ದು, ಇಡೀ ಜಗತ್ತಿನ ದೊಡ್ಡಣ್ಣ ಅಮೆರಿಕ ಹೇಳಿದ್ದು ಏನು? ಮಾಹಿತಿಗಾಗಿ ಮುಂದೆ ಓದಿ.

ಅಮೆರಿಕದ ಜೊತೆಗೆ ಬಂಡುಕೋರರ ಸಂಪರ್ಕ?

ಸಿರಿಯಾ ಆಂತರಿಕ ತಿಕ್ಕಾಟದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು 'ಹಯಾತ್ ತಹ್ರೀರ್ ಅಲ್-ಶಾಮ್' ಎಂಬ ಬಂಡುಕೋರರ ಸಂಘಟನೆ. ಇದೀಗ ಕೇಳಿ ಬಂದಿರುವ ಆರೋಪದಂತೆ ಅಮೆರಿಕದ ಅಧಿಕಾರಿಗಳು & ಆಡಳಿತ ಸಿರಿಯಾದ 'ಹಯಾತ್ ತಹ್ರೀರ್ ಅಲ್-ಶಾಮ್' ಎಂಬ ಬಂಡುಕೋರ ಸಂಘಟನೆ ಜೊತೆಗೆ ನೇರ ಸಂಪರ್ಕದಲ್ಲಿ ಇತ್ತು ಎನ್ನಲಾಗಿದೆ. ಈ ವಿಚಾರಕ್ಕೆ ರಿಯಾಕ್ಷನ್ ಕೊಟ್ಟಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದೇನು?

ಸಿರಿಯಾ ವಿಚಾರದಲ್ಲಿ ಅಮೆರಿಕ ಎಂಟ್ರಿ!

ಆಂಟೋನಿ ಜಾನ್ ಬ್ಲಿಂಕೆನ್ ಅವರು ಹೇಳಿರುವ ಪ್ರಕಾರ, ಅಮೆರಿಕದ ಅಧಿಕಾರಿಗಳು & ಆಡಳಿತ ಸಿರಿಯಾದ ರೆಬೆಲ್ ಗುಂಪಿನ ಜೊತೆಗೆ ನೇರ ಸಂಪರ್ಕ ಹೊಂದಿದ್ದು ನಿಜ ಎಂದಿದ್ದಾರೆ. ಹೀಗೆ ಆಂಟೋನಿ ಜಾನ್ ಬ್ಲಿಂಕೆನ್ ಮಾಹಿತಿ ಇದೀಗ ದೊಡ್ಡ ಸಂಚಲನ ಕೂಡ ಸೃಷ್ಟಿ ಮಾಡಿದ್ದು, ಹಲವು ರೀತಿಯ ಪ್ರಶ್ನೆಗಳು ಕೂಡ ಎದ್ದಿವೆ. ಹಾಗೇ ಈ ಘಟನೆ ಅಮೆರಿಕದ ವಿರೋಧಿಗಳಿಗು ಹೊಸ ಅಸ್ತ್ರ ನೀಡಿದಂತೆ ಆಗಿದೆ. ಜೋ ಬೈಡನ್ ಆಡಳಿತದಲ್ಲಿ ಹೀಗೆಲ್ಲಾ ಆಗಿರುವುದನ್ನು, ಮುಂದೆ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಾಗ್ದಾಳಿಗೆ ಬಳಸಿದರೂ ಬಳಸಬಹುದು ಎಂಬ ಮಾತು ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+