Russia & Ukraine: ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಟ್ರಂಪ್ ಚರ್ಚೆ?

ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ತನಕ ಆಧುನಿಕ ಜಗತ್ತಿನಲ್ಲಿ ನೆಮ್ಮದಿ ಸಿಗುವುದಿಲ್ಲವೋ ಏನೋ ಗೊತ್ತಿಲ್ಲ. ಯಾಕಂದ್ರೆ ಈ ಯುದ್ಧ ಶುರುವಾದ ನಂತರ ಹಲವು ಸಮಸ್ಯೆ, ನೋವು ಎದುರಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಭಯದ ವಾತಾವರಣ ಕೂಡ ನಿರ್ಮಾಣವಾಗಿದ್ದು, ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಕೂಡ ಕಷ್ಟವಾಗಿದೆ. ಇಂತಹ ಸಂಕಷ್ಟದ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಮತ್ತೊಂದು ಮಹಾಯುದ್ಧ ನಡೆಯಬಾರದು ಅಂತಾ ಎಷ್ಟೇ ಪ್ರಯತ್ನ ಮಾಡಿದ್ರು ಪ್ರಯೋಜನ ಆಗುತ್ತಿಲ್ಲ. ಕ್ಷಣಕ್ಷಣಕ್ಕೂ ಮನುಷ್ಯರು ಮತ್ತೊಂದು ಮಹಾಯುದ್ಧ ನಡೆಸಲು ಸನ್ನದ್ಧತೆಯನ್ನ ಮಾಡಿಕೊಳ್ಳುತ್ತಿದ್ದು, ಆತಂಕ ಡಬಲ್ ಆಗುತ್ತಿದೆ. ಅದರಲ್ಲೂ ಈ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಉಗ್ರವಾಗುತ್ತಿದ್ದು, ಶೀಘ್ರದಲ್ಲೇ ಇಡೀ ಜಗತ್ತನ್ನೇ ನಾಶ ಮಾಡುವ ಬಾಂಬ್ ಹಾಕಲು ಎರಡೂ ಕಡೆ ಸಿದ್ಧತೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಪರಿಸ್ಥಿತಿ ಸೂಕ್ಷ್ಮವಾಗಿದ್ದ ಸಮಯದಲ್ಲೇ, ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಟ್ರಂಪ್ ಚರ್ಚೆ?

US President Trump Discusses Ending Ukraine War with Putin

ರಷ್ಯಾ ಜೊತೆ ಅಮೆರಿಕ ಅಧ್ಯಕ್ಷರ ಚರ್ಚೆ?

ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಒಂದು ಮಾತು ಕೊಟ್ಟಿದ್ದರು, ತಾವು ಅಧ್ಯಕ್ಷ ಸ್ಥಾನಕ್ಕೆ ಏರಿದ 24 ಗಂಟೆಯ ಒಳಗಾಗಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುತ್ತೇನೆ ಎಂದಿದ್ದರು. ಆದರೆ ಅದು ನಡೆಯಲೇ ಇಲ್ಲ, ಹೀಗಿದ್ದಾಗ ಯುದ್ಧ ಯಾವಾಗ ನಿಲ್ಲುತ್ತೆ ಅಂತಾ ಎಲ್ಲರೂ ಕಾಯುವಾಗಲೇ ಭರ್ಜರಿ ಗುಡ್ ನ್ಯೂಸ್ ಸಿಗುತ್ತಿದೆ. ಅಂದಹಾಗೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ್ದಾರೆ. ಇಬ್ಬರೂ ಮಾತುಕತೆ ನಡೆಸಿದ್ದು, ಯುದ್ಧ ನಿಲ್ಲುವ ನಿರೀಕ್ಷೆ ಮೂಡಿದೆ.

ಯುದ್ಧ... ಯುದ್ಧ... ಯುದ್ಧ... ಹೀಗೆ ಎಲ್ಲಿ ಕೇಳಿದರೂ ಬರೀ ಯುದ್ಧದ ಮಾತುಗಳೇ ಕೇಳಿಬರುತ್ತಿವೆ. ಅದರಲ್ಲೂ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಯುರೋಪ್ ನಲುಗಿ ಹೋಗಿದೆ. ಉಕ್ರೇನ್ & ರಷ್ಯಾ ಯುದ್ಧ ಕ್ಷಣಕ್ಕೊಂದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೇಗೆಂದರೆ ಜಾಗತಿಕ ಮಟ್ಟದಲ್ಲಿ ಈ ಯುದ್ಧ ಭಾರಿ ಗಂಭೀರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.

ಶೀಘ್ರದಲ್ಲೇ ಯುದ್ಧ ನಿಲ್ಲುವುದು ಗ್ಯಾರಂಟಿ?

ಒಂದ್ಕಡೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಪರ ನಿಂತಿದ್ದರೆ, ಮತ್ತೊಂದು ಕಡೆ ರಷ್ಯಾ ಪರವಾಗಿ ಚೀನಾ ನಿಂತಿದೆ. ಅಲ್ಲದೆ ಉತ್ತರ ಕೊರಿಯಾ ಕೂಡ ಸಾಥ್ ನೀಡುತ್ತಿದ್ದು, ಹೀಗಿದ್ದರೂ ಉಕ್ರೇನ್ ಸೇನೆ ದಿಢೀರ್ ಅಂತಾ ರಷ್ಯಾ ಒಳಗಡೆ ನುಗ್ಗಿ ದಾಳಿ ಮಾಡುತ್ತಿದೆ. ಹೀಗಾಗಿ ರಷ್ಯಾ ತನ್ನಲಿರುವ ಪರಮಾಣು ಬಾಂಬ್ ಬಳಸುವ ಭಯ ಶುರುವಾಗಿತ್ತು. ಆದರೆ ಇದೀಗ ಅಮೆರಿಕ ಅಧ್ಯಕ್ಷರು ನೇರವಾಗಿ ರಷ್ಯಾ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ ಎಂಬ ಸುದ್ದಿ ನೆಮ್ಮದಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+