Donald Trump: ಉಕ್ರೇನ್‌ಗೆ ನೀಡುತ್ತಿದ್ದ ಎಲ್ಲಾ ನೆರವು ಬಂದ್ ಮಾಡಿದ ಡೊನಾಲ್ಡ್ ಟ್ರಂಪ್!

ಉಕ್ರೇನ್ ಪರಿಸ್ಥಿತಿ ಈಗ ಬೆಂಕಿಯಿಂದ ಬಾಣಲೆಗೆ ಜಿಗಿದಂತೆ ಆಗಿದ್ದು, ಸುಮ್ಮನೆ ಇರದೆ ಈಗ ಉಕ್ರೇನ್ ತನ್ನ ಮೈಗೆ ತಾನೇ ಬೆಂಕಿ ಹಚ್ಚಿಕೊಂಡಿದೆ. ಅಮೆರಿಕದ ಜೊತೆಯಲ್ಲಿ ಮಾಡಿಕೊಂಡ ಎಡವಟ್ಟು ಇದೀಗ ಉಕ್ರೇನ್‌ನ ಬೀದಿಗೆ ಬೀಳುವಂತೆ ಮಾಡಿದೆ. ರಷ್ಯಾ ಜೊತೆಗೆ ಬಡಿದಾಡುವ ಸಮಯದಲ್ಲೇ ಉಕ್ರೇನ್ ದೇಶಕ್ಕೆ ಅಮೆರಿಕ ನೀಡುತ್ತಿದ್ದ ನೆರವು ಸ್ಥಗಿತವಾಗಿದೆ. ಅದರಲ್ಲೂ, ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕೃತವಾಗಿ ಈ ಘೋಷಣೆ ಮಾಡಿ ಕಿಚ್ಚು ಹೊತ್ತಿಸಿದೆ.

ಉಕ್ರೇನ್‌ಗೆ ಈಗಾಗಲೇ ಸುಮಾರು 350 ಬಿಲಿಯನ್ ಡಾಲರ್ ನೆರವನ್ನ ಅಮೆರಿಕ ನೀಡಿದೆ ಅಂತಾ ಹೇಳಿಕೊಳ್ಳುತ್ತಿದೆ. ಶಸ್ತ್ರಾಸ್ತ್ರಗಳು ಸೇರಿದಂತೆ ಮಾನವೀಯ ನೆರವು ಹೀಗೆ ಹಲವು ರೀತಿಯಲ್ಲಿ ಅಮೆರಿಕ ಸಹಾಯ ಮಾಡಿತ್ತು. ಜೋ ಬೈಡನ್ ಸರ್ಕಾರ ಈ ರೀತಿ ಲಕ್ಷ ಲಕ್ಷ ಕೋಟಿ ರೂಪಾಯಿ ಹಣವನ್ನು ಉಕ್ರೇನ್‌ಗೆ ನೀಡಿತ್ತು. ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಉಕ್ರೇನ್ ವಿರುದ್ಧ ಗರಂ ಆಗಿದ್ದರು. ಮೊದಲು ಯುದ್ಧ ನಿಲ್ಲಿಸಿ ಎಂದು ಆದೇಶವನ್ನು ಕೂಡ ಹೊರಡಿಸಿದ್ದರು. ಹೀಗಿದ್ದಾಗಲೇ ನೆರವು ಸ್ಥಗಿತ ಮಾಡಿ ಉಕ್ರೇನ್ ಬುಡಕ್ಕೆ ಬಿಸಿನೀರು ಕಾಯಿಸಿದೆ ಅಮೆರಿಕ.

US President Donald Trump Ends Military Aid to Ukraine

ಬೆಚ್ಚಿಬಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್‌ಹೌಸ್ ಅಧಿಕಾರಿಗಳು ಮಹತ್ವದ ಘೋಷಣೆಯನ್ನ ಹೊರಡಿಸಿದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅದರಲ್ಲೂ, ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕದ ಈ ನಡೆ ಕಂಡು ನಲುಗಿ ಹೋಗಿದ್ದಾರೆ. ಮುಂದೆ ಏನು ಮಾಡುವುದು? ಎಂಬ ಚಿಂತೆ ಉಕ್ರೇನ್‌ಗೆ ಆವರಿಸಿದೆ. ಈಗಾಗಲೇ ರಷ್ಯಾ ಸೇನೆ ಉಕ್ರೇನ್‌ನ ಬಹುತೇಕ ಎಲ್ಲಾ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ. ಈಗ ಬಾಕಿ ಉಳಿದಿರುವುದು, ಉಕ್ರೇನ್ ರಾಜಧಾನಿ ಕೀವ್ ಮಾತ್ರ. ಆದರೆ ಈಗ ಕೀವ್ ಕೂಡ ಕೈಬಿಟ್ಟು ಹೋಗುವ ಆತಂಕ ಆವರಿಸಿದೆ.

ಕೊನೆಗೂ ಉಕ್ರೇನ್ ಕೈಬಿಟ್ಟ ಅಮೆರಿಕ!

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 3 ವರ್ಷ ಕಳೆದ ಬೆನ್ನಲ್ಲೇ ಅಮೆರಿಕದ ಜೊತೆಯಲ್ಲಿ ಮಹತ್ವದ ಮಾತುಕತೆಗೆ ಅಂತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ವೇತಭವನಕ್ಕೆ ತೆರಳಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನೆರವು ಸಿಗುವ ನಿರೀಕ್ಷೆಯಲ್ಲಿ ಇದ್ದ ವೊಲೊಡಿಮಿರ್ ಝೆಲೆನ್ಸ್ಕಿಗೆ ಆಘಾತ ಎದುರಾಗಿತ್ತು.

ದಿಢೀರ್ ಟ್ರಂಪ್ ಎಚ್ಚರಿಕೆ ನೀಡಿ, ವೊಲೊಡಿಮಿರ್ ಝೆಲೆನ್ಸ್ಕಿಯನ್ನ ಹೊರಗೆ ಕಳುಹಿಸಿದ್ದರು. ಈ ಘಟನೆ ನಂತರ ಡೊನಾಲ್ಡ್ ಟ್ರಂಪ್ ಆಡಳಿತ ಇದೀಗ ಉಕ್ರೇನ್‌ಗೆ ನೆರವು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಆದೇಶ ಕೂಡ ಹೊರಡಿಸಿದೆ. ಇದು ಆತಂಕ ಹೆಚ್ಚು ಮಾಡಿದ್ದು, ಯುದ್ಧದ ಭಯಾನಕತೆ ಇನ್ನಷ್ಟು ಹೆಚ್ಚಾಗುವ ತಲೆನೋವು ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+