Donald Trump Tariffs: ಕಾರುಗಳ ಮೇಲೆ ಶೇ. 25 ತೆರಿಗೆ ಫಿಕ್ಸ್, ಭಾರತಕ್ಕೆ ಭಾರಿ ಆಘಾತ ನೀಡಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ರೊಚ್ಚಿಗೆದ್ದು ತೆರಿಗೆ ಹಾಕುತ್ತಿದ್ದು, ಭಾರತದ ಕಾರು ತಯಾರಿಕಾ ವಲಯಕ್ಕೆ ಭಾರಿ ದೊಡ್ಡ ಆಘಾತವನ್ನೇ ನೀಡಿದ್ದಾರೆ. ಭಾರತ & ಅಮೆರಿಕ ಸಂಬಂಧ ಉತ್ತಮವಾಗಿ ಇರುವ ಸಮಯದಲ್ಲೇ ಈ ರೀತಿ ಡೊನಾಲ್ಡ್ ಟ್ರಂಪ್ ತೆರಿಗೆ ಆಘಾತ ನೀಡಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಭಾರತದ ಆರ್ಥಿಕತೆ ಬುಡವನ್ನೇ ಅಲುಗಾಡಿಸುವ ರೀತಿ ಟ್ರಂಪ್ ನಿರ್ಧಾರ ಕೈಗೊಂಡಿದ್ದಾರೆ.

ಭಾರತ ಕಾರುಗಳು ಸೇರಿದಂತೆ ಆಟೋಮೊಬೈಲ್ ಇಂಡಸ್ಟ್ರಿಗೆ ಇಡೀ ಜಗತ್ತಿನಲ್ಲೇ ಹೆಸರುವಾಸಿ ಆಗಿದೆ. ಭಾರತದಲ್ಲಿ ದೊಡ್ಡ ದೊಡ್ಡ ಕಾರು ತಯಾರಿಕಾ ಕಂಪನಿಗಳು ಇದ್ದು, ಜಾಗತಿಕವಾಗಿ ದೊಡ್ಡ ಹೆಸರು ಮಾಡಿವೆ. ಅಮೆರಿಕ ಕೂಡ ಭಾರತದಿಂದ ಭಾರಿ ಪ್ರಮಾಣದಲ್ಲಿ ಕಾರುಗಳನ್ನ ಆಮದು ಮಾಡಿಕೊಳ್ಳುತ್ತದೆ. ಹೀಗೆ ಪರಸ್ಪರ ಸಂಬಂಧ ಇದ್ದರೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಬರೋಬ್ಬರಿ ಶೇಕಡಾ 25 ರಷ್ಟು ತೆರಿಗೆ ಫಿಕ್ಸ್ ಮಾಡಿದ್ದು, ಜಾಗತಿಕ ವಲಯದಲ್ಲಿ ಈ ನಿರ್ಧಾರ ಸಂಚಲನ ಸೃಷ್ಟಿ ಮಾಡಿದೆ.

US President Donald Trump Confirms 25 Auto Tariffs on Foreign Made Automobiles

ಅಮೆರಿಕ ಸರ್ಕಾರದಿಂದ ಸೇಡಿಗೆ ಸೇಡು?

ಭಾರತ ನಮ್ಮ ಕಾರುಗಳ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು, ಈ ಕಾರಣಕ್ಕೆ ನಾವು ಕೂಡ ಹೆಚ್ಚಿನ ತೆರಿಗೆ ಹಾಕುತ್ತಿದ್ದೇವೆ ಅಂತಾ ಇದೀಗ ಅಮೆರಿಕ ತನ್ನ ನಿರ್ಧಾರ ಸಮರ್ಥನೆ ಮಾಡಿದೆ. ಹಾಗೇ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ನೀತಿ ಘೋಷಣೆ ಮಾಡಿದ್ದು, ಆ ಮೂಲಕ ಅಲ್ಲೋಲ ಕಲ್ಲೋ ಸೃಷ್ಟಿಯಾಗಿದೆ. ಭಾರತ ಮಾತ್ರವಲ್ಲದೆ ಚೀನಾ ಕೂಡ ಟ್ರಂಪ್ ಕೈಗೊಂಡ ನಿರ್ಧಾರದಿಂದ ದೊಡ್ಡ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಅಲ್ಲದೆ ಅಮೆರಿಕ ಕೈಗೊಂಡಿರುವ ಈ ನಿರ್ಧಾರಕ್ಕೆ ತಿರುಗೇಟು ನೀಡಲು ಚರ್ಚೆ ಶುರುವಾಗಿದೆ.

ಚೀನಾ ನಡೆ ಮುಂದೆ ಏನು?

ಅಮೆರಿಕ & ಚೀನಾ ನಡುವೆ ಆಗಾಗ ತೆರಿಗೆ ಯುದ್ಧ ನಡೆಯುತ್ತಲೇ ಬಂದಿದೆ. ಈ ಹಿಂದೆಯೂ ಡೊನಾಲ್ಡ್ ಟ್ರಂಪ್ ಚೀನಾ ಜೊತೆಗೆ ತೆರಿಗೆ ಕಿರಿಕ್ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿಯ ಫೈಟಿಂಗ್ ಶುರುವಾಗಿದ್ದು, ಚೀನಾ ಈ ವಿಚಾರದಲ್ಲಿ ಯಾವ ರೀತಿ ನಿರ್ಧಾರವನ್ನು ಕೈಗೊಳ್ಳಲಿದೆ? ಎಂಬ ಕುತೂಹಲ ಮೂಡಿದೆ.

ಒಟ್ನಲ್ಲಿ ಆರ್ಥಿಕವಾಗಿ ಬೀದಿಗೆ ಬೀಳುವ ಭಯದಲ್ಲಿ ಅಮೆರಿಕ ಏನೇನೋ ನಿರ್ಧಾರ ಪ್ರಕಟಿಸಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಅಮೆರಿಕ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ರಫ್ತು ಮಾಡುತ್ತದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಆಡಳಿತ ದಿಢೀರ್ ಬೇರೆ ಬೇರೆ ದೇಶಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿರುವುದು ಮುಂದೆ ಅಮೆರಿಕಗೆ ಕಂಟಕ ತಂದರೂ ಅಚ್ಚರಿ ಪಡಬೇಕಿಲ್ಲ ಅಂತಿದ್ದಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+