Ukraine: ರಷ್ಯಾ ವಿರುದ್ಧ ಉಕ್ರೇನ್‌ಗೆ ನೇರವಾಗಿ ಶಸ್ತ್ರಾಸ್ತ್ರ ಪೂರೈಸಲು ಮುಂದಾದ ಅಮೆರಿಕ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಉಕ್ರೇನ್ ಯುದ್ಧದಲ್ಲಿ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ನಡೆಯುತ್ತಿರುವ ತಿಕ್ಕಾಟದ ಪರಿಣಾಮ ಈಗ ಉಕ್ರೇನ್ ಬೆನ್ನಿಗೆ ನೇರವಾಗಿ ನಿಲ್ಲಲು ಅಮೆರಿಕ ನಿರ್ಧಾರ ಮಾಡಿದ್ದು, ಇದರ ಪರಿಣಾಮ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ, ರಷ್ಯಾ ಸೇನೆ ವಿರುದ್ಧ ಉಕ್ರೇನ್‌ಗೆ ನೇರವಾಗಿ ಶಸ್ತ್ರಾಸ್ತ್ರ ಪೂರೈಸಲು ಮುಂದಾದ ಅಮೆರಿಕ?
ಡೊನಾಲ್ಡ್ ಟ್ರಂಪ್ ಅವರು ಇದೀಗ ನಿರ್ಧಾರ ಮಾಡಿರುವಂತೆ, ಉಕ್ರೈನ್ ಸೇನೆಗೆ ರಷ್ಯಾದ ವಿರುದ್ಧದ ಹೋರಾಟದಲ್ಲಿ ಫೈಟ್ ಮಾಡಲು ಮಹತ್ವದ ಅಸ್ತ್ರಗಳನ್ನ ನೀಡಲು ನಿರ್ಧರಿಸಿದ್ದಾರೆ. ಅದರಲ್ಲೂ ಈ ವಿಚಾರದಲ್ಲಿ ಖಂಡಾಂತರ ಕ್ಷಿಪಣಿಗಳು ಸೇರಿದಂತೆ ರಷ್ಯಾ ಆಕ್ರಮಿತ ಪ್ರದೇಶಗಳನ್ನ ಸ್ವಾತಂತ್ರ್ಯಗೊಳಿಸಲು ಬೇಕಾದ ಅಸ್ತ್ರಗಳನ್ನ ನೀಡಲಿದ್ದಾರೆ ಎಂಬ ಸುದ್ದಿ ಇದೀಗ ಹಬ್ಬಿದೆ. ಅಮೆರಿಕದ ಗುಪ್ತಚರ ಇಲಾಖೆಯ ಸಹಾಯ ಪಡೆದು ಈಗ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ತಲುಪಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಇದೀಗ ಹಬ್ಬಿದೆ.

ರಷ್ಯಾ ಆದಾಯಕ್ಕೆ ದೊಡ್ಡ ಪೆಟ್ಟು?
ಅಮೆರಿಕ ಅಕಸ್ಮಾತ್ ಈ ರೀತಿಯ ಅಸ್ತ್ರಗಳನ್ನು ಉಕ್ರೇನ್ ಸೇನೆಗೆ ನೀಡಿದರೆ ಆ ನಂತರದ ಪರಿಸ್ಥಿತಿಗೆ ರಷ್ಯಾ ಬಲಿಯಾಗುವುದು ಗ್ಯಾರಂಟಿ. ಯಾಕಂದ್ರೆ ರಷ್ಯಾದ ಮೂಲಸೌಕರ್ಯ ಸೇರಿದಂತೆ, ತೈಲ ಸಂಗ್ರಹ ಘಟಕಗಳು, ತೈಲ ಸರಬರಾಜು ಪೈಪ್‌ಗಳನ್ನ ಉಕ್ರೇನ್ ಸೇನೆ ನೇರವಾಗಿ ಟಾರ್ಗೆಟ್ ಮಾಡುವ ಅಪಾಯ ಇದೆ ಎನ್ನಲಾಗ್ತಿದೆ. ತೈಲ ಸರಬರಾಜು ಮೂಲಕ ರಷ್ಯಾ ದೊಡ್ಡ ಮಟ್ಟದಲ್ಲಿ ಆದಾಯ ಗಳಿಸುತ್ತಿದೆ, ಆದರೆ ಅದಕ್ಕೇ ಈಗ ಕೊಕ್ಕೆ ಹಾಕಿದರೆ ಇದರಿಂದ ರಷ್ಯಾ ಯುದ್ಧದಲ್ಲಿ ಸೋಲು ಒಪ್ಪಿಕೊಳ್ಳುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.
ಯುದ್ಧ ನಿಲ್ಲಿಸುತ್ತಾ ರಷ್ಯಾ ಸೇನೆ?
ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಒತ್ತಡ ಹೇರುತ್ತಾ ಇದ್ದು, ತಕ್ಷಣವೇ ತೈಲ ಖರೀದಿ ನಿಲ್ಲಿಸಬೇಕು ಎಂಬ ಆದೇಶ ಹೊರಡಿಸುತ್ತಾ ಇದ್ದಾರೆ. ಈ ಮೂಲಕ ಪುಟಿನ್ ಮೇಲೆ ಸಿಕ್ಕಾಪಟ್ಟೆ ಒತ್ತಡ ತರಲಾಗುತ್ತಿದೆ, ಹಾಗೇ ರಷ್ಯಾ ವಸ್ತುಗಳ ಖರೀದಿಗೆ ನೂರೆಂಟು ಅಡ್ಡಿ ಮಾಡುತ್ತಿದ್ದಾರೆ. ಇಷ್ಟಾದರೂ ರಷ್ಯಾ ಮಾತ್ರ ತನ್ನ ಹಠ ಬಿಟ್ಟು ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಮುಂದಾಗುತ್ತಿಲ್ಲ. ಹೀಗಿದ್ದಾಗ ಉಕ್ರೇನ್ ನೆಲದಲ್ಲಿ ಇರುವ ಸಂಪತ್ತು ಪಡೆಯಲು ಅಮೆರಿಕ ಒಪ್ಪಂದ ಮಾಡಿಕೊಂಡಿದ್ದು, ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications