ನ್ಯೂಯಾರ್ಕ್‌ನಲ್ಲಿ ಕೋಲ್ಡ್ ಫ್ರೈಸ್ ಬಡಿಸಿದ ಮೆಕ್ ಡೊನಾಲ್ಡ್ ಉದ್ಯೋಗಿಗೆ ಗುಂಡೇಟು!

ನ್ಯೂಯಾರ್ಕ್, ಆಗಸ್ಟ್ 4: ಯುನೈಟೆಡ್ ಸ್ಟೇಟ್ಸ್ ನೆಲದಲ್ಲಿ ಇತ್ತೀಚಿಗೆ ಗುಂಡಿನ ದಾಳಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ತಾಯಿಗೆ ಕೋಲ್ಡ್ ಫ್ರೆಂಚ್ ಫ್ರೈಸ್ ಬಡಿಸಿದ ಎಂಬ ಕಾರಣಕ್ಕೆ ಮೆಕ್ ಡೊನಾಲ್ಡ್ ಕೆಲಸಗಾರನ ಮೇಲೆ ಗುಂಡು ಹಾರಿಸಿದ ಘಟನೆಯೊಂದು ನ್ಯೂಯಾರ್ಕ್‌ನಲ್ಲಿ ನಡೆದಿದೆ.

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಗ್ ಆಪಲ್‌ನಲ್ಲಿ ಪ್ರತಿದಿನ ಬಹು ಗುಂಡೇಟಿನ ಘಟನೆಗಳು ನಡೆಯುತ್ತಿವೆ.

ಇತ್ತೀಚಿನ ಪ್ರಕರಣದಲ್ಲಿ 20 ವರ್ಷದ ಮೈಕೆಲ್ ಮೋರ್ಗಾನ್ ಸೋಮವಾರ ಸಂಜೆ ಬ್ರೂಕ್ಲಿನ್‌ನಲ್ಲಿ 23 ವರ್ಷದ ಮೆಕ್‌ಡೊನಾಲ್ಡ್ ಉದ್ಯೋಗಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿಯು ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

US News: A Man Shot McDonalds worker after serve cold fries in New york

ಗುಂಡು ಹಾರಿಸಿದ ಘಟನೆ ಹಿನ್ನೆಲೆ: ನ್ಯೂಯಾರ್ಕ್‌ನಲ್ಲಿ 40 ವರ್ಷದ ಮಹಿಳೆಗೆ ಕೋಲ್ಡ್ ಫ್ರೈಸ್ ನೀಡಿದ ಘಟನೆಯಿಂದ ಇದೆಲ್ಲಾ ಶುರುವಾಯಿತು. ಮಹಿಳೆ ಮತ್ತು ಉದ್ಯೋಗಿ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಮಹಿಳೆಯು ತನ್ನ ಪುತ್ರ ಮೋರ್ಗಾನ್‌ಗೆ ವೀಡಿಯೊ ಕರೆ ಮಾಡಿದರು. ನಂತರದಲ್ಲಿ ಫಾಸ್ಟ್‌ಫುಡ್ ಶಾಪಿಗೆ ನುಗ್ಗಿದ ವ್ಯಕ್ತಿಯು ಉದ್ಯೋಗಿಯ ಮೇಲೆ ಗುಂಡು ಹಾರಿಸಿದ್ದಾನೆ.

ಇದೇ ಆರೋಪಿಯನ್ನು ವಿವಿಧ ಅಪರಾಧಗಳಿಗಾಗಿ ಈ ಹಿಂದೆಯೂ ಹಲವಾರು ಬಾರಿ ಬಂಧಿಸಲಾಗಿತ್ತು ವರದಿಯಾಗಿದೆ.

ಲೋಡ್ ಮಾಡಿದ ಬಂದೂಕನ್ನು ಕ್ರಿಮಿನಲ್ ಸ್ವಾಧೀನಪಡಿಸಿಕೊಂಡ ಆರೋಪದಲ್ಲಿ ಮೋರ್ಗಾನ್‌ಗೆ ಕಪಾಳಮೋಕ್ಷ ಮಾಡಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಯುಎಸ್ ನೆೆಲದಲ್ಲಿ ಗನ್ ಮತ್ತು ಸಾವಿನ ನಂಟು: ನ್ಯೂಯಾರ್ಕ್‌ನಲ್ಲಿ ಶೂಟಿಂಗ್ ಬಲಿಯಾದವರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ.09ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ 1,051 ಪ್ರಕರಣಗಳು ನಡೆೆದಿದ್ದು, ಈ ವರ್ಷ ಆ ಸಂಖ್ಯೆಯು 988 ಕ್ಕೆ ಇಳಿದಿದೆ. ಕಳೆದ 2020ರಲ್ಲಿ 45,000ಕ್ಕೂ ಹೆಚ್ಚು ಜನರು ಗುಂಡೇಟಿನಿಂದ ಹತ್ಯೆಯಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಗನ್ ವಯಲೆನ್ಸ್ ಆರ್ಕೈವ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+