Citizenship: ಅಮೆರಿಕದಲ್ಲಿ 40 ವಲಸಿಗರ ಪೌರತ್ವ ರದ್ದತಿಗೆ ಕಾನೂನು ಕ್ರಮ; ಭಾರತೀಯ ಸೇರಿ ಕೆಲವರಿಗೆ ಸಂಕಷ್ಟ

ಅಮೆರಿಕ ದೇಶವು ಈ ಹಿಂದೆ ಭಾರತ ಸೇರಿದಂತೆ ವಿದೇಶಿ ವಸ್ತುಗಳ ಆಮದು ಸುಂಕ ಹೆಚ್ಚಿಸಿ, ತನ್ನದೇ ಕೆಲವು ನಿರ್ಧಾರಗಳಿಂದ ಸುದ್ದಿಯಾಗುತ್ತಿತ್ತು. ಇದೀಗ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಮೆರಿಕ ಸರ್ಕಾರವು ಕಾನೂನಾತ್ಮಕ ಅಸ್ತ್ರವನ್ನು ಪ್ರಯೋಗಿಸಿದೆ. ಯುಎಸ್ ನಲ್ಲಿ ನೆಲೆಸಿರುವ 40 ವಲಸಿಗರ ಪೌರತ್ವವನ್ನು ರದ್ದತಿಗೆ ನ್ಯಾಯಾಂಗ ಇಲಾಖೆ ಕಾನೂನು ಕ್ರಮ ಜರುಗಿಸಿದೆ. ಈ ಅಕ್ರಮವನ್ನು ಅಭಿಯಾನದಂತೆ ಆರಂಭಿಸಿದೆ.

ದೇಶದ ಇತಿಹಾಸದಲ್ಲಿ ವಂಚನೆಯ ಮೂಲಕ ಅಮೆರಿಕದಲ್ಲಿ ನೆಲೆಸಿರುವ ವಲಸಿಗರ ಪೌರತ್ವ ರದ್ದತಿಗೆ ಯುಎಸ್ ಸಜ್ಜಾಗಿದೆ. ಸಹಾಯಕ ಅಟಾರ್ನಿ ಜನರಲ್ ಬ್ರೆಟ್ ಎ. ಶುಮಾಟೆ ಅವರು, ಯಾರು ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ಮತ್ತು ನೈಜ ಸಂಗತಿಗಳನ್ನು ಮರೆಮಾಚಿದ್ದಾರೋ, ಅಂತವರು ಪೌರತ್ವ ಪಡೆದು ಇಲ್ಲಿ ನೆಲೆಸಿದ್ದಾರೋ ಅಂಥವರನ್ನು ನಾವು ನಿರ್ಲಕ್ಷಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

US Moves to Revoke Citizenship

ಭಾರತೀಯ ಸೇರಿ ಪೌರತ್ವ ರದ್ದು ಪಟ್ಟಿಯಲ್ಲಿ 40ಮಂದಿ!

ಅಮೆರಿಕದ ಪೌರತ್ವ ರದ್ದು ಅಭಿಯಾನದಲ್ಲಿ ಭಾರತ, ಚೀನಾ, ಪಾಕಿಸ್ತಾನ, ಮೆಕ್ಸಿಕೊ, ನೇಪಾಳ ಹಾಗೂ ಅಫ್ಘಾನಿಸ್ತಾನದಂತಹ ಅನೇಕ ದೇಶಗಳ ವಲಸಿಗರಿಗೆ ತೊಂದರೆ ಆಗಲಿದೆ. ಅವರು ಯುಎಸ್ ಪೌರತ್ಮ ಪಡೆದುಕೊಳ್ಳಲಿದ್ದಾರೆ. ಕ್ಯಾಲಿಫೋರ್ನಿಯಾಲ್ಲಿ ನೆಲೆಸಿರುವ ಭಾರತೀಯ ವ್ಯಕ್ತಿ ಬಲ್ವಿಂದರ್ ಸಿಂಗ್ ಅವರು ಪೌರತ್ವ ರದ್ದು ಆತಂಕ ಎದುರಿಸುತ್ತಿದ್ದಾರೆ. ಅವರು ಸೇರಿದಂತೆ ಒಟ್ಟು 40 ಮಂದಿ ವಲಸಿಗರಲ್ಲಿ ಭಯ ಶುರುವಾಗಿದೆ.

ಎರಡು ಅರ್ಜಿ ಸಲ್ಲಿಸಿದ್ರಾ ಸಿಂಗ್?

ಬಲ್ವಿಂದರ್ ಸಿಂಗ್ ತಮ್ಮ ಹೆಸರಿನಲ್ಲಿ 1992 ರಲ್ಲಿ ಅಮೆರಿಕಕ್ಕೆ ತೆರಳಲು ವಲಸೆ ಅರ್ಜಿ ಸಲ್ಲಿಸಿದ್ದಾರೆ. 2003 ರಲ್ಲಿ ಮತ್ತೊಂದು ನಕಲಿ ಗುರುತಿನ ಮೂಲಕ ಯುಎಸ್ ಗ್ರೀನ್ ಕಾರ್ಡ್ ಪಡೆದರು. ಮುಂದೆ ಅಲ್ಲಿಯೇ ವಾಸಿಸುತ್ತಾ ಅವರು, ಗ್ರೀನ್ ಕಾರ್ಡ್ ಆಧಾರದಲ್ಲಿ 2009 ರಲ್ಲಿ ಅಮೇರಿಕನ್ ಪೌರತ್ವ ಪಡೆದು, ಅಲ್ಲಿಯವರಾದರು.

ಇತ್ತೀಚೆಗೆ ಅಮೆರಿಕ ವಲಸೆ ಪೌರರ ತನಿಖೆ ನಡೆಸಿದ್ದು, ಬೆರಳಚ್ಚುಗಳ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ನಕಲಿ ದಾಖಲೆಗಳು ಸಲ್ಲಿಸಿದ್ದು ಸಾಬೀತಾಗಿದೆ. ಬಲ್ವಿಂದರ್ ಸಿಂಗ್ ಎರಡು ಅರ್ಜಿಗಳನ್ನು ಒಬ್ಬನೇ ಸಲ್ಲಿಸಿದ್ದಾನೆಂದು ಅಧಿಕಾರಿಗಳಿಗೆ ಗೊತ್ತಾಗಿದ್ದು, ಸರ್ಕಾರವನ್ನು ವಂಚಿಸಿದ್ದಕ್ಕಾಗಿ ಅವರ ಪೌರತ್ವ ರದ್ದು ಮಾಡಲು ಯುಎಸ್ ಸರ್ಕಾರ ನ್ಯಾಯಾಲಯ ಮೆಟ್ಟಿಲೇರಿದೆ. ಗುರುತಿನ ಚೀಟಿ, ನಕಲಿ ಮಾಹಿತಿ ವಂಚಬೆ ಮಾತ್ರವಲ್ಲದೇ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿದ ಅಪರಾಧಿಗಳೂ ಪೌರತ್ವ ರದ್ದು ಪಟ್ಟಿಯಲ್ಲಿದ್ದಾರೆ ಎಂದು ವರದಿ ಆಗಿದೆ.

ಯುಎಸ್ ಮಿಲಿಟರಿ ಮಾಹಿತಿ ಮಾರಾಟಕ್ಕೆ ಚೀನಾ ವ್ಯಕ್ತಿ ಯತ್ನ!

ಚೀನಾದಲ್ಲಿ ಜನಿಸಿ ಅಮೆರಿಕನ್ ನೌಕಾಪಡೆಯಲ್ಲಿ ಸೈನಿಕನಾಗಿ ಸೇರ್ಪಡೆಗೊಂಡ ಜಿಂಚಾವೊ ವೀ ಬೀಜಿಂಗ್‌ಗೆ ಮಿಲಿಟರಿ ರಹಸ್ಯ ಮಾಹಿತಿಯನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಅಲ್ಲಿನ ಪೊಲೀಸರು ಆತನನ್ನು ಬಂದಿಸಿದ್ದು, ಬೇಹುಗಾರಿಕೆ ಆರೋಪ ಮೇರೆಗೆ 200 ತಿಂಗಳ (16.6 ವರ್ಷ) ಜೈಲು ಶಿಕ್ಷೆ ವಿಧಿಸಲಾಗಿದೆ. ಆತನದ್ದೇ ಮೊದಲು ಪೌರತ್ವ ರದ್ದಾಗಲಿದೆ ಎನ್ನಲಾಗಿದೆ.

ಪೌರತ್ವ ರದ್ದು ಅಧಿಕಾರ ಬಳಸಲು ಮುಂದಾದ ಯುಎಸ್

ಮತ್ತೊಂದೆಡೆ ಸಾರ್ವಜನಿಕರ ಮೇಲಿನ ದೌರ್ಜನ್ಯ, ವಿದೇಶಿ ಸರ್ಕಾರಗಳ ಏಜೆಂಟ್‌ಗಳಾಗಿ ಕೆಲಸ ಮಾಡುವವರು ಸಿಕ್ಕಿ ಬಿದ್ದಿದ್ದಾರೆ. ಕೊಲೆಯಂತಹ ಗಂಭೀರ ಅಪರಾಧಿಗಳು ಈ ಪಟ್ಟಿಯಲ್ಲಿದ್ದಾರೆ ಎಂದು ಯುಎಸ್ ಮೂಲಗಳು ತಿಳಿಸಿವೆ. ಇದರ ಆಧಾರದಲ್ಲಿ ಮುಂದೆ ಮತ್ತಷ್ಟ ಕಠಿಣ ಕಾನೂನು ಜರುಗಿಸಲು ಚಿಂತನೆ ನಡೆದಿದೆ. ವಲಸೆ ಕಾನೂನಿನಡಿ ಯಾರೆಲ್ಲ ವಂಚಿಸಿ, ನಕಲಿ ದಾಖಲೆಗಳ ಮೂಲಕ ಪೌರತ್ವ ಪಡೆದಿದ್ದಾರೆ ಅವರ ಪೌರತ್ವವನ್ನು ರದ್ದುಗೊಳಿಸುವ ಅಧಿಕಾರ ಅಮೆರಿಕ ಸರ್ಕಾರಕ್ಕಿದೆ. ಈ ಅಧಿಕಾರನ್ನು ಯುಎಸ್ ಇದೀಗ ಬಳಸುತ್ತಿದೆ. ಅದಕ್ಕಾಗಿಯೇ ಕೋರ್ಟ್ ಮೆಟ್ಟಿಲೇರಿದೆ ಎಂದು ಸಹಾಯಕ ಅಟಾರ್ನಿ ಜನರಲ್ ಕಟುವಾಗಿ ಹೇಳಿದ್ದಾರೆ. ಇಂಥವರ ಪೌರತ್ವ ರದ್ದು ಅಭಿಯಾನ ಕ್ರಮವು ಹೀಗೆ ಮುಂದುವರಿಯಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+