ಇಸ್ರೇಲ್ ನೆಲಕ್ಕೆ ಎಂಟ್ರಿ ಕೊಡಲು ಸಿದ್ಧವಾದ ದೊಡ್ಡಣ್ಣ ಅಮೆರಿಕ ಸೇನೆ? Israel And Iran
ಇಸ್ರೇಲ್ & ಇರಾನ್ ನಡುವೆ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಹಲವು ಅಹಿತಕರ ಘಟನೆಗಳು ಕೂಡ ನಡೆಯುತ್ತಿವೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ, ಅತ್ತ ಇಸ್ರೇಲ್ ನೆಲಕ್ಕೆ ಎಂಟ್ರಿ ಕೊಡಲು ದೊಡ್ಡಣ್ಣ ಅಮೆರಿಕ ಸೇನೆ ಸಿದ್ಧವಾಯ್ತಾ? ಅನ್ನೋ ಚರ್ಚೆ ಕೂಡ ಶುರುವಾಗಿಬಿಟ್ಟಿದೆ. ಅಕಸ್ಮಾತ್ ಅಮೆರಿಕ ಈ ಯುದ್ಧಕ್ಕೆ ನೇರವಾಗಿ ಎಂಟ್ಟಿ ಕೊಟ್ಟಿದ್ದೇ ಆದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ.
ದಿಢೀರ್ ಇರಾನ್ ವಿರುದ್ಧ ಡೆಡ್ಲಿ ದಾಳಿ ಮಾಡಿ ಇಸ್ರೇಲ್ ಯುದ್ಧಕ್ಕೆ ಸನ್ನದ್ಧವಾಗಿದೆ ಅನ್ನೋ ಸಂದೇಶ ರವಾನೆ ಆಗಿತ್ತು. ಯುದ್ಧ.. ಯುದ್ಧ.. ಹೀಗೆ ಹಿಂಸೆಯ ಮಹಾಪರ್ವ ಜಗತ್ತಿನ ಮೂಲೆ ಮೂಲೆಗೂ ಹಬ್ಬುತ್ತಿದ್ದು, ಭಯ ಶುರುವಾಗಿದೆ. ಇಸ್ರೇಲ್ ಸೇನೆ ಯಾವಾಗ ಇರಾನ್ ಮೇಲೆ ಭೀಕರ ದಾಳಿ ಮಾಡಲು ಶುರು ಮಾಡಿತ್ತೋ ಆಗಲೇ ನೋಡಿ ಜಗತ್ತಿಗೆ ಹೊಸ ಭಯ ಶುರುವಾಗಿದ್ದು. ಈ ಎರಡೂ ದೇಶಗಳು ಬಡಿದಾಡಲು ನಿಂತರೆ ಎಂತಹ ಸಮಸ್ಯೆ ಆಗಬಹುದು? ಅನ್ನೋ ಊಹೆ ಮೊದಲೇ ಇತ್ತು. ಅದ್ರಲ್ಲೂ ಇರಾನ್ & ಇಸ್ರೇಲ್ ದೇಶಗಳ ಬಳಿ ಘೋರ ಘನಘೋರ ಅಸ್ತ್ರಗಳ ರಾಶಿ ಇದ್ದು, ಅಕಸ್ಮಾತ್ ಈ ಅಸ್ತ್ರಗಳನ್ನ ಬಳಕೆ ಮಾಡಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಲಿದೆ.

ಅಮೆರಿಕ ಕಡೆಯಿಂದ ಸೇನಾ ಸಹಾಯ
ಇಸ್ರೇಲ್ ಸೇನೆಗೆ ಬೆನ್ನೆಲುಬಾಗಿ ನಿಂತಿರುವ ಏಕೈಕ ದೇಶ ಅಂದ್ರೆ ಅದು ಅಮೆರಿಕ, ಹಲವು ವರ್ಷಗಳಿಂದ ಇಸ್ರೇಲ್ ಮತ್ತು ಅಮೆರಿಕ ನಡುವೆ ಇದೇ ರೀತಿಯಾಗಿ ಅತ್ಯುತ್ತಮ ಸ್ನೇಹ ಸಂಬಂಧ ಇದೆ. ಅದರಲ್ಲೂ ಇಸ್ರೇಲ್ ವಿರುದ್ಧ ಹಲವು ದೇಶಗಳು ಯುದ್ಧ ಶುರು ಮಾಡಿದ್ದಾಗ ಅಮೆರಿಕ ದೊಡ್ಡ ಸಹಾಯ ಮಾಡಿತ್ತು. ಈಗಲೂ ಇರಾನ್ ಜೊತೆಯಲ್ಲಿ ಇಸ್ರೇಲ್ ಫೈಟಿಂಗ್ ಶುರು ಆದ ನಂತರ ಅಮೆರಿಕ ಸಹಾಯಕ್ಕೆ ಬಂದಿದ್ದು, ಮಿಲಿಟರಿ ಅಸ್ತ್ರಗಳ ಜೊತೆಗೆ ಅಗತ್ಯ ಇರುವ ಎಲ್ಲಾ ಸಹಾಯ ಮಾಡುತ್ತಿದೆ. ಇಂತಹ ಸಮಯದಲ್ಲೇ ನೇರವಾಗಿ ಅಮೆರಿಕ ತನ್ನ ಸೇನೆಯನ್ನ ಇಸ್ರೇಲ್‌ಗೆ ನುಗ್ಗಿಸುತ್ತಾ? ಅನ್ನೋ ಡೌಟ್ ಈಗ ಕಾಡುತ್ತಿದೆ.












Click it and Unblock the Notifications