US Military: ಇರಾನ್ ಸಮೀಪ ಅಮೆರಿಕದ ಮಿಲಿಟರಿ ಇರುವ ಸಮಯದಲ್ಲೇ ಸಂಚಲನ ಮೂಡಿಸಿದ ಸ್ಫೋಟ
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ಬೆನ್ನಲ್ಲೇ ಭೀಕರ ಸ್ಫೋಟವೊಂದು ಇರಾನ್‌ನ ಪ್ರಜೆಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮಧ್ಯಪ್ರಾಚ್ಯ ವಿಚಾರದಲ್ಲಿ ಕಿರಿಕ್ ಹೆಚ್ಚಾದ ಕಾರಣಕ್ಕೆ ಅಮೆರಿಕ ತನ್ನ ಬೃಹತ್ ಸೇನೆಯನ್ನು ಇರಾನ್ ಕಡೆಗೆ ಕಳುಹಿಸಿತ್ತು. ಹೀಗೆ ಬಂದಿರುವ ಅಮೆರಿಕ ಸೇನೆಯ ದೊಡ್ಡ ದೊಡ್ಡ ನೌಕೆಗಳು ಇರಾನ್ ಜಲ ಗಡಿಯಲ್ಲಿ ನಿಂತಿವೆ. ಯಾವುದೇ ಕ್ಷಣದಲ್ಲಿ, ಇರಾನ್ ಮತ್ತು ಅಮೆರಿಕ ಯುದ್ಧ ಶುರು ಮಾಡಬಹುದು ಎಂಬ ಆತಂಕ ಮನೆಮಾಡಿದೆ. ಹೀಗೆ ಇದ್ದಾಗ ದಿಢೀರ್ ಇರಾನ್‌ನ ಬಂದರು ಪ್ರದೇಶದಲ್ಲೇ ಸ್ಫೋಟವೊಂದು ಸಂಭವಿಸಿ, ಭಯ ಹೆಚ್ಚು ಮಾಡಿದೆ.
ದಕ್ಷಿಣ ಇರಾನ್ ಭಾಗದ ಬಂದರ್ ಅಬ್ಬಾಸ್ ಪ್ರದೇಶದಲ್ಲಿ ಇದೀಗ ಭೀಕರ ಸ್ಫೋಟವು ಸಂಭಿಸಿದ್ದು, ಕೆಲವು ಕಾಲ ಗೊಂದಲಮಯ ವಾತಾವರಣ ನಿರ್ಮಾಣ ಆಗಿತ್ತು. ಆದ್ರೆ ಅನಿಲ ಸೋರಿಕೆಯಿಂದ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದ್ದು, ಸ್ಥಳೀಯ ಅಗ್ನಿಶಾಮಕ ದಳದ ಮುಖ್ಯಸ್ಥರ ಹೇಳಿಕೆ ಉಲ್ಲೇಖಿಸಿ ಇರಾನ್ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡಿವೆ. ಈ ಸ್ಫೋಟದ ಭೀಕರತೆ ಹೇಗಿತ್ತು ಎಂದರೆ, ಒಬ್ಬರು ಮೃತಪಟ್ಟು & 14 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟ್ಟಡ ಕೂಡ ಸ್ಫೋಟದ ತೀವ್ರತೆಗೆ ತೀವ್ರ ಹಾನಿಗೀಡಾಗಿದ್ದು, ಅಮೆರಿಕ ಸೇನೆ ತಮ್ಮ ಪಕ್ಕದಲ್ಲೇ ಇರುವ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ಸಹಜವಾಗಿ ಇರಾನ್ ಜನರಲ್ಲಿ ಯುದ್ಧದ ಭಯ ಹೆಚ್ಚಿಸಿದೆ.

ಸ್ಫೋಟದ ಬಗ್ಗೆ ತನಿಖೆ ಆರಂಭ
ಇರಾನ್ ದೇಶದ ಪ್ರಮುಖ ಕಂಟೇನರ್ ಬಂದರಿನ ನೆಲೆ ಆಗಿರುವ, ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟ ಸಂಭವಿಸಿದೆ. ತಕ್ಷಣ ಈ ಸ್ಫೋಟಕ್ಕೆ ನಿಖರ ಕಾರಣ ತಿಳಿಯದೇ ಇದ್ದರೂ, ನಂತರ ಅನಿಲ ಸ್ಫೋಟ ಈ ಘಟನೆಗೆ ಕಾರಣ ಎನ್ನಲಾಯ್ತು. ಬಂದರ್ ಅಬ್ಬಾಸ್ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಲು ಕಾರಣ ಈ ಭಾಗದ ಜಲಮಾರ್ಗ. ಇದು ವಿಶ್ವದ ಸಮುದ್ರ ಮಾರ್ಗದ ತೈಲ ವ್ಯಾಪಾರದ 5ನೇ ಒಂದು ಭಾಗ ನಿರ್ವಹಿಸುವ ಇರಾನ್ & ಓಮನ್ ನಡುವಿನ ಪ್ರಮುಖ ಹಡಗು ಮಾರ್ಗವಾಗಿದೆ. ಕಳೆದ ವರ್ಷ ಇದೇ ಬಂದರ್ ಅಬ್ಬಾಸ್ ಭಾಗದಲ್ಲಿ ಭೀಕರ ಸ್ಫೋಟ ಸಂಭವಿಸಿ ದೊಡ್ಡ ಹಾನಿಗೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ಆರಂಭ ಆಗಿದೆ.
ಅಮೆರಿಕ ಜೊತೆಗೆ ಇರಾನ್ ಮಾತುಕತೆ?
ಒಂದು ಕಡೆ ಬಂದರ್ ಅಬ್ಬಾಸ್ ಭಾಗದಲ್ಲಿ ಸ್ಫೋಟ ಸಂಭವಿಸಿದ್ದರೆ, ಇನ್ನೊಂದು ಕಡೆ ಇರಾನ್ ಮತ್ತು ಅಮೆರಿಕ ನಡುವೆ ಶೀಘ್ರದಲ್ಲೇ ಶಾಂತಿ ಮಾತುಕತೆ ನಡೆಯಲಿದೆ ಎಂಬ ಸುದ್ದಿಯು ಹಬ್ಬಿದೆ. ಇರಾನ್ ನಾಯಕರನ್ನು ಹೇಗಾದರೂ ಮಾಡಿ ತಮ್ಮ ದಾರಿಗೆ ತರಬೇಕು ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಮಾಸ್ಟರ್ ಪ್ಲಾನ್. ಇದೇ ಕಾರಣಕ್ಕೆ ತೆಹ್ರಾನ್ ವಿಚಾರವಾಗಿ ಮಾತನಾಡುತ್ತಾ, ಈ ಸಮಯದಲ್ಲೇ ವೆನಿಜುವೆಲಾದ ಅಧ್ಯಕ್ಷನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್.
ಇರಾನ್ ಬಳಿ ಇರುವ ಅಮೆರಿಕ ನೌಕಾಪಡೆ ನೌಕೆಗಳು ಮತ್ತು ಯುದ್ಧ ವಿಮಾನಗಳು ವೆನೆಜುವೆಲಾ ನಾಯಕನ ವಿರುದ್ಧ ಅಮೆರಿಕ ನಡೆಸಿದ ಕಾರ್ಯಾಚರಣೆಗಿಂತ ದೊಡ್ಡದಾಗಿದೆ. ಹೀಗಾಗಿ ಇರಾನ್ ನಮ್ಮ ಜೊತೆ ಶಾಂತಿ ಒಪ್ಪಂದ ನಡೆಸಲು ಮಾತುಕತೆಗೆ ಸಿದ್ಧವಾಗಿದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು. ಇದು ಭಾರಿ ಕುತೂಹಲ ಕೆರಳಿಸಿದ್ದು, ಆದಷ್ಟು ಬೇಗ ಈ ತಿಕ್ಕಾಟ ನಿಲ್ಲುವ ಬಗ್ಗೆ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications