Get Updates
Get notified of breaking news, exclusive insights, and must-see stories!

ಇವಾಂಕಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದೆ ಅಮೆರಿಕ ಮಾಧ್ಯಮ!

Recommended Video

      ಇವಾಂಕಾ ಟ್ರಂಪ್ ರನ್ನ ಹಿಗ್ಗಾ ಮುಗ್ಗಾ ಥಳಿಸುತ್ತಿದೆ ಅಮೇರಿಕಾ ಮಾಧ್ಯಮ | Oneindia Kannada

      ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯಲ್ಲಿ ಭಾಗವಹಿಸುವುದಕ್ಕಾಗಿ ಹೈದರಾಬಾದಿಗೆ ಬಂದಿರುವ ಇವಾಂಕಾ ಟ್ರಂಪ್, ಈಗಾಗಲೇ ಭಾರತದಾದ್ಯಂತ ತಮ್ಮ ಹವಾ ಸೃಷ್ಟಿಸಿದ್ದಾರೆ. ಭಾರತೀಯ ಮಾಧ್ಯಮಗಳಂತೂ ಗ್ಲಾಮರ್ ಬೊಂಬೆ ಇವಾಂಕಾರಿಗೆ ನಿನ್ನೆ(ನ.28)ಯಿಡೀ ಸಾಕಷ್ಟು ಪ್ರಚಾರ ನೀಡಿವೆ.

      ಗ್ಯಾಲರಿ : ಮುತ್ತಿನನಗರಿಯಲ್ಲಿ ಟ್ರಂಪ್ ಪುತ್ರಿ ಇವಾಂಕಾ

      ಆದರೆ ಅಮೆರಿಕ ಮಾದ್ಯಮಗಳು ಮಾತ್ರ ಇವಾಂಕಾ ಭಾರತ ಭೇಟಿಯನ್ನು ಋಣಾತ್ಮಕವಾಗಿ ಚಿತ್ರಿಸುತ್ತಿವೆಯೇ? ದೊಡ್ಡಣ್ಣನ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬಕ್ಕೆ ಈ ಚೆಂದುಳ್ಳಿ ಚೆಲುವೆ ಮೇಲೆ ಮುನಿಸಾದರೂ ಯಾಕೆ?

      ಅಮೆರಿಕ ಮಾಧ್ಯಮಗಳು ಇವಾಂಕಾ ಭಾರತ ಭೇಟಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದಕ್ಕೆ ಕಾರಣವಿದೆ. ಹಾಗೆ ನೋಡುವುದಕ್ಕೆ ಹೋದರೆ ಅಲ್ಲಿನ ಮಾಧ್ಯಮಗಳ ಅಭಿಪ್ರಾಯವನ್ನು ಅಲ್ಲಗಳೆಯುವಂತೆಯೂ ಇಲ್ಲ. ಏಕೆಂದರೆ ಜಾಗತಿಕ ವೇದಿಕೆಯೊಂದರಲ್ಲಿ ನೂರಾರು ದೇಶಗಳ ಜೊತೆ, ಅಮೆರಿಕದಂಥ ದೈತ್ಯ ರಾಷ್ಟ್ರದ ಪ್ರತಿನಿಧಿಯನ್ನಾಗಿ ಕೇವಲ ಅಧ್ಯಕ್ಷರ ಸಲಹೆಗಾರರನ್ನು ಕಳಿಸುವುದು ಸರಿಯೇ? ಇದರಿಂದ ಅಮೆರಿಕದ ಮರ್ಯಾದೆ ಏನಾದೀತು ಎಂಬ ಪ್ರಶ್ನೆಯನ್ನು ತಪ್ಪು ಎನ್ನುವುದು ಹೇಗೆ?

      ಇವಾಂಕಾ ಪ್ರತಿನಿಧಿತ್ವ ಸಮಂಜಸವೇ..?

      ಇವಾಂಕಾ ಪ್ರತಿನಿಧಿತ್ವ ಸಮಂಜಸವೇ..?

      ಅಮೆರಿಕ ಮಾಧ್ಯಮಗಳು ಇವಾಂಕಾ ಭೇಟಿಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಿವೆ. ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಕಾಲದಲ್ಲಿ ಈ ಸಮ್ಮೇಳನದಲ್ಲಿ ಸ್ವತಃ ಭಾಗವಹಿಸಿ, ಈ ವೇದಿಕೆಯ ಗಾಂಭೀರ್ಯವನ್ನು ಅರ್ಥ ಮಾಡಿಸಿದ್ದರು. ಆದರೆ ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಎಂಬ ಕಾರಣಕ್ಕೆ ಯಾವ ಪ್ರಭಾವೀ ಔಪಚಾರಿಕ ಹುದ್ದೆಯನ್ನೂ ಹೊಂದಿಲ್ಲದ ಇವಾಂಕಾರನ್ನು ಈ ಸಮ್ಮೇಳನಕ್ಕೆ ಕಳಿಸಿದ್ದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಪ್ರಶ್ನೆ.

      ಮಹಿಳಾ ಸಬಲೀಕರಣ ಎಂಬುದು ನಾಟಕವೇ..?!

      ಮಹಿಳಾ ಸಬಲೀಕರಣ ಎಂಬುದು ನಾಟಕವೇ..?!

      ಮಹಿಳಾ ಸಬಲೀಕರಣ, ಕಾರ್ಮಿಕರ ಹಿತಾಸಕ್ತಿ ಎಂದೆಲ್ಲ ಬೊಬ್ಬೆಯಿಡುವ ಇವಾಂಕಾ ತಮ್ಮದೇ ಬಟ್ಟೆ ಕಾರ್ಖಾನೆಯಲ್ಲಿ ಎಷ್ಟು ಕಡಿಮೆ ಕೂಲಿಗೆ, ಮಹಿಳೆಯರನ್ನೂ, ಭಾರತೀಯ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತೆ? ಹೋದಲ್ಲೆಲ್ಲ ಅವರು ತಮ್ಮ ಆಭರಣ ಮತ್ತು ಬಟ್ಟೆ ಕಂಪೆನಿಗಳ ಪ್ರಚಾರ ಮಾಡುವುದಲ್ಲದೆ ಇನ್ನೇನು ಮಾಡುತ್ತಾರೆ? ಎಂದು ಮಾಧ್ಯಮಗಳು ಖಾರವಾಗಿ ಪ್ರಶ್ನಿಸಿವೆ!

      ಭಾರತವನ್ನೂ ವ್ಯಂಗ್ಯವಾಗಿ ಚಿತ್ರಿಸಿವೆಯಾ?

      ಭಾರತವನ್ನೂ ವ್ಯಂಗ್ಯವಾಗಿ ಚಿತ್ರಿಸಿವೆಯಾ?

      ಕೇವಲ ಇವಾಂಕಾ ಟ್ರಂಪ್ ರನ್ನು ಮಾತ್ರವಲ್ಲ, ಭಾರತವನ್ನೂ ಅಮೆರಿಕ ಮಾಧ್ಯಮಗಳು ಪರೋಕ್ಷವಾಗಿ ವ್ಯಂಗ್ಯವಾಡಿವೆ. ಇವಾಂಕಾ ಟ್ರಂಪ್ ಬರುತ್ತಾರೆಂದು ಭಾರತದ ರಸ್ತೆಗಳನ್ನು ಗುಡಿಸಿ, ಭಿಕ್ಷುಕರು ಮತ್ತು ಬೀದಿನಾಯಿಗಳಿಂದ ಮುಕ್ತಗೊಳಿಸಲಾಗಿದೆ. ಒಟ್ಟಿನಲ್ಲಿ ಇವಾಂಕಾ ಆಗಮನವನ್ನು ಭಾರತ 'ರಾಯಲ್ ವಿಸಿಟ್' ಎಂಬಂತೇ ನೋಡಿದೆ ಎಂದು ಇಲ್ಲಿ ವೆಬ್ ಸೈಟ್ ವೊಂದು ಬರೆದಿದೆ!

      ಪ್ರಚಾರ ಪ್ರಿಯರೇ ಇವಾಂಕಾ?

      ಪ್ರಚಾರ ಪ್ರಿಯರೇ ಇವಾಂಕಾ?

      ಮಹಿಳಾ ರಕ್ಷಣೆ, ಕಾರ್ಮಿಕರ ಸಮಸ್ಯೆ, ಮಕ್ಕಳ ಹಕ್ಕು ಇತ್ಯಾದಿ ಹೋರಾಟಗಳು ಬಂದಾಗ ಎಲ್ಲಿಯೂ ಇವಾಂಕಾ ಸಮರ್ಥ ನಾಯಕತ್ವವಹಿಸಿಲ್ಲ. ಆದರೆ ಅವರಿಗೆ ಈ ಎಲ್ಲ ವಿಷಯಗಳೂ ಜನಪ್ರಿಯತೆಗೋಸ್ಕರ ಮಾತ್ರವೇ ಬೇಕಾಗಿದೆ ಎಂದೂ ಮಾಧ್ಯಮಗಳು ಹೀಗಳೆದಿವೆ! ಅವರೊಬ್ಬ ಉದ್ಯಮಿಯಾಗಲ್ಲರೇ ಹೊರತು, ಜನನಾಯಕಿಯಾಗಲಾರರು ಎಂಬರ್ಥದಲ್ಲಿ ಮಾಧ್ಯಮಗಳು ಅವರ ನಡೆಯನ್ನು ಚಿತ್ರಿಸಿವೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+